ಬೆಂಗಳೂರು : ನಟಿ ಸ್ವರಾ ಭಾಸ್ಕರ್ (Swara Bhaskar) ರಾಜಕೀಯ ಕಾರ್ಯಕರ್ತ ಹಾಗೂ ಸಮಾಜವಾದಿ ಪಕ್ಷದ ಯುವ ನಾಯಕ ಫಹಾದ್ ಅಹ್ಮದ್ ಅವರೊಂದಿಗೆ ವಿವಾಹವಾಗಿದ್ದಾರೆ. ಇದೀಗ ಮತ್ತೊಂದು ಮದುವೆ ಸಂಭ್ರಮಕ್ಕೆ ಸ್ವರಾ ಕುಟುಂಬ ಸಜ್ಜಾಗಿದೆ. ಫೆ.16ರಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ತಮ್ಮ ಮೊದಲ ರಾತ್ರಿಯ ಬೆಡ್‌ರೂಮ್ ಶೃಂಗಾರದ ಫೋಟೊವನ್ನು ನಟಿ ಹಂಚಿಕೊಂಡು ಟ್ರೋಲ್‌ಗೆ ಗುರಿಯಾದರು. ಇದೀಗ ಮತ್ತೆ ಮದುವೆಯಾಗುವುದರ ಮೂಲಕ ಸುದ್ದಿಯಲ್ಲಿದ್ದಾರೆ.
ʻʻಸ್ವರಾ ಭಾಸ್ಕರ್ ಅವರ ಮದುವೆ ಕುರಿತಾಗಿ ಅವರ ಜೀವನ ಮತ್ತು ವೃತ್ತಿ ಆಯ್ಕೆಗಳಲ್ಲಿ ಯಾವಾಗಲೂ ಪೋಷಕರಿಂದ ಬೆಂಬಲವನ್ನು ಪಡೆಯುತ್ತಲೇ ಬಂದಿದ್ದಾರೆ. ಅವರ ಮೇಲೆ ಪೋಷಕರು ಎಂದಿಗೂ ನಿರ್ಬಂಧಗಳನ್ನು ಹಾಕಿಲ್ಲʼʼ ಎಂದು ವರದಿಯಾಗಿದೆ. ಮುಂದಿನ ವಾರ ದೆಹಲಿಯಲ್ಲಿ ನವದಂಪತಿ ವಿವಾಹ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇದೇ 15 ಮತ್ತು 16 ರಂದು ದೆಹಲಿಯಲ್ಲಿ ಎರಡು ದಿನಗಳ ಸಂಭ್ರಮಾಚರಣೆಗೆ ಅವರು ಸಜ್ಜಾಗಿದ್ದಾರೆ. ಪ್ರತೀಕ್ ವಿನ್ಯಾಸಗೊಳಿಸಿದ ಮತ್ತು ಅನುಪಮ್ ಅರುಣಾಚಲಂ ಅವರು ಚಿತ್ರಿಸಿದ ಕಲಾಕೃತಿಯ ಕಾರ್ಡ್ ಈಗ ವೈರಲ್ ಆಗಿದೆ. ಇರಾ ಮತ್ತು ಚಿತ್ರಪು ಉದಯ್ ಭಾಸ್ಕರ್ ಅವರು ತಮ್ಮ ಮಗಳು ಸ್ವರಾ ಮತ್ತು ಅಳಿಯ ಫಹಾದ್ ಅಹ್ಮದ್ ಅವರನ್ನು ಅಭಿನಂದಿಸುತ್ತಿದ್ದು, ನಿಮ್ಮ ಉಪಸ್ಥಿತಿ ಬಯಸುತ್ತದೆ’ ಎಂದು ಇನ್ವಿಟೇಶನ್ ಕಾರ್ಡ್ನಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Swara Bhaskar: ಮೊದಲ ರಾತ್ರಿಯ ಬೆಡ್‌ರೂಮ್ ಅಲಂಕಾರದ ಫೋಟೊ ಹಂಚಿಕೊಂಡ ಸ್ವರಾ ಭಾಸ್ಕರ್!
ನಟಿ ಈ ಹಿಂದೆ ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾದ ಫೋಟೊಗಳನ್ನು ಹಂಚಿಕೊಂಡಿದ್ದರು. ಹಾಗೇಯೇ ನ್ಯಾಯಾಲಯದ ಮುಂದೆ ವಿವಾಹವಾದ ನಂತರ ಡ್ಯಾನ್ಸ್ ಮಾಡುತ್ತಿರುವ ವಿಡಿಯೊ ಹಾಗೂ ಫೋಟೊಗಳನ್ನು ಜೋಡಿ ಶೇರ್ ಮಾಡಿಕೊಂಡಿದೆ. ಫಹಾದ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ಬಯೋ ಪ್ರಕಾರ ಸಮಾಜವಾದಿ ಪಕ್ಷದ ಯುವ ಘಟಕದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದಾರೆ.