ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಟಾಲಿನ್ ಅವರಲ್ಲಿ ಜುಲೈ 12ರಂದು ಕೊವಿಡ್ 19 ಸೋಂಕು ದೃಢಪಟ್ಟಿತ್ತು. ಮನೆಯಲ್ಲೇ ಕ್ವಾರಂಟೈನ್ ಆಗಿದ್ದ ಅವರು ಇಂದು ಹೆಚ್ಚಿನ ಚಿಕಿತ್ಸೆ ಮತ್ತು ತಪಾಸಣೆಗಾಗಿ ಚೆನ್ನೈ ಆಳ್ವಾರ್‌ಪೇಟ್‌ನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆ ವರದಿ ನೀಡಿದೆ.
ಸ್ಟಾಲಿನ್‌ರಲ್ಲಿ ಕೊವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಪತ್ರವೊಂದನ್ನು ಬರೆದು ಶೀಘ್ರವೇ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ʼನೀವೊಬ್ಬ ಡೈನಾಮಿಕ್ ನಾಯಕ. ಸದಾ ಸಾರ್ವಜನಿಕರೊಂದಿಗೆ ಬೆರೆಯುತ್ತೀರಿ. ಇದೇ ಕಾರಣಕ್ಕೆ ಕೊರೊನಾ ಸೋಂಕು ಕೂಡ ತಗುಲಿದೆ. ನಿಮ್ಮ ಆರೋಗ್ಯ ಬೇಗ ಸುಧಾರಿಸಲಿʼ ಎಂದು ಹಾರೈಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಟ್ವೀಟ್ ಮಾಡಿ, ಎಂ.ಕೆ.ಸ್ಟಾಲಿನ್ ಅವರ ಆರೋಗ್ಯ ಬೇಗ ಸುಧಾರಿಸಿ, ಮತ್ತೆ ಶೀಘ್ರವೇ ಅವರು ಸಾರ್ವಜನಿಕರ ಸೇವೆಗೆ ಮರಳುವಂತಾಗಲಿ ಎಂದಿದ್ದಾರೆ. ಪುದುಚೇರಿ ಸಿಎಂ ಎನ್.ರಂಗಸ್ವಾಮಿ ಕೂಡ ಸ್ಟಾಲಿನ್ ಆರೋಗ್ಯ ಚೇತರಿಕೆಗೆ ಹಾರೈಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಪ್ರತ್ಯೇಕ ರಾಷ್ಟ್ರದ ಪ್ರಸ್ತಾಪ ಮಾಡಿ ವಿವಾದ ಎಬ್ಬಿಸಿದ ಡಿಎಂಕೆ ನಾಯಕ