ಫರೀದಾಬಾದ್, ಹರ್ಯಾಣ: ಅನಾರೋಗ್ಯಪೀಡಿತವಾಗಿದ್ದರೂ ಒತ್ತಾಯಪೂರ್ವಕ ಶಾಲಾ ಪರೀಕ್ಷೆಗೆ ಹಾಜರಾಗಿದ್ದ ಏಳನೇ ತರಗತಿ ಬಾಲಕಿ ಮೃತಪಟ್ಟ ಘಟನೆ ಜುಲೈ 13ರಂದು ಹರ್ಯಾಣದ ಫರೀದಾಬಾದ್‌ನಲ್ಲಿ ನಡೆದಿದೆ(School Girl Dies). ಬಾಲಕಿ ಅನಾರೋಗ್ಯಪೀಡಿತವಾಗಿರುವ ವಿಷಯವನ್ನು ಶಾಲಾ ಆಡಳಿತ ಮಂಡಳಿಯು ಪೋಷಕರಿಗೆ ತಿಳಿಸಿರಲಿಲ್ಲ. ಆದರೆ, ತನ್ನ ಅನಾರೋಗ್ಯದ ಬಗ್ಗೆ ಬಾಲಕಿ ಕ್ಲಾಸ್ ಟೀಚರ್‌ಗೆ ತಿಳಿಸಿದ್ದಳು ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.
ಮೃತ ಬಾಲಕಿಯನ್ನು 11 ವರ್ಷದ ಆರಾಧ್ಯ ಖಂಡೇಲವಾಲಾ ಎಂದು ಗುರುತಿಸಲಾಗಿದೆ. ಈ ಬಾಲಕಿ ಫರೀದಾಬಾದ್‌ನ ಸಿಬಿಎಸ್ಇ ಸ್ಕೂಲ್‌ನಲ್ಲಿ 7ನೇ ತರಗತಿ ಓದುತ್ತಿದ್ದಳು. ಆರಾಧ್ಯಳ ಸ್ನೇಹಿತಯ ತಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, “ನನ್ನ ಮಗಳು ಆರಾಧ್ಯಳ ಆತ್ಮೀಯ ಸ್ನೇಹಿತೆಯಾಗಿದ್ದಳು. ತನಗೆ ವಾಕರಿಕೆ ಬರುತ್ತಿದೆ ಎಂದು ಹುಡುಗಿ ತನ್ನ ತರಗತಿಯ ಶಿಕ್ಷಕರಿಗೆ ತಿಳಿಸಿದಾಗ, ಅವಳನ್ನು ವಾಶ್‌ರೂಮ್‌ಗೆ ಹೋಗಲು ತಿಳಿಸಲಾಯಿತು ಎಂದು ಅವಳು ನನಗೆ ಹೇಳಿದಳು. ನಂತರ ಆರಾಧ್ಯ ಅನಾರೋಗ್ಯವಾಗಿದ್ದರೂ ಆಕೆಗೆ ಪರೀಕ್ಷೆಗೆ ಬರೆಯುವಂತೆ ತಿಳಿಸಲಾಯಿತು” ಎಂದು ಹೇಳಿದರು.
ಆರಾಧ್ಯಾಳ ತಂದೆ ಅಭಿಲಾಷ್ ಖಂಡೇಲ್ವಾಲ್ ಅವರು ಮಾತನಾಡಿ, ಸ್ನೇಹಿತೆ ತಿಳಿಸಿದಾಗಲೇ ನಮಗೆ ಮಗಳಿಗೆ ಆರೋಗ್ಯ ಚೆನ್ನಾಗಿಲ್ಲ ಎಂದು ಅರಿವಾಯಿತು. ಶಾಲೆಯಲ್ಲಿ ಏನಾಯಿತು ಎಂದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Road Accident: ಬೈಕ್‌ಗೆ ಲಾರಿ ಡಿಕ್ಕಿಯಾಗಿ ಶಾಲಾ ಬಾಲಕಿ ಸ್ಥಳದಲ್ಲೇ ಸಾವು
ಬಳಿಕ ಫ್ಯಾಮಿಲಿ ಡಾಕ್ಟರ್ ಬಳಿಕ ಆರಾಧ್ಯಳಿಗೆ ಪರೀಕ್ಷಿಸಲಾಗಿದೆ. ಆಕೆಯ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡು ಬಂದಿದೆ. ಜುಲೈ 14 ರ ಬೆಳಿಗ್ಗೆ ಮತ್ತೆ ಆರಾಧ್ಯ ಅನಾರೋಗ್ಯಪೀಡಿತಳಾಗಿದ್ದಾಳೆ. ಮತ್ತೆ ವಾಂತಿ ಮಾಡಲಾರಂಭಿಸಿದ್ದಾಳೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರ ಪ್ರಯತ್ನದ ಹೊರತಾಗಿಯೂ, ಬಾಲಕಿ ಮೃತಪಟ್ಟಿದ್ದಾಳೆ. ಜುಲೈ 13ರಂದೇ ಆಕೆಗೆ ಅನಾರೋಗ್ಯಪೀಡಿತಳಾಗಿದ್ದಾಳೆಂದು ಶಾಲೆ ಮಂಡಳಿ ತಿಳಿಸಿದ್ದರೆ ಆಕೆಗೆ ಬೇಗನೆ ಚಿಕಿತ್ಸೆ ಕೊಡಿಸಬಹುದಾಗಿತ್ತು ಎಂದು ಪೋಷಕರು ಆರೋಪಿಸಿದ್ದಾರೆ. ಶಾಲಾ ಮಂಡಳಿ ನಿರ್ಲಕ್ಷ್ಯದಿಂದಾಗಿ ತಮ್ಮ ಮಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಆರೋಪಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.