ನವದೆಹಲಿ: ಹಿಮಾಚಲ ಪ್ರದೇಶದ ಪಾರ್ವಾನೂ ಎಂಬಲ್ಲಿನ ಟಿಂಬರ್ ಟ್ರೇಲ್‌ನಲ್ಲಿ ಕೇಬಲ್ ಕಾರ್‌ವೊಂದು ರೋಪ್ ವೇ (Timber Trail Ropeway) ಮಾರ್ಗಮಧ್ಯದಲ್ಲಿ ಕೆಟ್ಟುನಿಂತಿದೆ. ಅದರಲ್ಲಿ ಸುಮಾರು 11 ಪ್ರಯಾಣಿಕರು ಸಿಲುಕಿದ್ದಾರೆ. ಈ ಕೇಬಲ್ ಕಾರಿನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಅರ್ಧ ದಾರಿಗೆ ಬರುವಷ್ಟರಲ್ಲಿ ನಿಂತಿದೆ. ಪ್ರಯಾಣಿಕರ ರಕ್ಷಣೆಗಾಗಿ ಇನ್ನೊಂದು ಟ್ರೋಲಿಯನ್ನು ನಿಯೋಜಿಸಲಾಗಿದೆ. ಸ್ಥಳಕ್ಕೆ ಪೊಲೀಸರು ತೆರಳಿದ್ದು, ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗುತ್ತಿದೆ. ಹಾಳಾದ ಕೇಬಲ್ ಕಾರ್ ದುರಸ್ತಿ ಮಾಡಲು ತಂತ್ರಜ್ಞರೂ ಕೂಡ ಅಲ್ಲಿಗೆ ಆಗಮಿಸಿದ್ದಾರೆ. ಇನ್ನು ಈ ಕೇಬಲ್ ಕಾರ್‌ನಲ್ಲಿ ಇರುವವರಲ್ಲಿ ಬಹುತೇಕರು ದೆಹಲಿಯ ಪ್ರವಾಸಿಗರೇ ಆಗಿದ್ದಾರೆ ಎಂದು ಹೇಳಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಜಾರ್ಖಂಡ್‌ನ ದಿಯೋಘಡ್ ಜಿಲ್ಲೆಯ ತ್ರಿಕೂಟ್ ಬೆಟ್ಟದ ಮೇಲೆ ಎರಡು ಕೇಬಲ್ ಕಾರ್‌ಗಳು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದರು. 50ಕ್ಕೂ ಹೆಚ್ಚು ಪ್ರಯಾಣಿಕರು ಸುಮಾರು 40 ತಾಸುಗಳ ಕಾಲ ಅಲ್ಲೇ ಸಿಲುಕಿದ್ದರು. ಭಾರತೀಯ ವಾಯುಪಡೆಯ ವಿಮಾನಗಳ ಸಹಾಯದಿಂದ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿತ್ತು. ಹೀಗೆ ಎರಡು ಕೇಬಲ್ ಕಾರುಗಳು ಡಿಕ್ಕಿಯಾಗಲು ತಾಂತ್ರಿಕ ದೋಷವೇ ಕಾರಣ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ವಿಸ್ತಾರ Explainer: ವಿದ್ಯುತ್ ಘಟಕಗಳಲ್ಲಿ ಇನ್ನು 9 ದಿನಗಳಿಗೆ ಮಾತ್ರ ಕಲ್ಲಿದ್ದಲು ಲಭ್ಯ, ಆಮದಿಗೆ ಕೇಂದ್ರ ಸೂಚನೆ