ಬೆಂಗಳೂರು : ಗಣರಾಜ್ಯೋತ್ಸವ ರಜೆ ಹಾಗೂ ಕಚೇರಿ ಕೆಲಸದ ಹಿನ್ನೆಲೆ ಬೆಂಗಳೂರು ವಿಮಾನ ನಿಲ್ದಾಣದ (Bengaluru airport) ಮೂಲಕ ಜಗತ್ತಿನ ಮೂಲೆಮೂಲೆಗೆ ಪ್ರಯಾಣ ಬೆಳೆಸಲು ಮುಂದಾಗಿದ್ದ ಪ್ರಯಾಣಿಕರಿಗೆ ಗುರುವಾರ (ಜನವರಿ 26) ಭಾರಿ ಸಮಸ್ಯೆ ಉಂಟಾಯಿತು. ಸೆಲ್ಫ್ ಚೆಕ್ಇನ್ (self-check-in) ಪ್ರಕ್ರಿಯೆಯಲ್ಲಿ ತೊಂದರೆ ಉಂಟಾದ ಕಾರಣ ಪ್ರಯಾಣಿಕರು ಮ್ಯಾನುಯಲ್ ಚೆಕ್ಇನ್ ಪ್ರಕ್ರಿಯೆಗೆ ಒಳಪಡಬೇಕಾಯಿತು. ಸುದೀರ್ಘ ಸರತಿ ಸಾಲಿನಲ್ಲಿ ನಿಂತ ಪ್ರಯಾಣಿಕರು ಬವಣೆ ಪಡುವಂತಾಯಿತು.
ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಗೊನೌ ಆ್ಯಪ್ (GoNow app) ಮೂಲಕ ಸೆಲ್ಫ್ ಚೆಕ್ಇನ್, ಬೋರ್ಡಿಂಗ್ ಪಾಸ್ (boarding passes) ಪ್ರಿಂಟ್ ಹಾಗೂ ಸೆಲ್ಫ್ ಟ್ಯಾಗಿಂಗ್ ಮಾಡಬಹುದು. ಈ ಸೇವೆಯಲ್ಲಿ ಗುರುವಾರ ಸಮಸ್ಯೆ ಉಂಟಾಯಿತು. ಇದರಿಂದಾಗಿ ಪ್ರಯಾಣಿಕರು ಆಯಾಯ ಏರ್ಲೈನ್ಸ್ನ ಹೆಲ್ಫ್ ಡೆಸ್ಕ್ ಮೂಲಕ ಬೋರ್ಡಿಂಗ್ ಪಾಸ್ ಪಡೆಯಬೇಕಾಯಿತು.
ತಮಗೆದುರಾದ ತೊಂದರೆ ಬಗ್ಗೆ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳ ಮೂಲಕ ಬೇಸರ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಇನ್ನೂ ಕೆಲವರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿ ಬಂದ ಕಾರಣ ವಿಮಾನಗಳು ತಪ್ಪಿ ಹೋಗಿವೆ ಎಂದ ದೂರು ಹೇಳಿದರು.
ಇದನ್ನೂ ಓದಿ : ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ದಸರಾ ಡ್ಯಾನ್ಸ್, ಪ್ರಯಾಣಿಕರಿಗೆ ಮಸ್ತ್ ಮನರಂಜನೆ!
ಇನ್ನೊಬ್ಬರು ಬೆಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯೇ ಸರಿ ಇಲ್ಲ. ಗಂಟೆಗಟ್ಟಲೆ ಕಾಯುವಂತಾದ ಕಾರಣ ವಿಮಾನ ತಪ್ಪಿ ಹೋಯಿತು. ಆದರೆ, ಅಲ್ಲಿನ ಸಿಬ್ಬಂದಿಗೆ ಯಾವುದೇ ಕಾಳಜಿ ಇಲ್ಲ ಎಂದು ಬರೆದುಕೊಂಡಿದ್ದಾರೆ.