Site icon Vistara News

Bhai Bhatijavaad | ಮೋದಿ ʼಪರಿವಾರವಾದʼ ಟೀಕೆ ಬೆನ್ನಲ್ಲೇ ತೇಜ್‌ ಪ್ರತಾಪ್‌ ಯಾದವ್‌ ಸಭೆಯಲ್ಲಿ ಅವರ ಬಾವ ಭಾಗಿ!

Tej Pratap Yadav

ಪಟನಾ: ಭ್ರಷ್ಟಾಚಾರ ಹಾಗೂ ಪರಿವಾರವಾದವು (Bhai Bhatijavaad) ದೇಶ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸ್ವಾತಂತ್ರ್ಯೋವದ ಭಾಷಣದಲ್ಲಿ ಪ್ರಸ್ತಾಪಿಸಿದ ಬೆನ್ನಲ್ಲೇ ಬಿಹಾರದಲ್ಲಿ ಇಂಥದ್ದೇ ಘಟನೆ ನಡೆದಿದೆ. ಇತ್ತೀಚೆಗಷ್ಟೇ ರಚನೆಯಾದ ಆರ್‌ಜೆಡಿ-ಜೆಡಿಯು ಮೈತ್ರಿ ಸರಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಲಾಲೂ ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ (Tej Pratap Yadav) ಅವರು ನಡೆಸಿದ ಸಭೆಯಲ್ಲಿ ಅವರ ಬಾವನೂ ಭಾಗಿಯಾಗಿದ್ದು, ಪ್ರತಿಪಕ್ಷಗಳು ಟೀಕಿಸಿವೆ.

ಅರಣ್ಯ ಹಾಗೂ ಪರಿಸರ ಖಾತೆ ಸಚಿವರಾಗಿರುವ ತೇಜ್‌ ಪ್ರತಾಪ್‌ ಯಾದವ್‌ ಅವರು ಇತ್ತೀಚೆಗೆ ತಮ್ಮ ಖಾತೆಗೆ ಸಂಬಂಧಿಸಿದ ಇಲಾಖೆ ಪ್ರಧಾನ ಕಾರ್ಯದರ್ಶಿ ಜತೆ ಸಭೆ ನಡೆಸಿದ್ದು, ಇದರಲ್ಲಿ ತೇಜ್‌ ಪ್ರತಾಪ್‌ ಅವರ ಬಾವ ಭಾಗಿಯಾಗಿದ್ದಾರೆ. ತೇಜ್‌ ಪ್ರತಾಪ್‌ ಅವರ ಅಕ್ಕ ಮೀಸಾ ಭಾರತಿ ಅವರ ಪತಿ ಶೈಲೇಶ್‌ ಕುಮಾರ್‌ ಅವರು ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

ಇದಕ್ಕೆ ಬಿಜೆಪಿಯು ಆಕ್ರೋಶ ವ್ಯಕ್ತಪಡಿಸಿದೆ. “ಆರ್‌ಜೆಡಿಯು ಜಾತಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿ ಜನರನ್ನು ಮನವೊಲಿಸಿದರೂ, ಅದಕ್ಕೆ ಅಂತಿಮವಾಗಿ ಕುಟುಂಬವೇ ಮುಖ್ಯ” ಎಂದು ಟೀಕಿಸಿದೆ. ಸ್ವಾತಂತ್ರ್ಯ ದಿನದ ಭಾಷಣದಲ್ಲಿ ನರೇಂದ್ರ ಮೋದಿ ಅವರೂ ಕುಟುಂಬ ರಾಜಕಾರಣವನ್ನು ಟೀಕಿಸಿದ್ದರು. “ಕುಟುಂಬ ರಾಜಕಾರಣವು ದೇಶ ಎದುರಿಸುತ್ತಿರುವ ಪ್ರಮುಖ ಸವಾಲಾಗಿದೆ. ಇದರ ವಿರುದ್ಧ ಜನ ಹೋರಾಡಬೇಕು” ಎಂದು ಕರೆ ನೀಡಿದ್ದರು.

ಇದನ್ನೂ ಓದಿ | Independence Day | ಕೆಂಪು ಕೋಟೆ ಮೇಲೆ ನಿಂತು ಕುಟುಂಬ ರಾಜಕಾರಣ ವಿರುದ್ಧ ಗುಡುಗಿದ ಮೋದಿ

Exit mobile version