Site icon Vistara News

Tejaswi Yadav | ಬಿಹಾರದಲ್ಲಿ ಆರ್‌ಜೆಡಿ ಸಚಿವರಿಗೆ ತೇಜಸ್ವಿ ಯಾದವ್‌ ನೀಡಿದ ಆರು ಸೂಚನೆಗಳೇನು?

Tejaswi Yadav

ನವದೆಹಲಿ: ಯಾವುದೇ ರಾಜ್ಯಗಳಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದರೆ, ಆ ಪಕ್ಷದ ಸಚಿವರು ಸರಕಾರದ ದುಡ್ಡಿನಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸುತ್ತಾರೆ. ತಮಗೆ ನೀಡುವ ಮನೆಯನ್ನು ವಿವಿಧ ರೀತಿಯಲ್ಲಿ ನವೀಕರಣ ಮಾಡಿಸಿಕೊಳ್ಳುತ್ತಾರೆ. ಯಾವ ಯಾವ ಸೌಲಭ್ಯ ಪಡೆಯಬೇಕೋ, ಅವುಗಳಿಗಿಂತ ಹೆಚ್ಚಿನ ಸೌಲಭ್ಯ ಪಡೆಯುತ್ತಾರೆ. ಆದರೆ, ಬಿಹಾರದಲ್ಲಿ ಇತ್ತೀಚೆಗೆ ಜೆಡಿಯು-ಆರ್‌ಜೆಡಿ ಸರಕಾರ ರಚನೆಯಾದರೂ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ (Tejaswi Yadav) ಅವರು ತಮ್ಮ ಪಕ್ಷದ ಸಚಿವರಿಗೆ ಇಂತಹ ಹಲವು ಸೌಲಭ್ಯ ಪಡೆಯದಂತೆ ಸೂಚನೆ ನೀಡಿದ್ದಾರೆ. ಅವರು ನೀಡಿದ ಆರು ಸೂಚನೆಗಳು ಹೀಗಿವೆ…

೧. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ಆರ್‌ಜೆಡಿ ಸಚಿವರು ನೂತನ ಕಾರುಗಳನ್ನು ಖರೀದಿಸುವಂತಿಲ್ಲ.

೨. ಕೆಲಸಗಾರರು, ಹಿತೈಷಿಗಳು, ಬೆಂಬಲಿಗರು ಸೇರಿ ಯಾರಿಂದಲೂ ಕಾಲು ಮುಟ್ಟಿಸಿ ನಮಸ್ಕಾರ ಮಾಡಿಸಿಕೊಳ್ಳದಿರಿ. ಎಲ್ಲರಿಗೂ ನಮಸ್ತೆ ಎಂದೇ ಮಾತನಾಡಿಸಿ.

೩. ಪಕ್ಷದ ಸಚಿವರು ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆತು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ. ಬಡವರಿಗೆ ಸಹಾಯ ಮಾಡಿ. ಜಾತಿ, ಧರ್ಮ ಬದಿಗಿಟ್ಟು, ಜನರ ಕೆಲಸ ಮಾಡಿ ಕೊಡಿ.

೪. ಉಡುಗೊರೆಗಳಾಗಿ ಹೂಗುಚ್ಛಗಳನ್ನು ಸ್ವೀಕರಿಸುವ ಅಥವಾ ನೀಡುವ ಬದಲು, ಪುಸ್ತಕ, ಪೆನ್‌ಗಳನ್ನು ನೀಡುವ ಹಾಗೂ ಪಡೆಯುವ ರೂಢಿ ಅಳವಡಿಸಿಕೊಳ್ಳಿ.

೫. ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಪಾಡಿಕೊಳ್ಳಿ, ನಾಯಕತ್ವಕ್ಕೆ ಉತ್ತೇಜನ ನೀಡಿ.

೬. ಸರಕಾರದ ಅಭಿವೃದ್ಧಿ ಕೆಲಸಗಳು, ಎಲ್ಲ ಇಲಾಖೆಗಳ ಕಾರ್ಯಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳಿ.

Exit mobile version