ಶ್ರೀನಗರ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯು ಒಬ್ಬ ಉಗ್ರನನ್ನು (Terrorist Killed) ಹೊಡೆದುರುಳಿಸಿದ್ದಾರೆ. ರಾಜೌರಿ ನಗರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ದಸ್ಸಾಲ್ ಗುರ್ಜಾನ್ ಗ್ರಾಮದಲ್ಲಿ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಉಗ್ರರ ಚಟುವಟಿಕೆ ಕುರಿತು ಅನುಮಾನಾಸ್ಪದ ಬೆಳವಣಿಗೆ ಕಂಡು ಬಂದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಭಾರತೀಯ ಸೇನೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿದ್ದು, ಒಬ್ಬ ಉಗ್ರನನ್ನು ಎನ್‌ಕೌಂಟರ್ ಮಾಡಲಾಗಿದೆ” ಎಂದು ಎಡಿಜಿಪಿ ಮುಕೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.
#WATCH | J&K | One terrorist killed in an encounter with security forces in Rajouri's Dassal forest area. A search operation is underway.
— ANI (@ANI) June 2, 2023
Security checks are being done.
(Visuals deferred by unspecified time) pic.twitter.com/IzfXtJ2xzw
“ಸೈನಿಕರು ಕಾರ್ಯಾಚರಣೆ ಕೈಗೊಂಡಾಗ ಉಗ್ರರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಭದ್ರತಾ ಸಿಬ್ಬಂದಿಯು ಕ್ಷಿಪ್ರವಾಗಿ ದಾಳಿ ನಡೆಸಿ ಒಬ್ಬ ಉಗ್ರನನ್ನು ಮಟ್ಟಹಾಕಿದ್ದಾರೆ. ಹತ್ಯೆಗೀಡಾದ ಉಗ್ರನ ಶವ ಪತ್ತೆಯಾಗಿದ್ದು, ಆತ ಪಾಕಿಸ್ತಾನ ಮೂಲದವನು ಎಂದು ಶಂಕಿಸಲಾಗಿದೆ. ಆದರೆ, ಯಾವ ಸಂಘಟನೆಗೆ ಸೇರಿದ್ದಾನೆ ಎಂಬುದರ ಕುರಿತು ಮಾಹಿತಿ ಇಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾನನ್ನು ಕೊಂದ ಉಗ್ರನ ಹತ್ಯೆ; ಪುಲ್ವಾಮಾದಲ್ಲಿ ಮುಂದುವರಿದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ
ಗುರುವಾರ ರಾತ್ರಿ ಕಾರ್ಯಾಚರಣೆ ಕೈಗೊಳ್ಳುತ್ತಲೇ ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರು ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿತ್ತು. ಹಾಗೆಯೇ, ಶಾಲೆ, ಹಾಸ್ಟೆಲ್‌ಗಳನ್ನು ಮುಚ್ಚಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಕೆಲ ದಿನಗಳ ಹಿಂದಷ್ಟೇ ಅನಂತನಾಗ್ ಜಿಲ್ಲೆಯಲ್ಲಿ ಹಿಂದು ಕಾರ್ಮಿಕರೊಬ್ಬರ ಹತ್ಯೆಯಾಗಿತ್ತು. ಉಧಮ್‌ಪುರ ಮೂಲದ ಹಿಂದು ಕಾರ್ಮಿಕನನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.