ಜಮ್ಮು-ಕಾಶ್ಮೀರದ ಆವಂತಿಪೋರಾದಲ್ಲಿ ಇಂದು ಮುಂಜಾನೆ ಭದ್ರತಾ ಸಿಬ್ಬಂದಿ ಗುಂಡಿನ ದಾಳಿಗೆ ಬಲಿಯಾದ ಉಗ್ರನನ್ನು ಅಖೀಬ್ ಮುಸ್ತಾಕ್ ಭಟ್ ಎಂದು ಗುರುತಿಸಲಾಗಿದೆ. ಫೆ.26ರಂದು ಕಾಶ್ಮೀರಿ ಪಂಡಿತ ಸಂಜಯ್ ಶರ್ಮಾನನ್ನು ಹತ್ಯೆಗೈದ ಉಗ್ರರಲ್ಲಿ ಈ ಅಖೀಬ್ ಮುಸ್ತಾಕ್ ಕೂಡ ಒಬ್ಬ ಎಂದು ಕಾಶ್ಮೀರದ ಎಡಿಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಈತ ಮೊದಲು ಹಿಹ್ಬುಲ್ ಮುಜಾಹಿದ್ದೀನ್ ಸಂಘಟನೆಯಲ್ಲಿ ಇದ್ದ, ಬಳಿಕ ಲಷ್ಕರೆ ತೊಯ್ಬಾದ ಕಾಶ್ಮೀರಿ ಉಗ್ರ ಸಂಘಟನೆ ದಿ ರೆಸಿಸ್ಟನ್ಸ್ ಫ್ರಂಟ್ (TRF)ಗೆ ಸೇರ್ಪಡೆಯಾಗಿದ್ದ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಭಾನುವಾರ ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ ಸಂಜಯ್ ಶರ್ಮಾರನ್ನು (40) ಭಯೋತ್ಪಾದಕರು ಹತ್ಯೆ ಮಾಡುತ್ತಿದ್ದರು. ಎಟಿಎಂವೊಂದರಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅವರು ಭಾನುವಾರ ಸ್ಥಳೀಯ ಮಾರುಕಟ್ಟೆಗೆ ತೆರಳುತ್ತಿದ್ದಾಗ ಅವರ ಹತ್ಯೆಯಾಗಿತ್ತು. ಅದಾಗಿ ಎರಡೇ ದಿನಕ್ಕೆ ಅಂದರೆ ಇಂದು ಮುಂಜಾನೆಯಿಂದಲೇ ಪುಲ್ವಾಮಾದ ಆವಂತಿಪೋರಾದ ಪದಗಂಪೋರಾದಲ್ಲಿ ಭಯೋತ್ಪಾದಕರು ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು. ಇಂದು ಬೆಳಗ್ಗೆ ಕಾಶ್ಮೀರ ವಲಯ ಪೊಲೀಸ್ ಟ್ವೀಟ್ ಮಾಡಿ ‘ಒಬ್ಬ ಉಗ್ರನ ಹತ್ಯೆ ಮಾಡಲಾಗಿದೆ. ಅವನ ಮೃತದೇಹ ಸಿಕ್ಕಿಲ್ಲ’ ಎಂದು ಹೇಳಿದ್ದರು.
ಇದನ್ನೂ ಓದಿ: ಪುಲ್ವಾಮಾದಲ್ಲಿ ಮುಂಜಾನೆಯಿಂದಲೇ ಶುರುವಾದ ಎನ್ಕೌಂಟರ್; ಒಬ್ಬ ಉಗ್ರನನ್ನು ಹತ್ಯೆಗೈದ ಭದ್ರತಾ ಪಡೆ