Site icon Vistara News

Terrorists Killed: ಬಾರಾಮುಲ್ಲಾದಲ್ಲಿ ಇಬ್ಬರು ಲಷ್ಕರೆ ತೊಯ್ಬಾ ಉಗ್ರರ ಹತ್ಯೆ; ಶಸ್ತ್ರಾಸ್ತ್ರ ವಶ

Terrorists killed in encounter In Baramulla of Jammu Kashmir

#image_title

ಶ್ರೀನಗರ: ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಬ್ಬರು ಲಷ್ಕರೆ ತೊಯ್ಬಾ ಸಂಘಟನೆಯ ಉಗ್ರರನ್ನು (LeT Terrorists killed) ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ. ಬಾರಾಮುಲ್ಲಾದ ವನಿಗಂ ಪಯೀನ್ ಕ್ರೀರಿ ಎಂಬಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ (Security Forces) ಕಾರ್ಯಾಚರಣೆ ನಡೆಸಿದ್ದರು. ಆ ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದು, ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಅಡಗಿದ್ದ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದಾಗ ಮರುದಾಳಿ ನಡೆಸಿ, ಇಬ್ಬರನ್ನು ಕೊಲ್ಲಲಾಗಿದೆ. ಮೃತರಾದ ಉಗ್ರರಿಂದ ಎಕೆ47 ರೈಫಲ್​, ಪಿಸ್ತೂಲ್​ ಮತ್ತಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಎನ್​ಕೌಂಟರ್​​ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರನ್ನು ಶಕೀರ್​ ಮಜೀದ್​ ನಜರ್​ ಮತ್ತು ಹನಾನ್​ ಅಹ್ಮದ್​ ಸೇಹ್​ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಶೋಪಿಯಾನ್​ ಜಿಲ್ಲೆಯ ನಿವಾಸಿಗಳಾಗಿದ್ದರು. ಎಂದು ಕಾಶ್ಮೀರ ಎಡಿಜಿಪಿ ವಿಜಯ್​ ಕುಮಾರ್ ತಿಳಿಸಿದ್ದಾರೆ. ಇವರಿಬ್ಬರನ್ನು ಕೊಲ್ಲುವುದಕ್ಕೂ ಮೊದಲು ಬುಧವಾರ ಕುಪ್ವಾರಾ ಜಿಲ್ಲೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.

ಇದನ್ನೂ ಓದಿ: ಪೂಂಚ್​ನಲ್ಲಿ ಸೇನಾ ವಾಹನದ ಮೇಲೆ ಉಗ್ರದಾಳಿ ಪ್ರಕರಣ; 12 ಮಂದಿ ವಶಕ್ಕೆ; ಸ್ಥಳದಲ್ಲಿ ಬೀಡುಬಿಟ್ಟ ಶ್ವಾನದಳ, ಡ್ರೋನ್​

ಬುಧವಾರ ಕುಪ್ವಾರಾದ ಮಚ್ಚಲ್​ ವಲಯದ ಬಳಿ ಉಗ್ರರು ಗಡಿ ನಿಯಂತ್ರಣಾ ರೇಖೆಯನ್ನು ನುಸುಳಿ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ಮಾಹಿತಿ ಸಿಕ್ಕಿತ್ತು. ಅದು ದುರ್ಗಮ ಪ್ರದೇಶವಾಗಿದ್ದರಿಂದ ಭಾರತೀಯ ಸೇನೆ ಮತ್ತು ವಿಶೇಷ ಆಪರೇಶನ್​ ಗ್ರೂಪ್​ (SOG)ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದವು. ಮೇ 1ರಿಂದಲೇ ಆ ಜಾಗದಲ್ಲಿ ಸೈನಿಕರು ಹೈ ಅಲರ್ಟ್​​ನಲ್ಲಿದ್ದರು. ಮೇ 3ರಂದು ಇಬ್ಬರನ್ನು ಕೊಲ್ಲಾಗಿದೆ ಎಂದು ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

Exit mobile version