Site icon Vistara News

Congress President | ಅಧ್ಯಕ್ಷ ಚುನಾವಣೆಗೆ ಮುನ್ನವೇ ಕಾಂಗ್ರೆಸ್‌ ಮಹತ್ವದ ಬದಲಾವಣೆ, ಏನದು?

Shashi Tharoor

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ (Congress President) ಚುನಾವಣೆಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಚುನಾವಣೆ ಪ್ರಕ್ರಿಯೆಯಲ್ಲಿ ಪಕ್ಷವು ಮಹತ್ವದ ಬದಲಾವಣೆ ಮಾಡಿದೆ. ಇದುವರೆಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದವರ ಹೆಸರುಗಳ ಮುಂದೆ ‘1’ ಎಂದು ಬರೆಯುವ ಬದಲು, ‘ರೈಟ್‌ ಮಾರ್ಕ್’ ಬರೆಯಬೇಕು ಎಂಬುದಾಗಿ ಪಕ್ಷ ಸೂಚಿಸಿದೆ.

ಕಾಂಗ್ರೆಸ್‌ ನಿಯಮ ಬದಲಾವಣೆ ಕುರಿತು ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶಿ ತರೂರ್‌ ಅವರು ಟ್ವೀಟ್‌ ಮಾಡಿದ್ದಾರೆ. “ಕಾಂಗ್ರೆಸ್‌ ಚುನಾವಣೆ ಪ್ರಾಧಿಕಾರವು ಮತದಾನ ಪ್ರಕ್ರಿಯೆಯ ನಿಯಮ ಬದಲಿಸಿದೆ. ಮತಪತ್ರದಲ್ಲಿ ಅಭ್ಯರ್ಥಿಗಳ ಹೆಸರಿನ ಎದುರು ‘1’ ಎಂದು ಬರೆಯುವ ಬದಲು ಟಿಕ್‌ ಮಾರ್ಕ್‌ ಬರೆಯಬೇಕು” ಎಂಬುದಾಗಿ ತಿಳಿಸಿದ್ದಾರೆ.

“ಟಿಕ್‌ ಮಾರ್ಕ್‌ ಹೊರತಾಗಿ ಬೇರೆ ಯಾವುದೇ ಮಾರ್ಕ್‌ ಹಾಕಿದರೆ ಅಥವಾ ಬರೆದರೆ ಆ ಮತ ಅಮಾನ್ಯ” ಎಂದು ಕಾಂಗ್ರೆಸ್‌ ತಿಳಿಸಿದೆ. ಸೋಮವಾರ (ಅಕ್ಟೋಬರ್‌ ೧೭) ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್‌ ಕಣದಲ್ಲಿದ್ದಾರೆ. ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೪ರವರೆಗೆ ಮತದಾನ ನಡೆಯಲಿದೆ.

ಇದನ್ನೂ ಓದಿ | ವಿಸ್ತಾರ Explainer | 22 ವರ್ಷದ ಬಳಿಕ ನಾಳೆ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆ, ಹೇಗಿರಲಿದೆ ಪ್ರಕ್ರಿಯೆ?

Exit mobile version