Site icon Vistara News

Cheetah Reintroduction : ಸೌದಿ ದೊರೆ ಕೊಟ್ಟಿದ್ದ ಚೀತಾ ಸಾವು

The cheetah given by the Saudi king died

#image_title

ಹೈದರಾಬಾದ್​​: 2013ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸೌದಿಯ ದೊರೆ ಮೊಹಮ್ಮದ್​ ಅಲ್​ ಸೌದ್​, ಭೇಟಿಯ ಸ್ಮರಣೆಗಾಗಿ ಇಲ್ಲಿನ ನೆಹರೂ ಮೃಗಾಲಯಕ್ಕೆ ನೀಡಿದ್ದ ಗಂಡು ಚೀತಾ ಅನಾರೋಗ್ಯದಿಂದ ಮೃತಪಟ್ಟಿದೆ. ಹಲವು ದಿನಗಳಿಂದ ಅಸೌಖ್ಯಕ್ಕೆ ಒಳಗಾಗಿದ್ದ ಅಬ್ದುಲ್ಲಾ ಹೆಸರಿನ ಈ ಚೀತಾ, ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದೆ ಎಂಬುದಾಗಿ ವರದಿಯಾಗಿದೆ. ಚಿರತೆಗೆ 15 ವರ್ಷವಾಗಿತ್ತು ಎಂಬುದಾಗಿ ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೌದಿ ದೊರೆ ತಮ್ಮ ಭೇಟಿಯ ವೇಳೆ ಈಗ ಮೃತಪಟ್ಟ ಅಬ್ದುಲ್ಲಾ ಹಾಗೂ ಹಿಬಾ ಎಂಬ ಹೆಣ್ಣು ಚಿರತೆಯನ್ನು ಕೊಡುಗೆಯಾಗಿ ಕೊಟ್ಟಿದ್ದರು. ಅದು ಮೃಗಾಲಯದ ಪ್ರಮುಖ ಆಕರ್ಷಣೆ ಎನಿಸಿಕೊಂಡಿತ್ತು. ಆದರೆ, 2022ರಲ್ಲಿ ಹಿಬಾ ಮೃತಪಟ್ಟ ಬಳಿಕ ಅಬ್ದುಲ್ಲಾ ಏಕಾಂಕಿಯಾಗಿದ್ದ. ಇತ್ತೀಚೆಗೆ ಅದಕ್ಕೆ ಅನಾರೋಗ್ಯವೂ ಬಾಧಿಸಿತ್ತು. ಬಳಿಕ ಅಲ್ಲಿನ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಅನಾರೋಗ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Cheetahs From South Africa: ದಕ್ಷಿಣ ಆಫ್ರಿಕಾದಿಂದ 10 ತಾಸು ಪ್ರಯಾಣ ಮಾಡಿ ಭಾರತ ತಲುಪಿದ 12 ಚೀತಾಗಳು

ಭಾರತದಲ್ಲಿ ಚೀತಾಗಳು ನಿರ್ನಾಮವಾಗಿವೆ ಎಂಬ ಕಾರಣಕ್ಕೆ ವಿದೇಶಿಗಳಿಂದ ತರಿಸಲಾಗುತ್ತಿದೆ. ಕಳೆದ ವರ್ಷ ನಮೀಬಿಯಾದಿಂದ ಎಂಟು ಚೀತಾಗಳನ್ನು ತಂದು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು.

Exit mobile version