ಬೆಂಗಳೂರು : ಸಮಸ್ಯೆಯನ್ನು ಪರಿಹರಿಸುವುದೇ ತಂತ್ರಜ್ಞಾನದ ಉದ್ದೇಶ. ಕೃತಕ ಬುದ್ಧಿಮತ್ತೆ ಬಂದ ಬಳಿಕವಂತೂ ತಂತ್ರಜ್ಞಾನದ ವ್ಯಾಪ್ತಿ ಎಲ್ಲೆಡೆ ವ್ಯಾಪಿಸಿದೆ. ಅದರಲ್ಲೂ ಇತ್ತೀಚೆಗೆ ಬಂದಿರುವ chatbot ChatGPT ಹಲವು ಬಗೆಯಲ್ಲಿ ಜನರಿಗೆ ನೆರವು ನೀಡುತ್ತಿದೆ. ಇದೇ ವೇದಿಕೆಯನ್ನು ಬಳಸಿಕೊಂಡು ಐಟಿ ಕಂಪನಿಯ ಮುಖ್ಯಸ್ಥರೊಬ್ಬರು ಹಣ ಕೊಡದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಹಿಡಿದು ಹಾಕಿದ ಪ್ರಸಂಗ ನಡೆದಿದೆ. ಘಟನೆ ನಡೆದಿರುವುದು ಕೆನಡಾದಲ್ಲಿ. ಹಣ ಸಿಕ್ಕ ಖುಷಿಯಲ್ಲಿ ಆ ವ್ಯಕ್ತಿ chatbot ChatGPT ಬಳಸಿಕೊಂಡು ಹೇಗೆ ಹಣ ವಸೂಲಿ ಮಾಡಿದೆ ಎಂಬುದನ್ನು ವಿವರಿಸಿದ್ದಾರೆ.
ಸೇವೆಯೊಂದಕ್ಕೆ ನೀಡಲಾಗಿದ್ದ 90,80,342 ರೂಪಾಯಿ (109,500 ಡಾಲರ್) ವಾಪಸ್ ಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೆ. ಆದರೆ ಅವರು ದುಡ್ಡು ವಾಪಸ್ ಕೊಡಲು ಒಪ್ಪಿರಲಿಲ್ಲ. ಕೊನೆಗೆ chatbot ChatGPT ಬಳಿ ಏನು ಮಾಡಬೇಕು ಎಂದು ಮನವಿ ಮಾಡಿದೆ. ಅದು ಸುಂದರವಾದ ಮೇಲ್ ಒಂದು ಬರೆದುಕೊಟ್ಟಿತು. ಅದನ್ನು ಕಳುಹಿಸಿದ ತಕ್ಷಣ ಹಣ ವಾಪಸ್ ಕೊಟ್ಟರು ಎಂದು ಕಂಪನಿಯ ಮುಖ್ಯಸ್ಥ ಹೇಳಿಕೊಂಡಿದ್ದಾರೆ. ಕೃತಕ ಬುದ್ಧಿಮತ್ತೆ ಲಾಯರ್ಗೆ ಕೊಡಬೇಕಾದ ದುಡ್ಡನ್ನು ಕೂಡ ಉಳಿಸಿತು ಎಂಬುದಾಗಿ ಅವರು ಹೇಳಿದ್ದಾರೆ.
chatbot ChatGPT ಏನು ಹೇಳಿತು?
ಐಟಿ ಕಂಪನಿಯ ಮುಖ್ಯಸ್ಥ ಗ್ರೆಗ್ ಇಸ್ನ್ಬರ್ಗ್ ಎಂಬುವರು ಸೇವೆಯೊಂದನ್ನು ಪಡೆಯಲು ಮತ್ತೊಂದು ಕಂಪನಿಗೆ ದುಡ್ಡು ಕೊಟ್ಟಿದ್ದರು. ಆದರೆ, ಆ ಕಂಪನಿ ಸೇವೆಯೂ ಕೊಟ್ಟಿರಲಿಲ್ಲ. ದುಡ್ಡು ಕೂಡ ಮರಳಿಸಿರಲಿಲ್ಲ. ಸತತ ಮನವಿಯ ಬಳಿಕವೂ ಕಂಪನಿ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಈ ವೇಳೆ ಗ್ರೆಗ್ ವಕೀಲರ ನೆರವು ಪಡೆದು ಕಾನೂನು ಸಮರ ನಡೆಸಲು ಯೋಚನೆ ಮಾಡಿದ್ದರು. ಕೊನೇ ಒಂದು ಪ್ರಯತ್ನ ಎಂಬಂತೆ ಅವರು chatbot ChatGPT ನೆರವು ಕೋರಿದ್ದರು.
ಗ್ರೆಗ್ ಪ್ರಶ್ನೆಗೆ ಉತ್ತರಿಸಿದ chatbot ChatGPT ಸುಂದರವಾದ ಮೇಲ್ ಬರೆದುಕೊಟ್ಟಿತು. ಅದರಲ್ಲಿ ಸೌಮ್ಯ ರೀತಿಯ ಬೆದರಿಕೆಯೂ ಇತ್ತು. ಒಂದು ವೇಳೆ ವಾಪಸ್ ಮಾಡದೇ ಹೋದರೆ ಮುಂದೆ ನಿಮಗೆ ಆಗುವ ತೊಂದರೆಗೆ ನಾವು ಹೊಣೆಗಾರರಲ್ಲ ಎಂಬ ಸೂಚನೆಯೂ ಇತ್ತು. ಅದೇ ಸಂದೇಶವನ್ನು ಗ್ರೆಗ್ ಕಂಪನಿಗೆ ಕಳುಹಿಸಿದ್ದರು.
ಇದನ್ನೂ ಓದಿ : ವಾಕಿಂಗ್ ಚಿತ್ರಗಳು: ಚಾಟ್ ಜಿಪಿಟಿ- ರೋಬಾಟ್ ಪರ್‌ಫೆಕ್ಟು, ಹಲವು ಎಡವಟ್ಟು
ಮೇಲ್ ನೋಡಿದ ತಕ್ಷಣ ಅದುವರೆಗೆ ಪ್ರತಿಕ್ರಿಯೆ ಕೊಡದ ಕಂಪನಿ, ಉತ್ತರ ಕೊಟ್ಟಿತು. ಅಲ್ಲದೆ, ಒಂದೇ ಕಂತಿನಲ್ಲಿ ಅಷ್ಟೂ ಹಣವನ್ನು ವಾಪಸ್ ಮಾಡಿತು ಎಂದು ಹೇಳಲಾಗಿದೆ.