ದೆಹಲಿ ಮೆಟ್ರೋ (Delhi Metro) ಇತ್ತೀಚೆಗೆ ಪದೇಪದೆ ಸುದ್ದಿಯಾಗುತ್ತಿದೆ. ಹುಡುಗಿಯರು ಹಾಟ್ ಆಗಿ ಡ್ಯಾನ್ಸ್ ಮಾಡಿದ್ದು, ಜೋಡಿಯೊಂದು ಅಪ್ಪಿಕೊಂಡು ನಿಂತಿದ್ದು, ಯುವತಿಯೊಬ್ಬಳು ಬಿಕಿನಿ ಧರಿಸಿ ಬಂದಿದ್ದು, ಮಹಿಳೆಯರಿಬ್ಬರು ಹೊಡೆದಾಡಿಕೊಂಡಿದ್ದು..ಹೀಗೆ ವಿವಿಧ ಕಾರಣಗಳಿಗೆ ಸುದ್ದಿಯಾಗುತ್ತಿರುವ ದೆಹಲಿ ಮೆಟ್ರೋದ ಹೆಸರು ಇದೀಗ ಮತ್ತೊಂದು ಪ್ರಮುಖ ಕಾರಣಕ್ಕೆ ಮುನ್ನೆಲೆಗೆ ಬಂದಿದೆ. ದೆಹಲಿ ಮೆಟ್ರೋ ರೈಲು ಮದ್ಯಪ್ರಿಯರಿಗೆ ಒಂದು ಗುಡ್ನ್ಯೂಸ್ ಕೊಟ್ಟಿದೆ. ಒಬ್ಬ ಪ್ರಯಾಣಿಕ ಎರಡು ಬಾಟಲಿ (ಸೀಲ್ ಮಾಡಿರುವ ಬಾಟಲಿ) ಮದ್ಯವನ್ನು ಮೆಟ್ರೋ ರೈಲಿನಲ್ಲಿ ಕೊಂಡೊಯ್ಯಬಹುದು ಎಂದು ದೆಹಲಿ ಮೆಟ್ರೋ ರೈಲು ಕಾರ್ಪೋರೇಶನ್ (Delhi Metro Rail Corporation) ತಿಳಿಸಿದೆ.
ಇಷ್ಟು ದಿನ ದೆಹಲಿ ಮೆಟ್ರೋ ರೈಲಿನಲ್ಲಿ ಮದ್ಯವನ್ನು ಒಯ್ಯುವಂತೆ ಇರಲಿಲ್ಲ. ಏರ್ಪೋರ್ಟ್ ಲೇನ್ನಲ್ಲಿ ಸಂಚರಿಸುವ ಮೆಟ್ರೋ ರೈಲಲ್ಲಿ ಮಾತ್ರ ಇದಕ್ಕೆ ಅವಕಾಶ ಇತ್ತು. ಮದ್ಯದ ಬಾಟಲಿ ಬ್ಯಾಗ್ನಲ್ಲಿ ಇಟ್ಟುಕೊಂಡು ಬಂದವಗೆ ಮೆಟ್ರೋ ಸ್ಟೇಶನ್ ಬಾಗಿಲಿನಿಂದಲೇ ಗೇಟ್ ಪಾಸ್ ಸಿಗುತ್ತಿತ್ತು. ರೈಲು ಹತ್ತಲೇಬೇಕು ಎಂದರೆ ಆ ಮದ್ಯದ ಬಾಟಲಿಗಳನ್ನು ಅಲ್ಲೇ ಚೆಕಿಂಗ್ ಬಳಿಯೇ ಬಿಡಬೇಕಿತ್ತು. ಆದರೆ ಇನ್ಮುಂದೆ ಪ್ರಯಾಣಿಕರು ಬ್ಯಾಗ್ನಲ್ಲಿ ಎರಡು, ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಮೆಟ್ರೋದಲ್ಲಿ ಕೊಂಡೊಯ್ಯಬಹುದಾಗಿದೆ. ಹಾಗಂತ, ಅದನ್ನು ರೈಲಲ್ಲಿ ಓಪನ್ ಮಾಡಿ ಕುಡಿಯುವಂತಿಲ್ಲ..!
ದೆಹಲಿ ಮೆಟ್ರೋ ರೈಲಲ್ಲಿ ಮದ್ಯ ಒಯ್ಯುವಂತಿಲ್ಲ ಎಂಬ ಈ ಹಿಂದಿನ ಆದೇಶವನ್ನು ಈಗ ಮರುಪರಿಶೀಲನೆ ಮಾಡಲಾಗಿದೆ. ‘ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ, ದೆಹಲಿ ಮೆಟ್ರೋ ರೈಲು ಕಾರ್ಪೋರೇಶನ್ನ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿ, ಮದ್ಯ ಒಯ್ಯಲು ಅವಕಾಶ ಕೊಡುವ ಬಗ್ಗೆ ಸಮಗ್ರ ಪರಿಶೀಲನೆ ಮಾಡಲಾಗಿತ್ತು. ಮೆಟ್ರೋ ಸ್ಟೇಶನ್ಗಳಲ್ಲಿ ಭದ್ರತೆಗೆ ಇರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಈ ಬಗ್ಗೆ ಸಮರ್ಪಕವಾಗಿ ಕಣ್ಣಿಡಲಿದ್ದಾರೆ. ಮದ್ಯ ಕೊಂಡೊಯ್ಯಲು ಅವಕಾಶ ಸಿಕ್ಕಿದೆ ಎಂದ ಮಾತ್ರಕ್ಕೆ ಪ್ರಯಾಣಿಕರು ಅಶಿಸ್ತು ತೋರಿಸುವಂತಿಲ್ಲ. ಕುಡಿದು ಬೇಕಾಬಿಟ್ಟಿ ವರ್ತಿಸುವಂತಿಲ್ಲ. ಹಾಗೊಮ್ಮೆ ಮಾಡಿದ್ದೇ ಆದರೆ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ಮೆಟ್ರೋ ರೈಲು ನಿಗಮ ತಿಳಿಸಿದೆ.
ಇದನ್ನೂ ಓದಿ: Viral Video: ಚಲಿಸುವ ಮೆಟ್ರೋದಲ್ಲೇ ಸಿನಿಮಾ ಸ್ಟೈಲಲ್ಲಿ ಪಂಚ್, ನೂಕಾಟ, ತಳ್ಳಾಟ, ಜಗಳ; ವಿಡಿಯೊ ವೈರಲ್
ಬೆಂಗಳೂರಲ್ಲೂ ಮೊದಲು ಇತ್ತು ಈ ನಿಯಮ!
ಬೆಂಗಳೂರಲ್ಲಿ ಕೂಡ ಮೊದಲು ಹೀಗೇ ಇತ್ತು. 2011ರಿಂದ ಬೆಂಗಳೂರು ಮೆಟ್ರೋ ರೈಲು ಸಂಚಾರ ಶುರುವಾಗಿದೆ. 2016ರ ಹೊತ್ತಿಗೆ ರೈಲಲ್ಲಿ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳು, ಸಿಗರೇಟ್ ಪ್ಯಾಕ್ಗಳನ್ನು ಒಯ್ಯಲು ಅವಕಾಶ ಇತ್ತು. ಆದರೆ 2019ರಲ್ಲಿ ಮೆಟ್ರೋ ರೈಲಲ್ಲಿ ಅಲ್ಕೋಹಾಲ್ ಮತ್ತು ಸಿಗರೇಟ್