Site icon Vistara News

ಮದುವೆಗೆ ಉಡುಗೊರೆ ಬಂದಿದ್ದ ಹೋಮ್​ ಥಿಯೇಟರ್​ ಸ್ಫೋಟಗೊಂಡು ಮದುಮಗ ಸೇರಿ ಇಬ್ಬರ ಸಾವು

The home theater where the wedding gift was received exploded, killing the bride

#image_title

ರಾಯ್​ಪುರ (ಚತ್ತೀಸ್​ಗಢ): ಮದುವೆ ದಿನ ಗಿಫ್ಟ್​ ರೂಪದಲ್ಲಿ ಬಂದಿದ್ದ ಹೋಮ್ ಥಿಯೇಟರ್​ ಪರೀಕ್ಷಿಸುವಾಗ ಸ್ಫೋಟಗೊಂಡು ಮದುಮಗ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಘಟನೆ ಕಬೀರ್​ಧಾಮ್​ ಜಿಲ್ಲೆಯಲ್ಲಿ ನಡೆದಿದ್ದು, ಈ ಪ್ರದೇಶ ಮಾವೊವಾದಿಗಳ ತಾಣವಾಗಿರುವ ಕಾರಣ ಘಟನೆ ಹೆಚ್ಚು ಅತಂಕ ಮೂಡಿಸಿದೆ. ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿಸಬಹುದು ಎಂಬ ಅನುಮಾನ ಮೂಡಿದೆ.

ಏಪ್ರಿಲ್​ 1ರಂದು 22ವರ್ಷದ ಹೇಮೇಂದ್ರ ಮೇರಾವಿ ಎಂಬುವರ ವಿವಾಹವಾಗಿತ್ತು. ಅಂದು ಅವರಿಗೆ ಹಲವು ಗಿಫ್ಟ್​ಗಳ ಜತೆ ಮ್ಯೂಸಿಕ್​ ಸಿಸ್ಟಮ್​ ಕೂಡ ಬಂದಿತ್ತು. ಏಪ್ರಿಲ್​ 3ರಂದು ಅವುಗಳನ್ನು ಬಿಚ್ಚಿ ನೋಡುತ್ತಿದ್ದರು. ಈ ವೇಳೆ ತಮಗೆ ದೊರೆತ ಮ್ಯೂಸಿಕ್ ಸಿಸ್ಟಮ್​ ಅನ್ನು ಪ್ಲಗ್​ಗೆ ಚುಚ್ಚಿ ಹಾಡು ಪ್ಲೇ ಮಾಡಲು ಯತ್ನಿಸಿದ್ದಾರೆ. ಸ್ವಿಚ್​ ಆನ್​ ಅದ ತಕ್ಷಣ ಮ್ಯೂಸಿಕ್​ ಸಿಸ್ಟಮ್​ ಬಲವಾಗಿ ಸ್ಫೋಟಗೊಂಡಿದೆ. ಘಟನೆಯಲ್ಲಿ ಹೇಮೇಂದ್ರ ಹಾಗೂ ಆತನ ಅಣ್ಣ ರಾಜ್​ಕುಮಾರ್​ (30) ಎಂಬುವರೂ ಮೃತಪಟ್ಟಿದ್ದಾರೆ. ಅದೇ ರೀತಿ ಒಂದೂವರೆ ವರ್ಷದ ಬಾಲಕ ಸೇರಿದಂತೆ ನಾಲ್ಕು ಮಂದಿಗೆ ಗಾಯವಾಗಿದೆ. ಅವರೆಲ್ಲರವನ್ನು ಕೌರಾ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ಅಧಿಕಾರಿ ಮನೀಶ್​ ಠಾಕೂರ್​ ತಿಳಿಸಿದ್ದಾರೆ.

ಇದನ್ನೂ ಓದಿ : Road Accident: ಚಲಿಸುತ್ತಿದ್ದಾಗಲೇ ಟಯರ್‌ ಸ್ಫೋಟ; ಕಾರು ಪಲ್ಟಿಯಾಗಿ ನಾಲ್ವರ ಸ್ಥಿತಿ ಗಂಭೀರ

ಘಟನೆ ಬಳಿಕ ಮದುವೆ ಖುಷಿಯಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಮೂಡಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಚಾವಣಿ ಹಾರಿ ಹೋಗಿತ್ತು

ಹೋಮ್​ ಥಿಯೇಟರ್ ಸ್ಫೋಟಗೊಂಡ ತೀವ್ರತೆಗೆ ಮನೆಯಲ್ಲಿರುವ ವಸ್ತುಗಳೆಲ್ಲವೂ ಛಿದ್ರಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ರೀತಿ ಕೊಠಡಿಯ ಚಾವಣಿ ಕೂಡ ಕುಸಿದು ಹೋಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಸ್ಫೋಟಗೊಂಡ ಹೋಮ್ ಥೀಯೇಟರ್​ ಒಳಗೆ ಗನ್​ಪೌಡರ್ ಇತ್ತು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಫೋಟದ ಸದ್ದು ಬಾಂಬ್​ನಂತೆಯೇ ಇತ್ತು ಹಾಗೂ ಅಷ್ಟೇ ತೀವ್ರತೆ ಹೊಂದಿತ್ತು ಎಂಬುದಾಗಿ ಅವರು ಹೇಳಿದ್ದಾರೆ. ಘಟನೆ ನಡೆದಿರುವ ಸ್ಥಳವು ರಾಯ್​ಪುರಕ್ಕಿಂತ 200 ಕಿಲೋ ಮೀಟರ್ ದೂರದಲ್ಲಿರುವ ನಕ್ಸಲ್​ ಪೀಡಿತ ಪ್ರದೇಶದಲ್ಲಿ ಆಗಿರುವ ಕಾರಣ ಉದ್ದೇಶಪೂರ್ವಕ ಕೃತ್ಯ ಇರಲೂಬಹುದು ಎಂದು ಅಂದಾಜಿಸಲಾಗಿದೆ.

ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ. ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ಗನ್​ ಪೌಡರ್ ಸೇರಿದಂತೆ ಯಾವುದೇ ಸ್ಫೋಟಕ ವಸ್ತುಗಳು ಲಭಿಸಿಲ್ಲ ಎಂದು ಹೇಳಿದ್ದಾರೆ.

Exit mobile version