ಅಯೋಧ್ಯೆ: ಹನ್ನೊಂದು ದಿನಗಳ ಕಠಿಣ ವ್ರತ ಪಾಲನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ರಾಮ್ ಲಲ್ಲಾ ನ ಪ್ರಾಣ ಪ್ರತಿಷ್ಠಾಪನೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದ್ದಾರೆ. ಆ ಬಳಿಕ ಅವರು ಮಾಡಿರುವ ಭಾಷಣ ದೇಶವಾಸಿಗಳ ಗಮನ ಸೆಳೆದಿದೆ. ಅದರ ಮುಖ್ಯಾಂಶ ಇಲ್ಲಿದೆ.
- ರಾಮ್ ಲಲ್ಲಾ ಇನ್ನು ಮುಂದೆ ಟೆಂಟ್ನಲ್ಲಲ್ಲ, ದಿವ್ಯ ಮಂದಿರದಲ್ಲಿರುತ್ತಾನೆ.
- ಜನವರಿ 22ರ ಈ ದಿನ ಸೂರ್ಯ ಹೊಸ ಭರವಸೆಯೊಂದಿಗೆ ಉದಯಿಸಿದ್ದಾನೆ.
- ಈ ದಿನ ಕ್ಯಾಲೆಂಡರ್ನ ಕೇವಲ ತಾರೀಖಲ್ಲ, ಹೊಸ ಕಾಲ ಚಕ್ರದ ಆರಂಭ.
- ರಾಮ ಮಂದಿರ ಮರು ನಿರ್ಮಾಣವು ಗುಲಾಮಿ ಮಾನಸಿಕತೆಯಿಂದ ದೇಶ ಹೊರ ಬಂದಿರುವುದರ ಸಂಕೇತವೂ ಹೌದು.
- ಸಾವಿರ ವರ್ಷಗಳ ಬಳಿಕವೂ ಇಂದಿನ ಈ ದಿನ, ಈ ಕ್ಷಣದ ಬಗ್ಗೆ ದೇಶದ ನಾಗರಿಕರು ಹೆಮ್ಮೆಯಿಂದ ಹೇಳಿಕೊಳ್ಳಲಿದ್ದಾರೆ.
- ರಾಮನ ಜತೆ ಪವನ ಪುತ್ರ ಹನುಮಾನ್ ಇರಲೇಬೇಕು. ಆತನಿಗೆ ನಮಿಸುತ್ತೇನೆ. ಜಾನಕಿ, ಲಕ್ಷ್ಮಣ, ಭರತ, ಶತೃಘ್ನರನ್ನೂ ನೆನೆಯುತ್ತೇನೆ.
- ಇದು ಕೇವಲ ಮಂದಿರ ಉದ್ಘಾಟನೆಯಲ್ಲ, ದೈವೀ ಅನುಭವ.
- ಶತಮಾನಗಳ ಬಳಿಕ ಇಡೀ ದೇಶ ಈಗ ಹರ್ಷದಿಂದ ಕೂಡಿದೆ. ಆಪತ್ತಿನ ಅಂತ್ಯದ ಸೂಚಕ ಇದು.
- ರಾಮ ಆ ಕಾಲದಲ್ಲಿ 14 ವರ್ಷ ವನವಾಸ ಅನುಭವಿಸಿದ. ಆದರೆ ರಾಮ್ಲಲ್ಲಾ ದಿವ್ಯ ಮಂದಿರಕ್ಕೆ ಮರಳಲು 500 ವರ್ಷಗಳು ಬೇಕಾದವು.
- ಮಂದಿರ ಮರು ನಿರ್ಮಾಣಕ್ಕಾಗಿ 500 ವರ್ಷ ತೆಗೆದುಕೊಂಡಿದ್ದಕ್ಕೆ ನಾನು ಭಗವಾನ್ ಶ್ರೀರಾಮನಲ್ಲಿ ಕ್ಷಮೆ ಕೋರುತ್ತೇನೆ.
- ತಡವಾಗಿಯಾದರೂ ನಾವೀಗ ನ್ಯಾಯಬದ್ಧವಾಗಿಯೇ ಮಂದಿರ ನಿರ್ಮಿಸಿದ್ದೇವೆ.
- 11 ದಿನಗಳ ವ್ರತದ ನಡುವೆ ನಾನು ಸಾಗರದಿಂದ (ರಾಮೇಶ್ವರಂ) ಸರಯೂ ನದಿಯತನಕ ಪಯಣಿಸಿದ್ದೇನೆ. ಎಲ್ಲಿ ನೋಡಿದರಲ್ಲಿ ರಾಮೋತ್ಸವದ ಛಾಯೆ ಕಂಡಿದ್ದೇನೆ.
- ಭಾರತದ ಕಣಕಣದಲ್ಲಿ, ಭಾರತೀಯರ ಮನಮನದಲ್ಲಿ ರಾಮ ಇದ್ದಾನೆ.
- ರಾಮ ಮಂದಿರ ಕಟ್ಟಿದರೆ ಬೆಂಕಿ ಬೀಳುತ್ತದೆ ಎಂದು ಕೆಲವರು ಹುಯಿಲೆಬ್ಬಿಸಿದರು. ಆದರೆ ಇವರು ಜನರ ಭಾವನೆ ಅರ್ಥ ಮಾಡಿಕೊಳ್ಳಲೇ ಇಲ್ಲ.
ಇದನ್ನೂ ಓದಿ: Ram Mandir: ನಾನು ನಾಸ್ತಿಕನಲ್ಲ-ಆಸ್ತಿಕ; ಜೈ ಶ್ರೀರಾಮ್ ಘೋಷಣೆ ಕೂಗಿದ ಸಿಎಂ!
रघुकुल रीत सदा चली आई,
— prajep official (@jep_17) January 22, 2024
प्राण जाई पर वचन न जाई#RamMandirPranPrathistha#RamLallaVirajman #RamLalla pic.twitter.com/LCFIuIUFuG
- ರಾಮ ಮಂದಿರ ನಿಮಾಣದಿಂದ ಬೆಂಕಿ ಅಲ್ಲ, ದೀಪ ಉರಿಯಲಿದೆ.
- ಮಂದಿರ ವಿರೋಧಿಗಳನ್ನು ನಾನು ಇಲ್ಲಿ ಆಮಂತ್ರಿಸುತ್ತೇನೆ. ಅವರು ಇಲ್ಲಿಗೆ ಬರಲಿ, ಮರು ಚಿಂತನೆ ನಡೆಸಲಿ.
- ರಾಮ ವಿವಾದ ಅಲ್ಲ, ಸಮಾಧಾನ. ರಾಮ ವರ್ತಮಾನ ಅಲ್ಲ ಅನಂತ ಕಾಲ. ರಾಮ ಎಲ್ಲರಿಗೂ ಸೇರಿದವನು.
- ಇದು ಕೇವಲ ವಿಗ್ರಹದ ಪ್ರಾಣ ಪ್ರತಿಷ್ಠೆ ಅಲ್ಲ. ಸಾಕ್ಷಾತ್ ಭಾರತೀಯರ ಮಾನವೀಯ ಮೌಲ್ಯದ, ಸರ್ವೋಚ್ಚ ಆದರ್ಶದ ಪ್ರಾಣ ಪ್ರತಿಷ್ಠಾಪನೆ.
- ಇದು ಕೇವಲ ದೇವ ಮಂದಿರ ಅಲ್ಲ, ಭಾರತದ ದೃಷ್ಟಿಯ, ಭಾರತದ ದರ್ಶನದ ಮಂದಿರ. ರಾಷ್ಟ್ರ ಚೇತನ ಮಂದಿರ.
- ರಾಮ ಪ್ರವಾಹ, ಪ್ರಭಾವ. ರಾಮ ನಿತ್ಯ ನಿರಂತರ. ರಾಮ ವಿಶ್ವಾತ್ಮ.
- ಕಾಲ ಚಕ್ರ ಬದಲಾಗಿದೆ. ಮುಂದಿನ ಸಾವಿರ ಸಾವಿರ ವರ್ಷಗಳ ಕಾಲ ಈ ಸಂಭ್ರಮ ಮುಂದುವರಿಯಲಿದೆ.
- ಇದು ಸರಿಯಾದ ಸಮಯ. ಇದು ಪವಿತ್ರ ಸಮಯ. ಮುಂದಿನ ಸಾವಿರ ವರ್ಷಗಳ ಭವಿಷ್ಯಕ್ಕೆ ನಾವೀಗ ಮುನ್ನುಡಿ ಬರೆಯಬೇಕು. ಭವ್ಯ ದಿವ್ಯ ಭಾರತದ ನಿರ್ಮಾಣಕ್ಕೆ ಪ್ರಮಾಣ ತೆಗೆದುಕೊಳ್ಳಬೇಕು.
Building the temple has been part of BJP’s election strategy for decades, Muslim residents of the erstwhile multicultural hub have sent their children and women to relatives in neighbouring towns, fearing attacks by Hindutva mob#BJP #RamMandirPranPrathistha #China #Israel pic.twitter.com/g6urbABIfl
— Meher Ali (@MeherAli72) January 22, 2024
- ಹನುಮಂತನ ಸೇವೆ, ಸಮರ್ಪಣೆ ನಮ್ಮದಾಗಬೇಕು. ಶಬರಿ ಹೇಳುತ್ತಿದ್ದಳು ರಾಮ ಬರುತ್ತಾನೆ ಅಂತ. ಅದೀಗ ನಿಜವಾಗಿದೆ.
- ಭಾರತದ ಏಳಿಗೆಗೆ ಇದು ಅಮೃತಕಾಲ. ಇನ್ನು ಮುಂದೆ ನಾವು ಸುಮ್ಮನೆ ಕೂರಬಾರದು, ಇನ್ನು ಮುಂದೆ ನಾವು ಮೈಮರೆಯಬಾರದು.
- ಬರಲಿರುವ ಸಮಯ ಸಿದ್ದಿಯ ಸಮಯ, ಏಳಿಗೆಯ ಸಮಯ.
- ಸತ್ಯ, ಪ್ರಾಮಾಣಿಕತೆಯೊಂದಿಗೆ ಒಗ್ಗಟ್ಟಿನಿಂದ ಹೋರಾಡಿದರೆ ಏನು ಬೇಕಾದರು ಸಾಧಿಸಬಹುದು ರಾಮ ಮಂದಿರವೇ ದೃಷ್ಟಾಂತ.
- ಈಗ ನಾವು ನಿಲ್ಲುವುದಿಲ್ಲ. ವಿಕಾಸದ ಹಾದಿಯಲ್ಲಿ ದಾಪುಗಾಲು ಹಾಕುತ್ತೇವೆ.