ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Modi Birthday) ಅವರ ಜನ್ಮವನ್ನು ಶನಿವಾರ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ, ದೇಶಾದ್ಯಂತ ಅವರ ಅಭಿಮಾನಿಗಳೂ ವಿವಿಧ ಚಟುವಟಿಕೆಗಳ ಮೂಲಕ ಆಚರಿಸುತ್ತಿದ್ದಾರೆ. ಇದರ ಬೆನ್ನಲ್ಲೇ ದೆಹಲಿಯ ರೆಸ್ಟೋರೆಂಟ್ ಒಂದು ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ತಿಂಡಿಪೋತರಿಗೆ ವಿಶೇಷ ಚಾಲೆಂಜ್ ಒಂದನ್ನು ನೀಡಿದೆ.
ಲುಟಿಯೆನ್ಸ್ ದೆಹಲಿಯಲ್ಲಿರುವ ಆರ್ಡೊರ್ ೨.೧ ಎಂಬ ರೆಸ್ಟೋರೆಂಟ್ ಮೋದಿ ಅಭಿಮಾನಿಗಳಿಗೆ, ತಿಂಡಿಪೋತರಿಗೆ ಸವಾಲು ಹಾಕಿದೆ. ರೆಸ್ಟೋರೆಂಟ್ ೫೬ ಇಂಚಿನ ಥಾಲಿ ತಯಾರಿಸುತ್ತದೆ. ತಟ್ಟೆಯಲ್ಲಿ ೫೬ ಬಗೆಯ ತಿಂಡಿಗಳೂ ಇರುತ್ತವೆ. ಇವೆಲ್ಲವನ್ನೂ ಯಾರು ತಿನ್ನುತ್ತಾರೋ ಅವರಿಗೆ ೮.೫ ಲಕ್ಷ ರೂ. ಬಹುಮಾನ ನೀಡುತ್ತದೆ. ಸೆಪ್ಟೆಂಬರ್ ೧೭ರಿಂದ ೧೦ ದಿನಗಳವರೆಗೆ ಆಫರ್ ಇರಲಿದೆ.
“ಸೆಪ್ಟೆಂಬರ್ ೧೭ರಿಂದ ೨೬ರ ಅವಧಿಯಲ್ಲಿ ಯಾರು ೫೬ ಇಂಚಿನ ಥಾಲಿ ತಿನ್ನುತ್ತಾರೋ ಅವರಿಗೆ ಎಂಟೂವರೆ ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಹಾಗೆಯೇ, ನಮ್ಮ ಕಡೆಯಿಂದಲೇ ಇಬ್ಬರು ಲಕ್ಕಿ ವಿನ್ನರ್‌ಗಳಿಗೆ ಕೇದಾರನಾಥ ಯಾತ್ರೆ ಕೈಗೊಳ್ಳಲು ವ್ಯವಸ್ಥೆ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದಾಗಿ ಈ ಚಟುವಟಿಕೆ ಕೈಗೊಳ್ಳುತ್ತಿದ್ದೇವೆ” ಎಂದು ರೆಸ್ಟೋರೆಂಟ್ ಮಾಲೀಕ ಸುವೆತ್ ಕಾಲ್ರಾ ತಿಳಿಸಿದ್ದಾರೆ.
ಇದನ್ನೂ ಓದಿ | Modi Birthday | ಬಂಡಿ ಕೋಟ್‌ಗೆ ನರೇಂದ್ರ ಮೋದಿ ಹೆಸರು ಸೇರಿದ್ದು ಹೇಗೆ?