Site icon Vistara News

Ayodhya Ram Mandir: ಅಯೋಧ್ಯೆ ರಾಮಮಂದಿರ ಸ್ಫೋಟಿಸುವುದಾಗಿ ಬೆದರಿಕೆ; ಭದ್ರತೆಗೆ ಹೆಚ್ಚಿನ ಪೊಲೀಸ್​ ಸಿಬ್ಬಂದಿ ನಿಯೋಜನೆ

Threat call to blow up Ram temple in Ayodhya

#image_title

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ರಾಮಮಂದಿರ (Ram Temple)ವನ್ನು ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದ ಎಂದು ಅಯೋಧ್ಯೆ ಪೊಲೀಸರು ತಿಳಿಸಿದ್ದಾರೆ. ಅಯೋಧ್ಯೆಯ ರಾಮಕೋಟ್​ ನಿವಾಸಿಯಾದ ಮನೋಜ್​ ಎಂಬವರಿಗೆ ಅಪರಿಚಿತ ನಂಬರ್​​ನಿಂದ ಕರೆ ಬಂದಿತ್ತು. ಇಡೀ ಶ್ರೀರಾಮಜನ್ಮಭೂಮಿ ಸಂಕೀರ್ಣವನ್ನೇ ಸ್ಫೋಟಿಸುವುದಾಗಿ ಆತನ ಹೇಳಿದ್ದಾನೆಂದು ಮನೋಜ್​ ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗುರುವಾರ ಬೆಳಗ್ಗೆ 10 ಗಂಟೆ ಹೊತ್ತಿಗೆ ಅಯೋಧ್ಯಾ ರಾಮಮಂದಿರ ಸ್ಫೋಟಿಸುವುದಾಗಿ ಕರೆ ಮಾಡಿದವನು ಹೇಳಿದ್ದ ಎಂದು ಮನೋಜ್​ ಅವರು ನಮಗೆ ಮಾಹಿತಿ ನೀಡುತ್ತಿದ್ದಂತೆ, ನಾವು ಅಯೋಧ್ಯೆಯ ಶ್ರೀರಾಮಮಂದಿರದ ಸುತ್ತ ಸೇರಿ, ಹಲವು ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದೆವು. ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದೆವು ಎಂದು ರಾಮ ಜನ್ಮಭೂಮಿ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿ ಸಂಜೀವ್​ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹಾಗೇ, ಈ ವಿಷಯವನ್ನು ಇಲ್ಲಿಗೇ ಬಿಡುವುದಿಲ್ಲ. ಹೆಚ್ಚಿನ ತನಿಖೆ ನಡೆಸಲಾಗುವುದು. ಕರೆ ಮಾಡಿದವನು ಯಾರು ಎಂದು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ನೇಪಾಳದಿಂದ ಅಯೋಧ್ಯೆಗೆ ತಲುಪಿದ 2 ದೊಡ್ಡ ಶಿಲೆಗಳು; ‘ರಾಮಲಲ್ಲಾ’ ಆಗಿ ಬದಲಾಗಲಿವೆ ಈ ಪವಿತ್ರ ಕಲ್ಲುಗಳು

ಅಯೋಧ್ಯೆಯಲ್ಲಿ ನೂತನ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ನಿನ್ನೆಯಷ್ಟೇ ನೇಪಾಳದಿಂದ ಎರಡು ಬೃಹದಾಕಾರದ ಸಾಲಿಗ್ರಾಮ ಶಿಲೆಗಳು ಇಲ್ಲಿಗೆ ಬಂದು ತಲುಪಿವೆ. ಈ ಶಿಲೆಗಳಿಂದ ರಾಮಲಲ್ಲಾನ ಮೂರು ಅಡಿ ಎತ್ತರದ ಮೂರ್ತಿ ಕೆತ್ತನೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಹಾಗೇ 2024ರ ಸಂಕ್ರಾಂತಿ ಹೊತ್ತಿಗೆ ಅಯೋಧ್ಯಾ ರಾಮಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತವಾಗುತ್ತದೆ ಎಂದೂ ಹೇಳಲಾಗುತ್ತಿದೆ.

Exit mobile version