Site icon Vistara News

Jaipur Earthquake: ಜೈಪುರದಲ್ಲಿ ಅರ್ಧ ಗಂಟೆಯಲ್ಲೇ 3 ಬಾರಿ ಕಂಪಿಸಿದ ಭೂಮಿ; ಭೂಕಂಪದ ವಿಡಿಯೊ ವೈರಲ್

Earthquake In Jaipur

Three back-to-back Earthquakes In Jaipur in a span of half an hour

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಶುಕ್ರವಾರ (July 21) ಬೆಳಗಿನ ಜಾವ ಅರ್ಧ ಗಂಟೆಯ ಅವಧಿಯಲ್ಲೇ ಮೂರು ಬಾರಿ ಭೂಕಂಪನದ (Jaipur Earthquake) ಅನುಭವವಾಗಿದೆ. ಬೆಳಗಿನ ಜಾವ 4 ಗಂಟೆಯಿಂದ 4.30ರ ಅವಧಿಯಲ್ಲಿ ಜನರಿಗೆ ಮೂರು ಬಾರಿ ಭೂಕಂಪನದ ಅನುಭವವಾಗಿದ್ದು, ಹೆಚ್ಚಿನ ಆತಂಕ ಮನೆಮಾಡಿತ್ತು ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರದ (NCS) ಪ್ರಕಾರ ರಿಕ್ಟರ್‌ ಮಾಪನದಲ್ಲಿ 3.4ರ ತೀವ್ರತೆ ದಾಖಲಾಗಿದೆ. ಆದಾಗ್ಯೂ, ಮೂರು ಬಾರಿ ಭೂಕಂಪನ ಸಂಭವಿಸಿದರೂ ಯಾವುದೇ ಕಟ್ಟಡಗಳಿಗೆ ಹಾನಿಯುಂಟಾಗಿಲ್ಲ ಹಾಗೂ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊದಲ ಭೂಕಂಪನದ ತೀವ್ರತೆ

ಮೊದಲ ಭೂಕಂಪನವು 4.09ಕ್ಕೆ ಸಂಭವಿಸಿದೆ. ಇದು ರಿಕ್ಟರ್‌ ಮಾಪನದಲ್ಲಿ 4.4 ತೀವ್ರತೆ ದಾಖಲಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಅಂದರೆ 4.22ಕ್ಕೆ ಮತ್ತೆ ಭೂಮಿ ಕಂಪಿಸಿದೆ. ಇದು 3.1 ತೀವ್ರತೆ ಇತ್ತು. ಮತ್ತೆ ಎರಡೇ ನಿಮಿಷದಲ್ಲಿ ಮೂರನೇ ಬಾರಿಗೆ ಭೂಮಿ ಕಂಪಿಸಿದೆ. ಇದು 3.4 ತೀವ್ರತೆ ಇತ್ತು ಎಂದು ಎನ್‌ಸಿಎಸ್‌ ತಿಳಿಸಿದೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಪ್ರಬಲ ಭೂಕಂಪ; ಪಂಜಾಬ್​, ದೆಹಲಿಯಲ್ಲೂ ನಡುಗಿದ ಭೂಮಿ

ಭೂಕಂಪದ ವಿಡಿಯೊ

ಬೆಳಗಿನ ಜಾವದ ಸಿಹಿ ನಿದ್ದೆಯಲ್ಲಿದ್ದ ಜನರಿಗೆ ಭೂಮಿ ಕಂಪಿಸಿದ ಅನುಭವವಾಗುತ್ತಲೇ ಮನೆಯಿಂದ ಹೊರಗೆ ಬಂದಿದ್ದಾರೆ. ಭೂಕಂಪನದ ತೀವ್ರತೆ ಹಾಗೂ ಪರಿಣಾಮ ಹೆಚ್ಚಾಗಿರದಿದ್ದರೂ ಆತಂಕ ಮನೆ ಮಾಡಿದ್ದ ಹಿನ್ನೆಲೆಯಲ್ಲಿ ಜನ ಮತ್ತೆ ನಿದ್ದೆಗೆ ಜಾರಲಿಲ್ಲ ಎಂದು ತಿಳಿದುಬಂದಿದೆ.

Exit mobile version