Site icon Vistara News

Traffic Rules: ಚಪ್ಪಲಿ ಧರಿಸಿ ಬೈಕ್ ಓಡಿಸಿದರೆ ದಂಡ ವಿಧಿಸಲಾಗುತ್ತದೆಯೆ?

Traffic Rules

ಚಪ್ಪಲಿ ಧರಿಸಿಕೊಂಡು (wearing slippers) ಬೈಕ್ ಅಥವಾ ಸ್ಕೂಟರ್ ಓಡಿಸುವಂತಿಲ್ಲ. ಒಂದು ವೇಳೆ ಓಡಿಸಿದರೆ ಟ್ರಾಫಿಕ್ (Traffic Rules) ಪೊಲೀಸರು ದಂಡ ವಿಧಿಸುತ್ತಾರೆಯೇ, ಈ ಕುರಿತು ಮೋಟಾರು ವಾಹನ ಕಾಯ್ದೆ (Motor Vehicle Act) ಏನು ಹೇಳುತ್ತದೆ, ಚಪ್ಪಲಿ ಧರಿಸಿ ಬೈಕ್ ಚಲಾಯಿಸಿದ್ದಕ್ಕಾಗಿ ಸಂಚಾರ ಪೊಲೀಸರು ಚಲನ್ ಮಾಡಬಹುದೇ ಅಥವಾ ಇಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಸುರಕ್ಷತೆಯ ದೃಷ್ಟಿಯಿಂದ ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟರ್ ಸವಾರಿ ಮಾಡುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಹಲವಾರು ಕಾರಣಗಳೂ ಇವೆ.

ಚಪ್ಪಲಿಗಳು ಸಾಮಾನ್ಯವಾಗಿ ಪಾದಗಳಿಗೆ ಕಡಿಮೆ ಹಿಡಿತವನ್ನು ನೀಡುತ್ತವೆ. ಇದರಿಂದ ಬೈಕ್ ಅಥವಾ ಸ್ಕೂಟರ್‌ನ ಬ್ರೇಕ್ ಅಥವಾ ಗೇರ್‌ಗಳನ್ನು ಸರಿಯಾಗಿ ನಿಯಂತ್ರಿಸಲು ಕಷ್ಟವಾಗುತ್ತದೆ. ಹಠಾತ್ತಾಗಿ ಬ್ರೇಕ್ ಹಾಕುವ ಅಗತ್ಯವಿದ್ದಲ್ಲಿ ಚಪ್ಪಲಿಗಳನ್ನು ಧರಿಸುವುದರಿಂದ ಪಾದಗಳು ಜಾರಬಹುದು, ಇದು ಅಪಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಚಪ್ಪಲಿ ಧರಿಸಿ ಚಾಲನೆ ಮಾಡುವಾಗ ಪಾದಗಳು ಹೆಚ್ಚು ತೆರೆದುಕೊಳ್ಳುತ್ತವೆ. ಅಪಘಾತ ಅಥವಾ ಹಠಾತ್ ಬಿದ್ದ ಸಂದರ್ಭದಲ್ಲಿ ಪಾದಗಳಿಗೆ ಗಾಯವಾಗಬಹುದು. ಬೂಟುಗಳನ್ನು ಧರಿಸುವುದರಿಂದ ಪಾದಗಳಿಗೆ ಹೆಚ್ಚಿನ ರಕ್ಷಣೆ ಸಿಗುತ್ತದೆ.

ರಸ್ತೆ ಒದ್ದೆಯಾಗಿದ್ದರೆ ಅಥವಾ ಜಾರುತ್ತಿದ್ದರೆ ಚಪ್ಪಲಿ ಧರಿಸಿ ಸ್ಕೂಟರ್ ಅಥವಾ ಬೈಕ್ ಓಡಿಸುವುದರಿಂದ ಪಾದಗಳು ಸುಲಭವಾಗಿ ಜಾರಿಬೀಳಬಹುದು ಮತ್ತು ಸಮತೋಲನವನ್ನು ಕಳೆದುಕೊಳ್ಳಬಹುದು.

ನಿಯಮ ಏನಿದೆ?

ಅನೇಕ ರಾಜ್ಯಗಳಲ್ಲಿ ಚಪ್ಪಲಿಗಳನ್ನು ಧರಿಸಿ ಬೈಕ್ ಅಥವಾ ಸ್ಕೂಟರ್ ಸವಾರಿ ಮಾಡುವುದನ್ನು ಸಂಚಾರ ನಿಯಮಗಳ ಅಡಿಯಲ್ಲಿ ನಿಷೇಧಿಸಲಾಗಿದೆ ಮತ್ತು ಹಾಗೆ ಮಾಡಿದರೆ ದಂಡವನ್ನೂ ವಿಧಿಸಬಹುದು. ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು ಮತ್ತು ಅಪಘಾತಗಳನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಹೀಗಾಗಿ ಬೈಕ್ ಅಥವಾ ಸ್ಕೂಟರ್ ಅನ್ನು ಓಡಿಸುವಾಗ ಯಾವಾಗಲೂ ಪಾದಗಳಿಗೆ ಸಾಕಷ್ಟು ಹಿಡಿತ ಮತ್ತು ರಕ್ಷಣೆಯನ್ನು ಒದಗಿಸುವ ಸುರಕ್ಷಿತ ಬೂಟುಗಳನ್ನು ಧರಿಸಿ.

ಇದನ್ನೂ ಓದಿ: Cognizant: ವಾರ್ಷಿಕ ಕೇವಲ 2.5 ಲಕ್ಷ ರೂ . ಸಂಬಳ ಪ್ಯಾಕೇಜ್ ಘೋಷಿಸಿ ಟೀಕೆಗೆ ಗುರಿಯಾದ ಕಾಗ್ನಿಜೆಂಟ್!

ಟ್ರಾಫಿಕ್ ಚಲನ್ ನೀಡಲಾಗುತ್ತದೆಯೇ?

ವಾಹನ ಓಡಿಸುವಾಗ ಚಪ್ಪಲಿ ಧರಿಸುವುದು ಅಥವಾ ಧರಿಸದಿರುವುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರ. ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟರ್ ಓಡಿಸಿದರೆ ಸಂಚಾರ ಪೊಲೀಸರು ದಂಡದ ಚಲನ್ ನೀಡಲು ಸಾಧ್ಯವಿಲ್ಲ.


ಮೋಟಾರು ವಾಹನ ಕಾಯ್ದೆಯಲ್ಲಿ ಅಂತಹ ಯಾವುದೇ ಅವಕಾಶವಿಲ್ಲ. ನಿತಿನ್ ಗಡ್ಕರಿ ಅವರ ಎಕ್ಸ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದು, ಇದರ ಪ್ರಕಾರ ಟ್ರಾಫಿಕ್ ಪೊಲೀಸರು ಚಪ್ಪಲಿ ಧರಿಸಿ ಬೈಕ್ ಅಥವಾ ಸ್ಕೂಟರ್ ಓಡಿಸುವುದಕ್ಕೆ ದಂಡದ ಚಲನ್ ನೀಡುವಂತಿಲ್ಲ ಎಂದು ಹೇಳಿದ್ದಾರೆ.

Exit mobile version