ರಾಜಸ್ಥಾನದಲ್ಲಿ ಮುಂಜಾನೆಯೇ ರೈಲೊಂದು ಅಪಘಾತಕ್ಕೀಡಾಗಿದೆ. ಸೂರ್ಯನಗರಿ ಎಕ್ಸ್ಪ್ರೆಸ್ ರೈಲು, ಜೋಧ್ಪುರ ವಿಭಾಗದ ರಾಜ್ಕಿವಾಸ್-ಬೊಮಾದ್ರ ಮಾರ್ಗದ ಪಾಲಿ ಎಂಬಲ್ಲಿ ಮುಂಜಾನೆ 3.30ರ ಹೊತ್ತಿಗೆ ಹಳಿತಪ್ಪಿದ ಪರಿಣಾಮ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಈ ರೈಉ ಬಾಂದ್ರಾ ರೈಲ್ವೆ ಸ್ಟೇಶನ್ನಿಂದ ಜೋಧ್ಪುರದತ್ತ ಸಾಗುತ್ತಿತ್ತು ಎಂದು ವರದಿಯಾಗಿದೆ.
ರೈಲು ಹಳಿತಪ್ಪಲು ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿದ ಕೂಡಲೇ ವಾಯುವ್ಯ ರೈಲ್ವೆ ವಿಭಾಗದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ಮಾಡಿದ್ದಾರೆ. ಗಾಯಗೊಂಡವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತವಾದ ಹೊತ್ತಲ್ಲಿ ರೈಲಿನಲ್ಲಿಯೇ ಇದ್ದ ಪ್ರಯಾಣಿಕರೊಬ್ಬರು ಎಎನ್ಐ ಮಾಧ್ಯಮದ ಜತೆ ಮಾತನಾಡಿ, ‘ರೈಲು ವಿಚಿತ್ರವಾಗಿ ನಡುಗಿದಂತೆ ಭಾಸವಾಯಿತು. ಮಾರ್ವಾರ್ ಜಂಕ್ಷನ್ನಿಂದ ಹೊರಟ ಕೆಲವೇ ಹೊತ್ತಲ್ಲಿ ಹೀಗಾಯಿತು. ಕಡೆಗೆ ಒಂದು ಕಡೆ ರೈಲು ನಿಂತಿತು. ಕೆಳಗೆ ಇಳಿದು ನೋಡಿದಾಗ ಸುಮಾರು 8 ಕೋಚ್ಗಳು ರೈಲಿನಿಂದ ಬೇರ್ಪಟ್ಟು ಬಿದ್ದಿದ್ದವು. 15-20 ನಿಮಿಷದಲ್ಲಿ ಆಂಬ್ಯುಲೆನ್ಸ್ ಬಂದು, ಗಾಯಾಳುಗಳನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಯಿತು’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ ಗಡಿಭಾಗದಲ್ಲಿ ರೈಲ್ವೆ ಹಳಿ ತಪ್ಪಿಸಲು ಭಾರಿ ಸಂಚು