Site icon Vistara News

Tunisha Sharma Death | ಪ್ರಿಯಕರ ಶಿಜಾನ್​​ಗೆ ಇತ್ತು ಹಲವು ಹುಡುಗಿಯರ ಸಂಗ; ನಟಿ ತುನಿಶಾ ಖಿನ್ನತೆಗೆ ಇದೇ ಕಾರಣವಾಗಿತ್ತು

Tunisha Sharma Death Case Sheezan Khan is In Touch With Many Girls

ಮುಂಬಯಿ: ಬಾಲಿವುಡ್​ ಕಿರುತೆರೆ ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್​​ನಲ್ಲಿ ಆಕೆಯ ಸಹನಟ ಶಿಜಾನ್​ ಮೊಹಮ್ಮದ್​ ಖಾನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಶಿಜಾನ್​ ಮತ್ತು ತುನಿಶಾ ನಡುವೆ ಅಫೇರ್​ ಇತ್ತು. 15 ದಿನಗಳ ಹಿಂದಷ್ಟೇ ಇವರಿಬ್ಬರ ಪ್ರೀತಿ ಮುರಿದುಬಿದ್ದಿತ್ತು. ಶಿಜಾನ್​ ಖಾನ್​​ನೇ ಮುಂದಾಗಿ ಬ್ರೇಕಪ್​ ಮಾಡಿಕೊಂಡಿದ್ದ. ಇದರಿಂದ ಮನನೊಂದು ತುನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಎಫ್​ಐಆರ್​​ನಲ್ಲಿ ಉಲ್ಲೇಖಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ತುನಿಶಾ ಶರ್ಮಾರ ಸೋದರಮಾವ ಪವನ್​ ಶರ್ಮಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಇನ್ನೊಂದು ಮಹತ್ವದ ವಿಷಯ ಹೇಳಿದ್ದಾರೆ. ‘ನಮಗೆ ತುನಿಶಾ ಇನ್ನಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ನಾವೆಲ್ಲ ತುಂಬ ಶಾಕ್​​ನಲ್ಲಿ ಇದ್ದೇವೆ. ಮೀರಾ ರಸ್ತೆಯಲ್ಲಿರುವ ಇಂದ್ರಪ್ರಸ್ಥ ಎಂಬ ಕಟ್ಟಡದಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು. ಇಡೀ ಮನೆಯ ಖರ್ಚು ನಿಭಾಯಿಸಿಕೊಂಡು, ಅಮ್ಮನನ್ನೂ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು. ತುನಿಶಾ ಮತ್ತು ಶಿಜಾನ್​ ಮಧ್ಯೆ ಪ್ರೀತಿ ಸಂಬಂಧವಿತ್ತು. ಆದರೆ ಶಿಜಾನ್​ ಪ್ರಾಮಾಣಿಕನಾಗಿರಲಿಲ್ಲ. ತುನಿಶಾ ಜತೆ ಪ್ರೀತಿಯಲ್ಲಿ ಇದ್ದರೂ, ಅದೇ ಸಮಯದಲ್ಲಿ ಇನ್ನೂ ಹಲವು ಹುಡುಗಿಯರ ಜತೆ ಸಂಪರ್ಕದಲ್ಲಿದ್ದ. ಬೇರೆ ಹುಡುಗಿಯರೊಂದಿಗೆ ಶಿಜಾನ್ ಆತ್ಮೀಯನಾಗಿ ಇರುವುದನ್ನು ನೋಡಿ ತುನಿಶಾ ತುಂಬ ಬೇಸರ ಮಾಡಿಕೊಂಡಿದ್ದಳು. ಆಕೆಗೆ ಇದೇ ದೊಡ್ಡ ಕೊರಗಾಗಿತ್ತು. ಖಿನ್ನತೆಗೂ ಜಾರಿದ್ದಳು.

ಶಿಜಾನ್​ ತನಗೆ ವಂಚನೆಯನ್ನು ಮಾಡುತ್ತಿದ್ದಾನೆ ಎಂಬುದು ಡಿ.16ರಂದು ಆಕೆಗೆ ಸ್ಪಷ್ಟವಾಗಿ ಅರ್ಥವಾಗಿತ್ತು. ಆಗಿನಿಂದಲೂ ಇನ್ನಷ್ಟು ನೋವಿಗೆ ಜಾರಿದ್ದಳು. ಮಗಳ ಪರಿಸ್ಥಿತಿ ನೋಡಲಾಗೆ ಆಕೆಯ ತಾಯಿ ಶಿಜಾನ್​ಗೆ ಕರೆ ಮಾಡಿ, ‘ನೀನು ನನ್ನ ಮಗಳನ್ನು ನಿಜವಾಗಿಯೂ ಪ್ರೀತಿಸಿಲ್ಲ ಎಂದಾದ ಮೇಲೆ ಆಕೆಗೆ ಯಾಕಿಷ್ಟು ಆತ್ಮೀಯನಾಗಬೇಕಿತ್ತು? ಈಗ್ಯಾಕೆ ದೂರ ಹೊರಟೆ? ಇದೆಲ್ಲ ಸರಿಯಲ್ಲ ನೋಡು’ ಎಂದು ಕಟುವಾಗಿಯೇ ಮಾತನಾಡಿದ್ದರು. ಇಷ್ಟೆಲ್ಲ ಆದ ಬಳಿಕ ಈಗ ತುನಿಶಾ ಇನ್ನಿಲ್ಲವಾಗಿದ್ದಾಳೆ. ನನಗೆ ಪೊಲೀಸರ ಮೇಲೆ ನಂಬಿಕೆಯಿದೆ. ಆರೋಪಿ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗುತ್ತದೆ ಎಂಬ ಭರವಸೆ ಇದೆ’ ಎಂದು ಹೇಳಿದ್ದಾರೆ.

ತುನಿಶಾ ಶರ್ಮಾ ಅವರು ಮಹಾರಾಷ್ಟ್ರದ ಸೀರಿಯಲ್​ ಸೆಟ್​​ವೊಂದರಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುನಿಶಾ ಸಾಯುತ್ತಿದ್ದಂತೆ ಆಕೆಯ ತಾಯಿ ಶಿಜಾನ್​ ವಿರುದ್ಧ ದೂರು ಕೊಟ್ಟಿದ್ದರು. ಈ ಮಧ್ಯೆ ತುನಿಶಾ ಶರ್ಮಾ ಗರ್ಭಿಣಿಯಾಗಿದ್ದರು ಎಂಬುದೊಂದು ರೂಮರ್​ ಕೂಡ ಹಬ್ಬಿತ್ತು. ಆದರೆ ಆಕೆ ಗರ್ಭಿಣಿ ಆಗಿರಲಿಲ್ಲ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಪೋಸ್ಟ್​ಮಾರ್ಟಮ್​ ರಿಪೋರ್ಟ್​ ಕೂಡ ಹೊರಬಿದ್ದಿದೆ. ಡಿ.27ರಂದು ಆಕೆಯ ಅಂತ್ಯಸಂಸ್ಕಾರ ನಡೆಯುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Tunisha Sharma | ನಟಿ ತುನಿಶಾ ಆತ್ಮಹತ್ಯೆಗೆ ಶಿಜಾನ್​ ಮೊಹಮ್ಮದ್​ ಖಾನ್​​ನೊಂದಿಗಿನ ಬ್ರೇಕಪ್​ ಕಾರಣ ಎಂದ ಪೊಲೀಸ್​​

Exit mobile version