ಮುಂಬಯಿ: ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಕೇಸ್ನಲ್ಲಿ ಆಕೆಯ ಸಹನಟ ಶಿಜಾನ್ ಮೊಹಮ್ಮದ್ ಖಾನ್ ಪೊಲೀಸರಿಂದ ಬಂಧಿತನಾಗಿ ವಿಚಾರಣೆ ಎದುರಿಸುತ್ತಿದ್ದಾನೆ. ಅಲಿಬಾಬಾ ದಾಸ್ತಾನ್ ಇ ಕಾಬೂಲ್ ಟಿವಿ ಸೀರೀಸ್ನ ಮುಖ್ಯ ಪಾತ್ರಧಾರಿಯಾಗಿದ್ದ ತುನಿಶಾ ಅದರದ್ದೇ ಶೂಟಿಂಗ್ ಸೆಟ್ನಲ್ಲಿರುವ ಶಿಜಾನ್ ಕೋಣೆಯ ಟಾಯ್ಲೆಟ್ನಲ್ಲಿ ಡಿಸೆಂಬರ್ 24ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತುನಿಶಾ ಸಾವನ್ನಪ್ಪುತ್ತಿದ್ದಂತೆ ಆಕೆಯ ತಾಯಿ ವನಿತಾ ಶರ್ಮಾ ಅವರು ಶಿಜಾನ್ ಖಾನ್ ವಿರುದ್ಧ ದೂರು ಕೊಟ್ಟಿದ್ದರು. ಶಿಜಾನ್ ನನ್ನ ಮಗಳಿಗೆ ಮೋಸ ಮಾಡಿದ. ಮದುವೆಯಾಗುತ್ತೇನೆ ಎಂದವ, ಬ್ರೇಕಪ್ ಮಾಡಿಕೊಂಡ. ಇದೇ ನೋವಲ್ಲೇ ನನ್ನ ಮಗಳು ಸಾವನ್ನಪ್ಪಿದಳು ಎಂದು ಅವರು ಹೇಳುತ್ತಿದ್ದಾರೆ. ಇತ್ತ ಶಿಜಾನ್ ಖಾನ್ ಪೊಲೀಸರಿಗೆ ಹೇಳಿಕೆ ನೀಡಿ ‘ನಾನು ಶ್ರದ್ಧಾ ಹತ್ಯೆ ಪ್ರಕರಣ ನೋಡಿ ವಿಚಲಿತನಾಗಿದ್ದೆ. ಶ್ರದ್ಧಾ ಹತ್ಯೆಯಾದ ಬಳಿಕ ಈ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡುತ್ತಿದ್ದೇನೆ. ನನ್ನ ಧರ್ಮದ ಕಾರಣಕ್ಕೇ ನಾನು ತುನಿಶಾ ಜತೆ ಸಂಬಂಧ ಮುರಿದುಕೊಂಡೆ’ ಎಂದು ಹೇಳಿದ್ದಾನೆ.
ಒಟ್ಟಿಗೇ ಕುಳಿತು ಊಟ ಮಾಡಿದ್ದರು
ಡಿಸೆಂಬರ್ 24ರಂದು ಶೂಟಿಂಗ್ ಸೆಟ್ನಲ್ಲಿ ಏನಾಯಿತು ಎಂಬುದನ್ನು ಅಲ್ಲಿನವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಂದು ತುನಿಶಾ ಮತ್ತು ಶಿಜಾನ್ ಒಟ್ಟಿಗೇ ಕುಳಿತು ಮಧ್ಯಾಹ್ನದ ಊಟ ಮಾಡಿದ್ದರು. ಸಾಮಾನ್ಯವಾಗಿ ಬೆಳಗ್ಗೆಯಿಂದಲೂ ಚಿತ್ರೀಕರಣ ಪ್ರಾರಂಭವಾದಾಗ ಮಧ್ಯಾಹ್ನ 1ರಿಂದ 2ಗಂಟೆವರೆಗೆ ಊಟದ ಬಿಡುವು ಇರುತ್ತದೆ. ಆ ಸಮಯದಲ್ಲಿ ಎಲ್ಲರೂ ಒಟ್ಟಿಗೇ ಕುಳಿತು ಊಟ ಮಾಡುವುದು ವಾಡಿಕೆ. ಅದರಂತೆ ಡಿಸೆಂಬರ್ 24ರಂದೂ ಕೂಡ ತುನಿಶಾ, ಶಿಜಾನ್ ಮತ್ತು ಆ ಸೆಟ್ನಲ್ಲಿದ್ದ ಪ್ರೊಡಕ್ಷನ್ ವಿಭಾಗದವರು, ಇತರ ಕಲಾವಿದರು ಎಲ್ಲ ಸೇರಿ ಒಟ್ಟಿಗೇ ಕುಳಿತು ಹರಟುತ್ತ ಊಟ ಮಾಡಿದ್ದರು. ಅದಾಗಲೇ ತುನಿಶಾ ಮತ್ತು ಶಿಜಾನ್ ನಡುವೆ ಬ್ರೇಕಪ್ ಆಗಿದ್ದರೂ ಏನೂ ವ್ಯತ್ಯಾಸ ಅನ್ನಿಸಲಿಲ್ಲ. ಆದರೆ ಊಟದ ನಂತರ ಶೌಚಗೃಹಕ್ಕೆ ಹೋದ ಶಿಜಾನ್ ಒಂದು ತಾಸಾದರೂ ಹೊರಗೆ ಬರಲಿಲ್ಲ. ಬಾಗಿಲು ಮುರಿದು ಒಳಗೆ ಆಕೆಯ ಶವ ನೇತಾಡುತ್ತಿತ್ತು ಎಂದು ಅಂದು ಶೂಟಿಂಗ್ ಸೆಟ್ನಲ್ಲಿ ಇದ್ದವರು ತಿಳಿಸಿದ್ದಾರೆ.
ಇದನ್ನೂ ಓದಿ: Tunisha Sharma Death | ತುನಿಶಾ ಶರ್ಮಾ ಜತೆ ಬ್ರೇಕಪ್‌ಗೆ ಶ್ರದ್ಧಾ ಮರ್ಡರ್ ಕೇಸ್ ಕಾರಣ, ಪೊಲೀಸರಿಗೆ ಶಿಜಾನ್ ಹೇಳಿದ್ದೇನು?