ನವದೆಹಲಿ: ಕೇಂದ್ರ ಸಚಿವ ಸಂಪುಟವು, ಭಾರತೀಯ ಟೆಲಿವಿಷನ್ ಚಾನೆಲ್‌ಗಳ (TV Channels) ಅಪ್‌ಲಿಂಕಿಂಗ್ ಮತ್ತು ಡೌನ್‌ಲಿಂಕಿಂಗ್ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಇದರ ಅನ್ವಯ, ಟಿವಿ ಚಾನೆಲ್‌ಗಳು, ಪ್ರತಿ ದಿನ ಅರ್ಧ ಗಂಟೆ ಸಾರ್ವಜನಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿಯ ಕಂಟೆಂಟ್ ಅನ್ನು ಪ್ರಸಾರ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಈ ಹೊಸ ಮಾರ್ಗದರ್ಶಿ ಸೂತ್ರಗಳು ನವೆಂಬರ್ 9ರಿಂದಲೇ ಜಾರಿಗೆ ಬಂದಿದ್ದು, ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯ ವಸ್ತು ಪರಿಕಲ್ಪನೆ ಮತ್ತು ಸೃಷ್ಟಿಗೆ ಕಾಲಾವಕಾಶವನ್ನು ನೀಡಲಾಗುವುದು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ತಿಳಿಸಿದೆ.
ಕಂಟೆಂಟ್ ಕ್ರಿಯೇಟ್ ಮಾಡಲು ಅನುಕೂಲವಾಗುವಂತೆ ಸರ್ಕಾರವೇ 8 ಥೀಮ್‌ಗಳನ್ನು ಒದಗಿಸಿದೆ. ಶಿಕ್ಷಣ ಮತ್ತು ಸಾಕ್ಷರತೆ ಪ್ರಸಾರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ವ್ಯವಹಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಮಹಿಳಾ ಸಬಲೀಕರಣ, ಸಮಾಜದ ಶೋಷಿತ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ ಮತ್ತು ಸಂಸ್ಕೃತಿ ಪರಂಪರೆ ಮತ್ತು ರಾಷ್ಟ್ರೀಯ ಸಮಗ್ರತೆಯನ್ನು ಒಳಗೊಂಡ ಕಾರ್ಯಕ್ರಮಗಳನ್ನು ಚಾನೆಲ್‌ಗಳು ಪ್ರಸಾರ ಮಾಡಬೇಕಾಗುತ್ತದೆ.
ಅಪ್‌ಲಿಂಕ್, ಡೌನ್‌ಲಿಂಕ್
ದೇಶದಲ್ಲಿ 11 ವರ್ಷದ ಬಳಿಕ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್ (Uplinking) ಹಾಗೂ ಡೌನ್‌ಲಿಂಕಿಂಗ್‌ಗೆ (Downlinking) ನೂತನ ಮಾರ್ಗಸೂಚಿಗಳನ್ನು ಹೊರಡಿಸಲು ಕೇಂದ್ರ ಸಚಿವ ಸಂಪುಟ ಸಭೆ (Union Cabinet) ಸಮ್ಮತಿ ಸೂಚಿಸಿದೆ. 2011ರಲ್ಲಿ ಕೊನೆಯ ಬಾರಿ ಮಾರ್ಗಸೂಚಿಗಳನ್ನು ಬದಲಾಯಿಸಲಾಗಿತ್ತು
ಭಾರತದಲ್ಲಿ ಟಿವಿ ಚಾನೆಲ್‌ಗಳ ಅಪ್‌ಲಿಂಕ್ ಮತ್ತು ಡೌನ್‌ಲಿಂಕ್ ಟೆಲಿಪೋರ್ಟ್‌ಗಳು, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ (DSNG) ಅಥವಾ ಸ್ಯಾಟಲೈಟ್ ಸುದ್ದಿ ಸಂಗ್ರಹ (SNG) ಅಥವಾ ಎಲೆಕ್ಟ್ರಾನಿಕ್ ಸುದ್ದಿ ಸಂಗ್ರಹ (ENG) ವ್ಯವಸ್ಥೆಗಳು, ಭಾರತೀಯ ಸುದ್ದಿ ಸಂಸ್ಥೆಗಳಿಂದ ಅಪ್‌ಲಿಂಕ್ ಮತ್ತು ನೇರ ಪ್ರಸಾರದ ತಾತ್ಕಾಲಿಕ ಅಪ್‌ಲಿಂಕ್ ಬಳಕೆಗೆ ನೋಂದಣಿಯಾದ ಸಂಸ್ಥೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ನೂತನ ಮಾರ್ಗಸೂಚಿಗಳು ಸುಲಭಗೊಳಿಸುತ್ತವೆ.
ಇದನ್ನೂ ಓದಿ | Union Cabinet | 11 ವರ್ಷದ ಬಳಿಕ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್, ಡೌನ್‌ಲಿಂಕಿಂಗ್ ಮಾರ್ಗಸೂಚಿ ಬದಲು, ಏನಿದೆ ವಿಶೇಷ?