ಲಾಸ್ ಏಂಜಲೀಸ್: ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿನ ಜತೆಗೆ ಭಾರತದ ಒಂದು ಸಾಕ್ಷ್ಯ ಚಿತ್ರ ಹಾಗೂ ಕಿರು ಚಿತ್ರವು ಆಸ್ಕರ್ ಪ್ರಶಸ್ತಿಗೆ (Oscars 2023 Nominations) ನಾಮನಿರ್ದೇಶನಗೊಂಡಿವೆ. ಅತ್ಯುತ್ತಮ ಸಾಕ್ಷ್ಯಚಿತ್ರ ಕೆಟಗರಿಯಲ್ಲಿ (Best Documentary Feature Film) ಆಲ್ ದಿ ಬ್ರೆತ್ಸ್ (All The Breathes) ನಾಮಿನೇಟ್ ಆಗಿದೆ. ಹಾಗೆಯೇ, ಅತ್ಯುತ್ತಮ ಕಿರು ಚಿತ್ರ ವಿಭಾಗದಲ್ಲಿ (Best Short Documentary) ದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers), ಅತ್ಯುತ್ತಮ ಕಿರು ಚಿತ್ರ ವಿಭಾಗದಲ್ಲಿ (Best Short Documentary) ದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers) ನಾಮನಿರ್ದೇಶನಗೊಂಡಿದೆ.
ಆಲ್ ದಿ ಬ್ರೆತ್ಸ್ ಡಾಕ್ಯುಮೆಂಟರಿಯನ್ನು ಶೌನಕ್ ಸೇನ್ ಅವರು ನಿರ್ದೇಶಿಸಿದ್ದು, ಇದು 15 ಡಾಕ್ಯುಮೆಂಟರಿಗಳುಳ್ಳ ಸ್ಪರ್ಧೆಗೆ ಆಯ್ಕೆಯಾಗಿತ್ತು. ಈಗ ಆಸ್ಕರ್‌ನ ಅಂತಿಮ ಸುತ್ತಿಗೆ ಐದು ಡಾಕ್ಯುಮೆಂಟರಿಗಳು ಆಯ್ಕೆಯಾಗಿದ್ದು, ಇವುಗಳಲ್ಲಿ ಆಲ್ ದಿ ಬ್ರೆತ್ಸ್ ಕೂಡ ಸ್ಥಾನ ಪಡೆದಿದೆ. ಇನ್ನು ದಿ ಎಲಿಫೆಂಟ್ ವಿಸ್ಪರರ್ಸ್‌ಅನ್ನು ಕಾರ್ತಿಕಿ ಗೊನ್ಸಾಲ್ವೆಸ್ ಅವರು ನಿರ್ದೇಶಿಸಿದ್ದು, ಆನೆ ರಕ್ಷಣೆಯ ಕುರಿತು ನಿರ್ಮಿಸಲಾಗಿದೆ.
ಮಾರ್ಚ್ 12ರಂದು ಪ್ರಶಸ್ತಿ ಘೋಷಣೆ
ನಾಮಿನೇಷನ್‌ಗೆ ಆಯ್ಕೆಯಾದ ಸಿನಿಮಾಗಳಲ್ಲಿ ಮತ್ತೆ ಪ್ರಶಸ್ತಿಗೆ ಸಿನಿಮಾಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ರೀತಿ ಆಯ್ಕೆಯಾದ ಸಿನಿಮಾಗಳ ಘೋಷಣೆಯನ್ನು ಮಾರ್ಚ್ ತಿಂಗಳ 12ನೇ ತಾರೀಖಿನಂದು ನಡೆಸಲಾಗುತ್ತದೆ.
ಇದನ್ನೂ ಓದಿ | Oscars 2023 Nominations: ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್‌ಗೆ ನಾಮನಿರ್ದೇಶನ, ಮಹತ್ವದ ಮನ್ನಣೆ