Site icon Vistara News

Terrorists Attack In JK | ಕಾಶ್ಮೀರದಲ್ಲಿ ಕಾರ್ಮಿಕರನ್ನು ಗುರಿಯಾಗಿಸಿ ಉಗ್ರರ ದಾಳಿ, ಇಬ್ಬರಿಗೆ ಗಾಯ

terorist

ಶ್ರೀನಗರ:‌ ಜಮ್ಮು-ಕಾಶ್ಮೀರದಲ್ಲಿ ಸಾರ್ವಜನಿಕರನ್ನು, ಅದರಲ್ಲೂ ಬೇರೆ ರಾಜ್ಯದವರನ್ನು ಗುರಿಯಾಗಿಸಿ ದಾಳಿ (Terrorists Attack In JK) ಮಾಡುವುದು ಮುಂದುವರಿದಿದೆ. ಅನಂತನಾಗ್‌ ಜಿಲ್ಲೆಯ ರಾಖ್-ಮೊಮಿನ್‌ ಎಂಬಲ್ಲಿ ಬೇರೆ ರಾಜ್ಯದ ಕಾರ್ಮಿಕರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಗಾಯಗೊಂಡಿದ್ದಾರೆ.

“ಹತರಾದ ಕಾರ್ಮಿಕರನ್ನು ಉತ್ತರ ಪ್ರದೇಶದ ಗೋರಖ್‌ಪುರದ ಛೋಟಾ ಪ್ರಸಾದ್ ಹಾಗೂ ಖುಷಿ ನಗರದ‌ ಗೋವಿಂದ ಎಂದು ಗುರುತಿಸಲಾಗಿದೆ. ಇಬ್ಬರು ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರಲ್ಲಿ ಒಬ್ಬರ ಪರಿಸ್ಥಿತಿ ಗಂಭೀರವಾಗಿದೆ. ದಾಳಿ ನಡೆದ ಸ್ಥಳದ ಸುತ್ತ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ಇತ್ತೀಚೆಗೆ ಬೇರೆ ರಾಜ್ಯಗಳ ಕಾರ್ಮಿಕರು, ಕಾಶ್ಮೀರಿ ಪಂಡಿತರು, ಸರ್ಕಾರಿ ನೌಕರರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದಾಗಿಯೇ ಕಾಶ್ಮೀರಿ ಪಂಡಿತರು ಜಮ್ಮುವಿಗೆ ಹಿಂತಿರುಗುತ್ತಿದ್ದಾರೆ. ನವೆಂಬರ್‌ 3ರಂದು ಅನಂತನಾಗ್‌ ಜಿಲ್ಲೆಯ ಖಾಸಗಿ ಶಾಲೆಯೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇದರಲ್ಲಿ ಬಿಹಾರದ ಒಬ್ಬ ಸೇರಿ ಇಬ್ಬರು ಗಾಯಗೊಂಡಿದ್ದರು.

ಇದನ್ನೂ ಓದಿ | Terror Attack | ಶೋಪಿಯಾನ್​​ನಲ್ಲಿ ನಿಲ್ಲದ ಉಗ್ರರ ದಾಳಿ; ಉತ್ತರ ಪ್ರದೇಶ ಮೂಲದ ಇಬ್ಬರು ಕಾರ್ಮಿಕರು ಬಲಿ

Exit mobile version