Site icon Vistara News

Urfi Javed: ನಟಿ ಉರ್ಫಿಯ ಕ್ಯಾಬ್ ಡ್ರೈವರ್ ಲಗೇಜ್ ಸಹಿತ ಪರಾರಿ, ಮತ್ತೆ ವಾಪಸ್ ಬಂದಾಗ ಫುಲ್ ಟೈಟ್!

Uber driver fled with my luggage, came back drunk after an hour Says Urfi Javed

ಮುಂಬೈ, ಮಹಾರಾಷ್ಟ್ರ: ಸೋಷಿಯಲ್ ಮೀಡಿಯಾ ಸೆನ್ಸೇಷನ್‍, ವಿಶಿಷ್ಟ ತುಂಡುಗೆಗಳ ಮೂಲಕ ಸದಾ ಸದ್ದು ಮಾಡುವ ಉರ್ಫಿ ಜಾವೇದ್ (Urfi Javed) ಅವರು, ದಿಲ್ಲಿಯಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಕ್ಯಾಬ್ ಡ್ರೈವರೊಬ್ಬ ಉರ್ಫಿಯನ್ನು ದಾರಿ ಮಧ್ಯೆ ಬಿಟ್ಟು ಲಗೇಜ್‌ನೊಂದಿಗೆ ಓಡಿ ಹೋಗಿ, ಒಂದು ಗಂಟೆ ನಂತರ ಪೂರ್ತಿ ಕುಡಿದು ವಾಪಸ್ ಬಂದಿದ್ದನಂತೆ! ಈ ವಿಷಯವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ದಿಲ್ಲಿಯಲ್ಲಿ ಉರ್ಫಿ ಜಾವೇದ್ ಅವರು ಉಬೇರ್ ಕಾರನ್ನು ಆರು ಗಂಟೆಗಳ ಕಾಲ ಬುಕ್ ಮಾಡಿದ್ದರು. ಈ ಕಾರಿನಲ್ಲಿ ದಿಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿರುವಾಗ ದಾರಿ ಮಧ್ಯೆ ಊಟಕ್ಕಾಗಿ ಉರ್ಫಿ ಕಾರಿನಿಂದ ಇಳಿದಿದ್ದರು. ಆಗ ಕಾರ್ ಚಾಲಕ, ಉರ್ಫಿ ಅವರ ಲಗೇಜ್‌ನೊಂದಿಗೆ ಪರಾರಿಯಾಗಿದ್ದ. ಅಲ್ಲದೇ ಒಂದು ಗಂಟೆ ವಾಪಸ್ ಬಂದಾಗ ಆತ ಕಂಠಮಠ ಕುಡಿದಿದ್ದ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Urfi Javed | ನನಗೆ ಬಟ್ಟೆಯ ಅಲರ್ಜಿ ಇದೆ: ಅರೆ ಬೆತ್ತಲೆಯ ಹಿಂದಿನ ಕಾರಣ ಬಿಚ್ಚಿಟ್ಟ ಉರ್ಫಿ ಜಾವೇದ್‌!

ಟ್ವೀಟರ್‌ನಲ್ಲಿ ಅವರು ತಮಗೆ ಕಹಿ ಅನುಭವ ನೀಡಿದ ಚಾಲಕನ ವಿವರ, ಕಾರ್ ಬಾಡಿಗೆ ಮಾಹಿತಿ ಹಾಗೂ ತಾವು ಪಾವತಿಸಿ 2000 ರೂ. ಬಗ್ಗೆಯೂ ಬರೆದುಕೊಂಡಿದ್ದಾರೆ. ಉರ್ಫಿ ಜಾವೇಂದ್ ಅವರು ನಿತ್ಯ ಒಂದಿಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿ ಇರುತ್ತಾರೆ. ಅವರು ಹಾಕುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಿಂದಾಗಿ ಅವರು ಹೆಚ್ಚು ವಿವಾದಕ್ಕೀಡಾಗುತ್ತಾರೆ.

ಉರ್ಫಿ ಜಾವೇದ್ ಟ್ವೀಟ್ ಇಲ್ಲಿದೆ…

Exit mobile version