ಮುಂಬೈ: ನಗರದ ಶಿವಾಜಿ ಪಾರ್ಕ್ ಕ್ರೀಡಾಂಗಣದಲ್ಲಿ ದಸರಾ ರ‍್ಯಾಲಿ ಆಯೋಜನೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದ್ದು, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ವಿರುದ್ಧ ನಡೆಸಿದ ಮುಸುಕಿನ ಗುದ್ದಾಟದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ ಮುನ್ನಡೆ ಸಾಧಿಸಿದೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಶಿವಸೇನೆ ಉದ್ಧವ್ ಠಾಕ್ರೆ ಬಣವು ಶಿವಾಜಿ ಪಾರ್ಕ್‌ನಲ್ಲಿ ಆಯೋಜಿಸಲು ತೀರ್ಮಾನಿಸಿರುವ ದಸರಾ ರ‍್ಯಾಲಿಗೆ ಅನುಮತಿ ನೀಡಲು ಆಗುವುದಿಲ್ಲ ಎಂದು ಬಿಎಂಸಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಅವರು ಮುಂಬೈ ಹೈಕೋರ್ಟ್ ಮೊರೆ ಹೋಗಿದ್ದರು. ಈಗ ನ್ಯಾಯಾಲಯವು ಅನುಮತಿ ನೀಡಿದೆ.
ಕಾನೂನು ಸುವ್ಯವಸ್ಥೆ ಹೆಸರಿನಲ್ಲಿ ಬಿಎಂಸಿ ಅನುಮತಿ ನಿರಾಕರಿಸಿರುವುದು ಕಾನೂನು ಪ್ರಕ್ರಿಯೆಯ ವಿರುದ್ಧವಾಗಿದೆ. ಕಳೆದ ೭೦ ವರ್ಷದಿಂದ ಕಾನೂನು ಸುವ್ಯವಸ್ಥೆ ಇದೆ. ಈಗ ಏಕೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಆತಂಕ ಎದುರಾಗುತ್ತದೆ ಎಂದು ಪ್ರಶ್ನಿಸಿದ ನ್ಯಾಯಾಲಯವು, ದಸರಾ ರ‍್ಯಾಲಿ ಆಯೋಜಿಸಲು ಸಮ್ಮತಿ ಸೂಚಿಸಿತು. ಇತ್ತೀಚೆಗೆ ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದ ನೆಪವೊಡ್ಡಿ, ಉದ್ಧವ್ ಠಾಕ್ರೆ ಮಾತ್ರವಲ್ಲ, ಏಕನಾಥ್ ಶಿಂಧೆ ಬಣದ ಶಿವಸೇನೆಗೂ ಬಿಎಂಸಿ ಅನುಮತಿ ನಿರಾಕರಿಸಿತ್ತು.
ಇದನ್ನೂ ಓದಿ | Dasara Holiday | ಶಾಲೆಗಳಿಗೆ ದಸರಾ ರಜೆ ಯಾವಾಗ? ಯಾವ ಜಿಲ್ಲೆಯಲ್ಲಿ ರಜೆ ಮಾರ್ಪಾಡು?