Site icon Vistara News

Ukraine Students | ಉಕ್ರೇನ್‌ನಿಂದ ಬಂದ ಮೆಡಿಕಲ್ ವಿದ್ಯಾರ್ಥಿಗಳಿಗೆ ಕಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ!

Ukraine

ನವದೆಹಲಿ: ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್‌ನಲ್ಲಿ ಅರ್ಧಕ್ಕೇ ವಿದ್ಯಾಭ್ಯಾಸ ಮೊಟಕುಗೊಳಿಸಿ, ತಾಯ್ನಾಡಿಗೆ ಆಗಮಿಸಿರುವ ಮೆಡಿಕಲ್‌ ವಿದ್ಯಾರ್ಥಿಗಳಿಗೆ (Ukraine Students) ಭಾರತದ ಕಾಲೇಜುಗಳಲ್ಲಿ ಅಧ್ಯಯನ ಮಾಡಲು ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ. ಇದರಿಂದಾಗಿ, ಉಕ್ರೇನ್‌ನಿಂದ ಬಂದ ಭಾರತದ‌ ಸಾವಿರಾರು ವಿದ್ಯಾರ್ಥಿಗಳಿಗೆ ನಿರಾಸೆಯುಂಟು ಮಾಡಿದೆ. ‌

ರಷ್ಯಾದ ಆಕ್ರಮಣದಿಂದಾಗಿ ಭಾರತದ ಸಾವಿರಾರು ಮೆಡಿಕಲ್‌ ವಿದ್ಯಾರ್ಥಿಗಳ ಪದವಿಯ ಮೇಲೆ ಕರಿನೆರಳು ಮೂಡಿದೆ. ಅಕಾಡೆಮಿಕ್‌ ಮೊಬಿಲಿಟಿ ಪ್ರೋಗ್ರಾಮ್‌ ಮೂಲಕ ಉಕ್ರೇನ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಬೇರೆ ದೇಶದ ವಿವಿಯಲ್ಲಿ ಪದವಿ ಪೂರ್ಣಗೊಳಿಸಬಹುದು ಎಂದು ಉಕ್ರೇನ್‌ ಇತ್ತೀಚೆಗಷ್ಟೇ ತಿಳಿಸಿತ್ತು. ಇದರಿಂದಾಗಿ ಭಾರತದ ಸಾವಿರಾರು ವಿದ್ಯಾರ್ಥಿಗಳು ತಾಯ್ನಾಡಿನಲ್ಲಿಯೇ ಓದುವ ಕನಸು ಕಂಡಿದ್ದರು. ಆದರೆ, ಕೇಂದ್ರವು ಕನಸಿಗೆ ತಣ್ಣೀರೆರೆದಿದೆ.

“ರಾಷ್ಟ್ರೀಯ ವೈದ್ಯಕೀಯ ಆಯೋಗ (NMC Act) ಕಾಯಿದೆ ಅಡಿಯಲ್ಲಿ ಹೀಗೆ ಬೇರೆ ದೇಶಗಳಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸಿ ಬಂದವರಿಗೆ ದೇಶದ ಶಿಕ್ಷಣ ಸಂಸ್ಥೆಗಳಿಗೆ ಅಧ್ಯಯನ ಮುಂದುವರಿಸಲು ಅವಕಾಶ ನೀಡಲು ಆಗುವುದಿಲ್ಲ” ಎಂದು ಕೇಂದ್ರ ಸರ್ಕಾರ ಅಫಿಡವಿಟ್‌ ಸಲ್ಲಿಸಿದೆ. ಭಾರತದಲ್ಲಿಯೇ ಓದಲು ಅವಕಾಶ ನೀಡಬೇಕು ಎಂದು ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹಾಗಾಗಿ, ಅಫಿಡವಿಟ್‌ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚಿಸಿತ್ತು.

ಇದನ್ನೂ ಓದಿ | Ukrain Students | ಉಕ್ರೇನ್‌‌ನಿಂದ ಬಂದ ಮೆಡಿಕಲ್ ಸ್ಟೂಡೆಂಟ್ಸ್‌ಗೆ ಬೇರೆ ವಿವಿಗಳಲ್ಲಿ ಅಧ್ಯಯನಕ್ಕೆ ಅವಕಾಶ

Exit mobile version