Site icon Vistara News

Underworld: ಭಯೋತ್ಪಾದನೆ ಚಟುವಟಿಕೆಗೆ ಚೋಟಾ ಶಕೀಲ್‌ ಫಂಡಿಂಗ್‌

ಚೋಟಾ ಶಕೀಲ್‌ ಫಂಡಿಂಗ್

ಮುಂಬಯಿ: ಭಾರತದಲ್ಲಿ ಪ್ರಮುಖ ನಾಯಕರನ್ನು ಟಾರ್ಗೆಟ್‌ ಮಾಡಲು ಮತ್ತು ಭಯೋತ್ಪಾದನೆಗೆ ಬೆಂಕಿ ಹಚ್ಚಲು ಗ್ಯಾಂಗ್‌ ಸ್ಟರ್‌ ಚೋಟಾ ಶಕೀಲ್‌ ಫಂಡಿಂಗ್ ಮಾಡುತ್ತಿದ್ದಾನೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ. ಕಳೆದ ಶುಕ್ರವಾರ ಬಂಧಿತರಾಗಿದ್ದ ಇಬ್ಬರು ಶಕೀಲ್‌ ಬಂಟರ ಮುಂದಿನ ವಿಚಾರಣೆಗಾಗಿ ಕಸ್ಟಡಿಗೆ ನೀಡಬೇಕು ಎಂದು ಕೋರಿ ಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಈ ವಿಚಾರಗಳನ್ನು ತಿಳಿಸಲಾಗಿದೆ.

ಎನ್‌ಐಎ ವಾದವನ್ನು ಪುರಸ್ಕರಿಸಿದ ಕೋರ್ಟ್‌ ಆರೋಪಿಗಳಾದ ಆರಿಫ್‌ ಅಬೂಬಕರ್‌ ಶೇಖ ಅಲಿಯಾಸ್‌ ಆರಿಫ್‌ ಭಾಯಿ ಜಾನ್‌ (59) ಮತ್ತು ಅವನ ಸಹೋದರ ಶಬೀರ್‌ ಅಬೂಬಕರ್‌ ಶೇಖ್‌ (51) ಎಂಬಿಬ್ಬರು ಆರೋಪಿಗಳನ್ನು ಮೇ 20ರವರೆಗೆ ಎನ್‌ಐಎ ಕಸ್ಟಡಿಗೆ ಒಪ್ಪಿಸಿತು.‌

UNDER WOLRD: ಮತ್ತೆ ಎದ್ದಿದೆ ಮುಂಬಯಿ ಭೂಗತ ಜಗತ್ತು, ಸೇನಾ ನಾಯಕರೇ ಟಾರ್ಗೆಟ್‌

ತಲೆಮರೆಸಿಕೊಂಡಿರುವ ಗ್ಯಾಂಗ್‌ ಸ್ಟರ್‌ ದಾವೂದ್‌ ಇಬ್ರಾಹಿಂ ಮತ್ತು ಚೋಟಾ ಶಕೀಲ್‌ ಸೇರಿದಂತೆ ಅವನ ಪ್ರಮುಖ ಸಹಚರರು ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಿಸಲು ಮತ್ತು ಕೆಲವೊಂದು ಪ್ರಮುಖ ನಾಯಕರನ್ನು ಟಾರ್ಗೆಟ್‌ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಎನ್‌ಐಎಗೆ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುಂಬಯಿಯ ಹಲವು ಕಡೆ ದಾಳಿ ನಡೆಸಿದ್ದರು. ಹಲವರನ್ನು ವಶಕ್ಕೆ ಪಡೆದಿದ್ದರು.

ಈ ವ್ಯಕ್ತಿಗಳು ದಾವೂದ್‌ ಇಬ್ರಾಹಿಂ ಬಂಟರ ಜತೆ ಸಂಪರ್ಕ ಹೊಂದಿರುವುದು ಅವರ ಮೊಬೈಲ್‌ ಫೋನ್‌ ಕರೆಗಳ ತನಿಖೆಯಿಂದ ಬಯಲಾಗಿದೆ ಎಂದು ಎನ್‌ಐಎ ತಿಳಿಸಿದೆ. ಇದರಿಂದ ಭಯೋತ್ಪಾದಕ ಚಟುವಟಿಕೆಗೆ ಚೋಟಾ ಶಕೀಲ್‌ ಫಂಡಿಂಗ್‌ ಮಾಡುವುದು ಬಯಲಾಗಿತ್ತು,

ಬೆಂಗಳೂರು ಶಾಲೆ ಬಾಂಬ್‌ ಬೆದರಿಕೆ ಪ್ರಕರಣ: ಸಿರಿಯಾ, ಪಾಕಿಸ್ತಾನದಿಂದ ಇಮೇಲ್‌ ಶಂಕೆ

Exit mobile version