Site icon Vistara News

ಡೆಟೊಲ್​ ಹಾಕಿ ಬಾಯಿ ತೊಳೆದುಕೊಳ್ಳಿ; ಕಾಂಗ್ರೆಸ್​​ಗೆ ತಿರುಗೇಟು ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​

Union Finance Minister Nirmala Sitharaman hits Back to Congress Over Corruption

ನವ ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)​ ಅವರು ಕಾಂಗ್ರೆಸ್​ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶುಕ್ರವಾರ ರಾಜಸ್ಥಾನ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ಸುಮಾರು ಏಳು ನಿಮಿಷಗಳ ಕಾಲ ಹಳೇ ಬಜೆಟ್​ ಪ್ರತಿಗಳನ್ನೇ ಓದಿದ್ದರು. ಅದೇ ವಿಷಯವನ್ನು ಇಟ್ಟುಕೊಂಡು ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್​ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. 2023-24ನೇ ಸಾಲಿನ ಕೇಂದ್ರ ಬಜೆಟ್​​ ಮೇಲಿನ ಚರ್ಚೆಗೆ ಪ್ರತಿಕ್ರಿಯೆ ನೀಡಿದ ಸಚಿವೆ, ‘ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಕಾಂಗ್ರೆಸ್​ನವರು ಅವರ ಬಾಯಿಯನ್ನು ಡೆಟಾಲ್​ ಹಾಕಿ ಸ್ವಚ್ಛ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಬಳಿಕ ರಾಜಸ್ಥಾನ ಸಿಎಂ ವಿರುದ್ಧ ಹರಿಹಾಯ್ದ ಅವರು ‘ರಾಜಸ್ಥಾನ ಸರ್ಕಾರದಲ್ಲಿ ಏನೋ ಸಮಸ್ಯೆ ಆಗಿದೆ. ಅಲ್ಲಿ ಅವರು ಕಳೆದ ವರ್ಷದ ಬಜೆಟ್​ ಓದುತ್ತಿದ್ದಾರೆ. ಇಂಥ ತಪ್ಪುಗಳನ್ನು ಯಾರೂ ಮಾಡಬಾರದು ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆದರೂ ತಪ್ಪಾಗಿದೆ..ಹೀಗಾಗಿ ನಾನಿಲ್ಲಿ ಅದನ್ನು ಉಲ್ಲೇಖಿಸುತ್ತಿದ್ದೇನೆ’ ಎಂದು ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಮತೋಲಿತ ಬಜೆಟ್‌ ಮಂಡಿಸಿದ ನಿರ್ಮಲಾ ಸೀತಾರಾಮನ್‌

ಶುಕ್ರವಾರ ಅಶೋಕ್ ಗೆಹ್ಲೋಟ್​ ಅವರು ವಿಧಾನಸಭೆಯಲ್ಲಿ ಕಳೆದ ವರ್ಷದ ಬಜೆಟ್​ ಮಂಡಿಸಿ, ನಗೆಪಾಟಲಿಗೀಡಾಗಿದ್ದರು. ಬಿಜೆಪಿಯವರ ಆಕ್ರೋಶ, ಆರೋಪ ಹೆಚ್ಚಾದ ಬೆನ್ನಲ್ಲೇ ಕ್ಷಮೆ ಕೇಳಿದ್ದರು. ‘ಆಗಿರುವ ತಪ್ಪಿಗೆ ನಾನು ಕ್ಷಮೆ ಕೇಳುತ್ತೇನೆ’ ಎಂದಿದ್ದರು.

Exit mobile version