ನವ ದೆಹಲಿ: ಕೇಂದ್ರ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ಸಚಿವ ಜಿ.ಕಿಶನ್ರೆಡ್ಡಿ (G Kishan Reddy) ಅವರು ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ರಾತ್ರಿ 10.50ರ ಹೊತ್ತಿಗೆ ಅವರಿಗೆ ಎದೆಯಲ್ಲಿ ನೋವಿನ (Chest Congestion) ಅನುಭವ ಆಗಿ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾಗಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಸದ್ಯ ಕಿಶನ್ ರೆಡ್ಡಿ ಅವರಿಗೆ ಏಮ್ಸ್ನ ಕಾರ್ಡಿಯೊ ನ್ಯೂರೋ ಸೆಂಟರ್ನ ಕಾರ್ಡಿಯಾಕ್ ಕೇರ್ ಯೂನಿಟ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿ ಕಿಶನ್ ರೆಡ್ಡಿಯವರು ಇತ್ತೀಚೆಗೆ ನಿರಂತರ ಪ್ರವಾಸದಲ್ಲಿ, ವಿವಿಧ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಭಾನುವಾರ (ಏಪ್ರಿಲ್ 30)ರಂದು ಬೆಳಗ್ಗೆ ಅವರು ಮನ್ ಕೀ ಬಾತ್ 100ನೇ ಸಂಚಿಕೆ ಸ್ಮರಣಾರ್ಥ ನ್ಯಾಶನಲ್ ಗ್ಯಾಲರಿ ಆಫ್ ಮಾಡರ್ನ್ ಆ್ಯಕ್ಟ್ ( ಆಯೋಜಿಸಿದ್ದ ಜನಶಕ್ತಿ-ಒಂದು ಸಾಮೂಹಿಕ ಶಕ್ತಿ ಎಂಬ ಎಕ್ಸಿಬಿಶನ್ನ್ನು ಉದ್ಘಾಟಿಸಿದ್ದರು. ಅದಕ್ಕೂ ಮೊದಲು ಅವರು ಹೈದರಾಬಾದ್ನ ಸಿಕಂದರಾಬಾದ್ಗೆ ತೆರಳಿ, ಅಲ್ಲಿ ಭಾರತ್ ಗೌರವ್ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. ಅಷ್ಟೇ ಅಲ್ಲ ಬಿಜೆಪಿಯ ಸಭೆಯಲ್ಲೂ ಪಾಲ್ಗೊಂಡಿದ್ದರು.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ | ಕೇಂದ್ರ ಸಚಿವ ಕಿಶನ್ ರೆಡ್ಡಿ ಉಸ್ತುವಾರಿ: ಎಲ್ಲರ ಅರ್ಜಿ ಊರ್ಜಿತ