Site icon Vistara News

Threat To Nitin Gadkari | ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಜೀವ ಬೆದರಿಕೆ, ಕಚೇರಿ, ನಿವಾಸಕ್ಕೆ ಹೆಚ್ಚಿನ ಭದ್ರತೆ

Nitin Gadkari

ನಾಗ್ಪುರ: ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Threat To Nitin Gadkari) ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ನಾಗ್ಪುರದಲ್ಲಿರುವ ನಿತಿನ್‌ ಗಡ್ಕರಿ ಅವರ ಕಚೇರಿಗೆ ಶನಿವಾರ ಬೆಳಗ್ಗೆ 11.30 ಹಾಗೂ 11.40ರ ಸುಮಾರಿಗೆ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

“ಅಪರಿಚಿತ ವ್ಯಕ್ತಿಗಳು ನಿತಿನ್‌ ಗಡ್ಕರಿ ಕಚೇರಿಗೆ ಅಪರಿಚಿತರು ಎರಡು ಬಾರಿ ಕರೆ ಮಾಡಿ, ಕೇಂದ್ರ ಸಚಿವರನ್ನು ಕೊಲ್ಲುತ್ತೇವೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ. ಹಾಗೆಯೇ, ಇಡೀ ಕಚೇರಿಯನ್ನು ಸ್ಫೋಟಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಕೂಡಲೇ ಕಚೇರಿ ಸಿಬ್ಬಂದಿಯು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಕಚೇರಿ ಹಾಗೂ ಗಡ್ಕರಿ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಬೆದರಿಕೆ ಕರೆ ಬಂದಿದ್ದನ್ನು ನಿತಿನ್‌ ಗಡ್ಕರಿ ಕಚೇರಿ ದೃಢಪಡಿಸಿದೆ.

ಇದನ್ನೂ ಓದಿ | Mukesh Ambani | ಮುಕೇಶ್‌ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ, ಒಬ್ಬನ ಸೆರೆ

Exit mobile version