Site icon Vistara News

Uttar Pradesh | 32 ವರ್ಷಗಳ ಹಿಂದೆ ಕಲಬೆರಕೆ ಹಾಲು ಮಾರಾಟ ಮಾಡಿದ್ದವನಿಗೆ ಈಗ ಆರು ತಿಂಗಳ ಶಿಕ್ಷೆ!

ಲಕ್ನೋ: 32 ವರ್ಷಗಳ ಹಿಂದೆ ಕಲಬೆರಕೆಯಾಗಿರುವಂತಹ ಹಾಲನ್ನು ಮಾರಾಟ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯವು ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

ಇದನ್ನೂ ಓದಿ: Flipkart | ಉತ್ತರಪ್ರದೇಶದ ಉನ್ನಾವೊದಲ್ಲಿ ಫ್ಲಿಪ್‌ಕಾರ್ಟ್‌ನ ಅತಿ ದೊಡ್ಡ ದಿನಸಿ ದಾಸ್ತಾನು ಕೇಂದ್ರ

ಹರ್ಬೀರ್‌ ಸಿಂಗ್‌ ಹೆಸರಿನ ವ್ಯಕ್ತಿ ಮುಜಾಫರ್‌ನಗರದಲ್ಲಿ 32 ವರ್ಷಗಳ ಹಿಂದೆ ಅಂದರೆ 1990ರಲ್ಲಿ ಹಾಲು ಮಾರಾಟ ಮಾಡುತ್ತಿದ್ದ. ಆತ ಹಾಲನ್ನು ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದಾನೆ ಎನ್ನುವ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆ ಆತ ಮಾರಾಟ ಮಾಡಿದ್ದ ಹಾಲನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿ, ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ ಹಾಲು ಕಲಬೆರಕೆಯಾಗಿರುವುದಾಗಿ ತಿಳಿದುಬಂದಿತ್ತು.

ಈ ಸಂಬಂಧ ಆಗಿನ ಆಹಾರ ಇಲಾಖೆಯ ಅಧಿಕಾರಿಯಾಗಿದ್ದ ಸುರೇಶ್‌ ಚಾಂದ್‌ ಅವರು ಹರ್ಬೀರ್‌ ವಿರುದ್ಧ 1990ರ ಏಪ್ರಿಲ್‌ 21ರಂದು ದೂರು ನೀಡಿದ್ದರು. ಆ ಪ್ರಕರಣದ ತೀರ್ಪನ್ನು ಮುಜಾಫರ್‌ನಗರದ ನ್ಯಾಯಾಲಯವು ಗುರುವಾರದಂದು ನೀಡಿದೆ. ತಪ್ಪಿತಸ್ಥನಾಗಿರುವ ಹರ್ಬೀರ್‌ಗೆ 5000 ರೂ. ದಂಡ ವಿಧಿಸುವ ಜತೆಗೆ ಆರು ತಿಂಗಳ ಕಾಲ ಜೈಲು ಶಿಕ್ಷೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಗೋ ಸಂಪತ್ತು | ವಿದೇಶಿ ಗೋವಿನ ತಳಿಗಳ ಹಾಲು-ಹಾಲಾಹಲ!

Exit mobile version