Site icon Vistara News

GST Fraud: 500 ರೂ. ದುಡಿಯುವ ಬೀದಿ ಬದಿ ವ್ಯಾಪಾರಿ ವಿರುದ್ಧ 366 ಕೋಟಿ ರೂ. ಜಿಎಸ್‌ಟಿ ವಂಚನೆ ಕೇಸ್‌!

GST Fraud

ಲಖನೌ: ಬೀದಿ ಬದಿ ವ್ಯಾಪಾರಿಗಳು ದಿನಕ್ಕೆ ಎಷ್ಟು ದುಡಿಯುತ್ತಾರೆ? ಅಬ್ಬಬ್ಬಾ ಅಂದರೆ, 500-1000 ರೂ. ದುಡಿಯಬಹುದು. ಅಷ್ಟು ದುಡಿದರೂ, ನಗರಗಳಲ್ಲಿ ವಾಸಿಸುವ ಅವರ ಬಳಿ ಸೇವಿಂಗ್ಸ್‌ ಇರುವುದಿಲ್ಲ. ಅಂದಿನ ದಿನ ದುಡಿದು, ಅಂದೇ ತಿನ್ನುವ ಪರಿಸ್ಥಿತಿ ಇರುತ್ತದೆ. ಪರಿಸ್ಥಿತಿ ಹೀಗಿರುವಾಗ ಉತ್ತರ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರ ವಿರುದ್ಧ 366 ಕೋಟಿ ರೂ. ಜಿಎಸ್‌ಟಿ ವಂಚನೆ (GST Fraud) ಪ್ರಕರಣ ದಾಖಲಾಗಿದೆ.

ಹೌದು, ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ಬೀದಿ ಬದಿ ಬಟ್ಟೆ ವ್ಯಾಪಾರ ಮಾಡುತ್ತಿರುವ ಇಜಾಜ್‌ ಅಹ್ಮದ್‌ ಎಂಬ 40 ವರ್ಷದ ವ್ಯಕ್ತಿ ವಿರುದ್ಧ 366 ಕೋಟಿ ರೂ. ತೆರಿಗೆ ವಂಚನೆ ಪ್ರಕರಣ ದಾಖಲಾಗಿದೆ. ಎರಡು ವರ್ಷದ ಹಿಂದೆ ಪುಟ್ಟದೊಂದು ಗುಜರಿ ಅಂಗಡಿ ಇಟ್ಟ ಇಜಾಜ್‌ ಅಹ್ಮದ್‌, ಜಿಎಸ್‌ಟಿ ಖಾತೆ ತೆರೆದಿದ್ದರು. ಆದರೆ, ವ್ಯಾಪಾರ ಆಗದೆ ಅಂಗಡಿ ಮುಚ್ಚಿದ ಅವರು ಬಟ್ಟೆ ವ್ಯಾಪಾರ ಶುರು ಮಾಡಿದ್ದಾರೆ. ಆದರೆ, ಹಳೆಯ ಜಿಎಸ್‌ಟಿ ಖಾತೆ ಹಾಗೆಯೇ ಮುಂದುವರಿದಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: GST on restaurant service | ರೆಸ್ಟೋರೆಂಟ್ ಸೇವೆಗೆ 5% ಜಿಎಸ್‌ಟಿ:‌ ಜಿಎಸ್‌ಟಿ ಪ್ರಾಧಿಕಾರ ತೀರ್ಪು

ಜಿಎಸ್‌ಟಿ ಖಾತೆಯ ಮಾಹಿತಿ ಆಧರಿಸಿ ಜಿಎಸ್‌ಟಿ ಅಧಿಕಾರಿಗಳು ಇಜಾಜ್‌ ಅಹ್ಮದ್‌ ಮನೆಗೆ ದಾಳಿ ನಡೆಸಿದ್ದಾರೆ. ಆದರೆ, ಇವರು ಇರುವ ಪರಿಸ್ಥಿತಿ ನೋಡಿ, ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಹ್ಮದ್‌ ಅವರ ಖಾತೆ ಹೆಸರಿನಲ್ಲಿ ಭಾರಿ ತೆರಿಗೆ ವಂಚನೆ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೆ, ಲಕ್ಷಾಂತರ ರೂಪಾಯಿಯ ಮುಖವನ್ನೇ ನೋಡದ ವ್ಯಾಪಾರಿಗೆ, ತನ್ನ ವಿರುದ್ಧ ನೂರಾರು ಕೋಟಿ ರೂ. ವಂಚನೆ ಪ್ರಕರಣ ದಾಖಲಾಗಿದ್ದು ಕಂಡು ಆತಂಕ ಮೂಡಿದೆ. ಆದಾಗ್ಯೂ, ಸಮಗ್ರ ತನಿಖೆ ನಡೆಸಲಾಗುವುದು ಎಂಬುದಾಗಿ ಜಿಎಸ್‌ಟಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Exit mobile version