Site icon Vistara News

Uttar pradesh : ಮಧ್ಯರಾತ್ರಿಯಲ್ಲಿ ರಸ್ತೆ ಮೇಲೆ ಬೆತ್ತಲೆಯಾಗಿ ಓಡಾಡಿದ ಮಹಿಳೆ

#image_title

ಲಖನೌ: ಉತ್ತರ ಪ್ರದೇಶದಲ್ಲಿ (Uttar pradesh) ಸದ್ಯ ಹೆಚ್ಚಿನ ಚಳಿಯಿದೆ. ಅದೇ ಚಳಿಯಲ್ಲಿ ಮಹಿಳೆಯೊಬ್ಬಳು ಮಧ್ಯ ರಾತ್ರಿಯ ವೇಳೆ ರಸ್ತೆ ಮೇಲೆ ಬೆತ್ತಲೆಯಾಗಿ ಓಡಾಡಿದಿದ್ದು ಕಂಡು ಬಂದಿದೆ. ಪೊಲೀಸರು ಇದೀಗ ಆ ಮಹಿಳೆಯ ಹುಡುಕಾಟದಲ್ಲಿದ್ದಾರೆ.

ಇದನ್ನೂ ಓದಿ: U19 World Cup | ಕ್ರಿಕೆಟರ್ ಅರ್ಚನಾ ದೇವಿ ಮನೆಗೆ ಇನ್ವರ್ಟರ್​, ಬ್ಯಾಟರಿ ಕಳುಹಿಸಿಕೊಟ್ಟ ಉತ್ತರ ಪ್ರದೇಶ ಪೊಲೀಸರು!
ರಾಂಪುರ ನಗರದಲ್ಲಿ ಈ ರೀತಿಯ ಘಟನೆ ನಡೆದಿದೆ. ಜನವರಿ 29ರ ಮಧ್ಯ ರಾತ್ರಿಯಲ್ಲಿ ಬೆತ್ತಲೆ ಮಹಿಳೆಯು ಮನೆಯೊಂದರ ಬಾಗಿಲು ತಟ್ಟಿದ್ದಾಳೆ. ನಂತರ ರಸ್ತೆಯ ಮೇಲೆ ಓಡಾಡಿಕೊಂಡು ಹೋಗಿದ್ದಾಳೆ. ಈ ವಿಚಾರವಾಗಿ ಆ ಮನೆಯ ಮಹಿಳೆಯು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು 25 ವರ್ಷದವರಾಗಿರುವ ಬೆತ್ತಲೆ ಮಹಿಳೆಯ ಹಿಂದೆ ಎರಡು ಬೈಕ್‌ಗಳು ಹೋಗಿದ್ದಾಗಿ ಅವರು ದೂರಿನಲ್ಲಿ ಹೇಳಿದ್ದಾರೆ. ಬೆತ್ತಲೆ ಮಹಿಳೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ವಿಡಿಯೊ ಎಲ್ಲೆಡೆ ಹರಿದಾಡಿದೆ.

ಪ್ರಕರಣ ದಾಖಲಿಸಿಕೊಂಡಿರುವ ರಾಂಪುರ ಪೊಲೀಸರು ಆ ಮಹಿಳೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆಕೆಯ ಈ ನಡವಳಿಕೆ ಹಿಂದಿನ ಕಾರಣವನ್ನು ಪತ್ತೆಹಚ್ಚುವುದಕ್ಕೂ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ನಗರದಾದ್ಯಂತ ರಾತ್ರಿ ಕಾವಲನ್ನು ಹೆಚ್ಚು ಮಾಡಲಾಗಿದೆ. ಯಾರಾದರೂ ಈ ರೀತಿಯ ಮಹಿಳೆಯನ್ನು ಕಂಡಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ.

Exit mobile version