ಬೆಂಗಳೂರು: ಲೋಕಸಭೆ ಚುನಾವಣೆ- 2024 (lok sabha election-2024) ಮುಗಿದ ಬಳಿಕ ಎರ್ನಾಕುಲಂ- ಬೆಂಗಳೂರು ( Ernakulam-Bengaluru) ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಶೀಘ್ರದಲ್ಲೇ ಕೊಚ್ಚಿಯ (kochi) ಎರ್ನಾಕುಲಂನಿಂದ ಬೆಂಗಳೂರಿಗೆ ಸಂಚಾರ ಪ್ರಾರಂಭಿಸಲಿದೆ. ಕೊಚ್ಚಿ ಮತ್ತು ಬೆಂಗಳೂರು ನಡುವೆ ಬಹು ನಿರೀಕ್ಷಿತ ಈ ರೈಲು ಪ್ರಾರಂಭವು ದೈನಂದಿನ ಪ್ರಯಾಣಿಕರಿಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ಸಂಚಾರ ಸಮಯ
ರೈಲು ಎರ್ನಾಕುಲಂನಿಂದ ಬೆಳಗ್ಗೆ 5 ಗಂಟೆಗೆ ಹೊರಟು ಮಧ್ಯಾಹ್ನ 1.35 ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 2.05 ಕ್ಕೆ ಹೊರಟು ರಾತ್ರಿ 10.45 ಕ್ಕೆ ಮರಳಿ ಎರ್ನಾಕುಲಂ ತಲುಪಲಿದೆ.
ನಿಲುಗಡೆ
ಎರ್ನಾಕುಲಂ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತ್ರಿಶೂರ್, ಪಾಲಕ್ಕಾಡ್, ಕೊಯಮತ್ತೂರು, ಈರೋಡ್ ಮತ್ತು ಸೇಲಂ ನಿಲ್ದಾಣಗಳಲ್ಲಿ ಕೆಲವು ನಿಮಿಷಗಳ ಕಾಲ ನಿಲುಗಡೆ ಮಾಡಲಿದೆ.
ತಿರುವನಂತಪುರಂ-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್
ತಿರುವನಂತಪುರಂ ಸೆಂಟ್ರಲ್ – ಮಂಗಳೂರು (Thiruvananthapuram-Managaluru) ಸೆಂಟ್ರಲ್ ವಂದೇ ಭಾರತ್ ರೈಲು ಸಂಖ್ಯೆ 20632 ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಮೇ 13ರಿಂದ ಭಾರತೀಯ ರೈಲ್ವೆಯು ತಿರುವನಂತಪುರಂ- ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ನಿರ್ಗಮನ ಮತ್ತು ಆಗಮನದ ಸಮಯವನ್ನು ಬದಲಾಯಿಸಿದೆ.
ಪರಿಣಾಮ ಏನು?
ತಿರುವನಂತಪುರಂ- ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸಮಯ ಬದಲಾವಣೆಯಿಂದ ತಿರುವನಂತಪುರಂ, ಎರ್ನಾಕುಲಂ ಜಂಕ್ಷನ್, ತ್ರಿಶೂರ್, ಶೋರನೂರ್ ಜಂಕ್ಷನ್, ತಿರೂರ್, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ನಿಲ್ದಾಣಕ್ಕೆ ಆಗಮನ ಮತ್ತು ನಿರ್ಗಮನ ಸಮಯದಲ್ಲಿ ಬದಲಾವಣೆ ಆಗಲಿದೆ. ಆದ್ದರಿಂದ ಹೊಸ ವೇಳಾಪಟ್ಟಿಯನ್ನು ಪ್ರಯಾಣಿಕರು ಪರಿಶೀಲಿಸುವಂತೆ ಭಾರತೀಯ ರೈಲ್ವೆ ಇಲಾಖೆ ಸೂಚಿಸಿದೆ.
ಕೆಲವೇ ತಿಂಗಳುಗಳ ಹಿಂದೆ ರೈಲ್ವೇ ಸಚಿವಾಲಯವು ರೈಲು ಸಂಖ್ಯೆ 20631/ 632 ಕಾಸರಗೋಡು-ತಿರುವನಂತಪುರ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಆದೇಶಿಸಿತ್ತು.
ಪರಿಷ್ಕೃತ ಸಮಯ
ಎರ್ನಾಕುಲಂ ಜಂಕ್ಷನ್ ಸಂಜೆ 6.35/ 6.38 ಆಗಮಿಸಲಿದ್ದು, 6.42/ 6.45ಕ್ಕೆ ನಿರ್ಗಮಿಸಲಿದೆ. ತ್ರಿಶೂರ್ ಗೆ ಸಂಜೆ 7.40/ 7.42ಕ್ಕೆ ಆಗಮಿಸಿ 7.56/7.58 ನಿರ್ಗಮಿಸಲಿದೆ.
ಶೋರನೂರು ಜಂಕ್ಷನ್ ಗೆ ರಾತ್ರಿ 8.15/ 8.17ಕ್ಕೆ ಆಗಮನ 8.30/ 8.32ಕ್ಕೆ ನಿರ್ಗಮನ, ತಿರುರ್ ಗೆ 8.52/ 8.54ಕ್ಕೆ ಆಗಮನ, 9.02/ 9.04ಕ್ಕೆ ನಿರ್ಗಮನ, ಕೋಝಿಕ್ಕೋಡ್ 9.23/ 9.25ಕ್ಕೆ ಆಗಮನ 9.32/9.34ಕ್ಕೆ ನಿರ್ಗಮನ, ಕಣ್ಣೂರು ಗೆ 10.24/ 10.36ಕ್ಕೆ ಆಗಮನ 10.36/ 10.38ಕ್ಕೆ ನಿರ್ಗಮನ, ಕಾಸರಗೋಡುಗೆ 11.45/ 11.48ಕ್ಕೆ ಆಗಮನ 11.46/ 11.48 ನಿರ್ಗಮನ ಮಾಡಲಿದೆ.
ಇದನ್ನೂ ಓದಿ: Tirupati Temple: ತಿರುಪತಿಯ ಆಗಸ್ಟ್ ತಿಂಗಳ ಟಿಕೆಟ್ ವೇಳಾಪಟ್ಟಿ ಬಿಡುಗಡೆ: ಹೀಗೆ ಬುಕ್ ಮಾಡಿ
ಇತರ ರೈಲುಗಳು
ತಿರುವನಂತಪುರಂ-ಮಂಗಳೂರು ಮಾರ್ಗದಲ್ಲಿ ಓಡುತ್ತಿರುವ ಪ್ರಸ್ತುತ ಎಕ್ಸ್‌ಪ್ರೆಸ್ ರೈಲುಗಳು ಅದೇ ಪ್ರಯಾಣವನ್ನು ಮಾಡಲು 13 ರಿಂದ 14 ಗಂಟೆಗಳವರೆಗೆ ಬೇಕಾಗುತ್ತದೆ. ಉದಾಹರಣೆಗೆ ಮಂಗಳೂರು ಸೆಂಟ್ರಲ್-ನಾಗರ್‌ಕೋಯಿಲ್ ಪರಶುರಾಮ್ ಎಕ್ಸ್‌ಪ್ರೆಸ್ ಟ್ರೇನ್ ನಂ. 16649, ಪ್ರತಿದಿನ ಬೆಳಗ್ಗೆ 5.05 ಕ್ಕೆ ಸೆಂಟ್ರಲ್‌ನಿಂದ ಹೊರಟು ಸಂಜೆ 6.40 ಕ್ಕೆ ತಿರುವನಂತಪುರವನ್ನು ತಲುಪುತ್ತದೆ, ಇದು ಸಾರಿಗೆಯಲ್ಲಿ 13 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಿಂದಿರುಗುವ ಪ್ರಯಾಣದಲ್ಲಿ ತಿರುವನಂತಪುರದಿಂದ ಬೆಳಗ್ಗೆ 6.10ಕ್ಕೆ ಹೊರಟು ರಾತ್ರಿ 9 ಗಂಟೆಗೆ ಸೆಂಟ್ರಲ್ ತಲುಪುವ ರೈಲು ಸಂಖ್ಯೆ 16650 ಗಂಟೆಗೆ ಸರಾಸರಿ 42 ಕಿ.ಮೀ .ವೇಗದಲ್ಲಿ ಪ್ರಯಾಣಿಸಿದರೂ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.