Site icon Vistara News

Veer Savarkar: ಸ್ವಾತಂತ್ರ್ಯ ಯೋಧ ವೀರ್ ಸಾವರ್ಕರ್ ಜೀವನದ ಕುತೂಹಲಕರ ಸಂಗತಿಗಳಿವು

Veer Savarkar

ಮಹಾರಾಷ್ಟ್ರದ ನಾಸಿಕ್‌ನ (nasik) ಭಾಗ್‌ಪುರ ಗ್ರಾಮದಲ್ಲಿ 1883ರ ಮೇ 28ರಂದು ಬ್ರಾಹ್ಮಣ ಹಿಂದೂ ಕುಟುಂಬದಲ್ಲಿ ಜನಿಸಿದ ವೀರ್ ಸಾವರ್ಕರ್ (Veer Savarkar) 1966ರ ಫೆಬ್ರವರಿ 26 ರಂದು ಮುಂಬಯಿನಲ್ಲಿ (mumbai) ಉಪವಾಸ ವ್ರತ ಕೈಗೊಂಡು ಕೊನೆಯುಸಿರೆಳೆದರು. ಈ ನಡುವೆ ಅವರ ಬದುಕಿನ ಪಯಣ ಸಂಪೂರ್ಣವಾಗಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ (freedom fight) ಮೀಸಲಾಗಿತ್ತು.

ಸಾವರ್ಕರ್ ಅವರ ಪೂರ್ಣ ಹೆಸರು ವಿನಾಯಕ ದಾಮೋದರ್ ಸಾವರ್ಕರ್. ಅವರು ಸ್ವಾತಂತ್ರ್ಯ ಹೋರಾಟಗಾರ, ರಾಜಕಾರಣಿ, ವಕೀಲ, ಸಮಾಜ ಸುಧಾರಕ ಮತ್ತು ಹಿಂದುತ್ವದ ಪ್ರತಿಪಾದಕರಾಗಿದ್ದರು.

ತಂದೆಯ ಹೆಸರು ದಾಮೋದರಪಂತ್ ಸಾವರ್ಕರ್ ಮತ್ತು ತಾಯಿ ರಾಧಾಬಾಯಿ. ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಸಾವರ್ಕರ್ ಅವರು ಹಿರಿಯ ಸಹೋದರ ಗಣೇಶ್ (ಬಾಬಾರಾವ್) ಅವರಿಂದ ಬಲವಾಗಿ ಪ್ರಭಾವಿತರಾಗಿದ್ದರು.

ಮಹಾರಾಷ್ಟ್ರದ ಪುಣೆಯ ಫರ್ಗುಸನ್ ಕಾಲೇಜಿನಿಂದ ಕಲಾ ಪದವಿ ಪಡೆದ ಅವರು ವಕೀಲ, ರಾಜಕಾರಣಿ, ಬರಹಗಾರ ಮತ್ತು ಕಾರ್ಯಕರ್ತನಾಗಿ ಹೆಸರು ಗಳಿಸಿದ್ದರು.

ವೀರ ಸಾವರ್ಕರ್ ತಮ್ಮ ಜೀವನದ ಹಲವು ವರ್ಷಗಳನ್ನು ಜೈಲುವಾಸದಲ್ಲಿ ಕಳೆದಿದ್ದರು. ಅವರನ್ನು ಬ್ರಿಟಿಷರು ಸೆಲ್ಯುಲಾರ್ ಜೈಲು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸ್ಥಳಾಂತರಿಸಿದ್ದರು.


ದೇಶದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆ

ಶೌರ್ಯಕ್ಕೆ ಹೆಸರುವಾಸಿಯಾಗಿದ್ದ ಸಾವರ್ಕರ್ ಗೆ ಇದರಿಂದಲೇ ವೀರ್ ಸಾವರ್ಕರ್ ಎಂಬ ಹೆಸರು ಪಡೆದರು. ಕ್ರಾಂತಿಕಾರಿ ಯುವಕರಾಗಿದ್ದ ಅವರು ಚಿಕ್ಕವರಿದ್ದಾಗ ‘ಮಿತ್ರ ಮೇಳ’ ಎಂಬ ಯುವ ಸಮೂಹವನ್ನು ಆಯೋಜಿಸಿದ್ದರು. ಲಾಲಾ ಲಜಪತ್ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ ಅವರಂತಹ ಮೂಲಭೂತ ರಾಜಕೀಯ ನಾಯಕರಿಂದ ಸ್ಫೂರ್ತಿ ಪಡೆದಿದ್ದರು.

ಇಂಗ್ಲೆಂಡ್‌ನಲ್ಲಿ ಕಾನೂನು ಅಧ್ಯಯನ ಮಾಡಲು ಶ್ಯಾಮ್‌ಜಿ ಕೃಷ್ಣ ವರ್ಮಾ ಅವರು ಸಹಾಯ ಮಾಡಿದರು. ಸಾವರ್ಕರ್ ಅಲ್ಲಿ ‘ಗ್ರೇಸ್ ಇನ್ ಲಾ ಕಾಲೇಜ್’ ಗೆ ಸೇರಿಕೊಂಡು ‘ಇಂಡಿಯಾ ಹೌಸ್’ ನಲ್ಲಿ ಆಶ್ರಯ ಪಡೆದರು. ಇದು ಉತ್ತರ ಲಂಡನ್‌ನಲ್ಲಿ ವಿದ್ಯಾರ್ಥಿಗಳ ನಿವಾಸವಾಗಿತ್ತು. ಲಂಡನ್‌ನಲ್ಲಿ, ವೀರ್ ಸಾವರ್ಕರ್ ಅವರು ತಮ್ಮ ಸಹ ಭಾರತೀಯ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು ಮತ್ತು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ‘ಫ್ರೀ ಇಂಡಿಯಾ ಸೊಸೈಟಿ’ ಎಂಬ ಸಂಘಟನೆಯನ್ನು ರಚಿಸಿದರು.

1857ರ ದಂಗೆಯ ರೀತಿಯಲ್ಲಿ ವೀರ್ ಸಾವರ್ಕರ್ ಅವರು ಸ್ವಾತಂತ್ರ್ಯವನ್ನು ಪಡೆಯಲು ಗೆರಿಲ್ಲಾ ಯುದ್ಧದ ಬಗ್ಗೆ ಯೋಚಿಸಿದರು. ಅವರು ಬರೆದ “ಭಾರತೀಯ ಸ್ವಾತಂತ್ರ್ಯದ ಯುದ್ಧದ ಇತಿಹಾಸ” ಎಂಬ ಪುಸ್ತಕವನ್ನು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಬಹಳಷ್ಟು ಭಾರತೀಯರನ್ನು ಪ್ರೇರೇಪಿಸಿತು. ಈ ಪುಸ್ತಕವನ್ನು ಬ್ರಿಟಿಷರು ನಿಷೇಧಿಸಿದ್ದರೂ ಹಲವಾರು ದೇಶಗಳಲ್ಲಿ ಇದು ಜನಪ್ರಿಯತೆಯನ್ನು ಗಳಿಸಿತು.


ಜೈಲು ಶಿಕ್ಷೆ ಏಕೆ?

ವೀರ್ ಸಾವರ್ಕರ್ ಅವರ ಹಿರಿಯ ಸಹೋದರ ಮಿಂಟೋ-ಮಾರ್ಲೆ ರಿಫಾರ್ಮ್ ಎಂದು ಕರೆಯಲ್ಪಡುವ ‘ಇಂಡಿಯನ್ ಕೌನ್ಸಿಲ್ ಆಕ್ಟ್ 1909’ ವಿರುದ್ಧ ಪ್ರತಿಭಟನೆಯನ್ನು ಆಯೋಜಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೀರ್ ಸಾವರ್ಕರ್ ಅವರು ಅಪರಾಧದ ಸಂಚು ಹೂಡಿದ್ದಾರೆ ಎಂದು ಆರೋಪಿಸಿ ಅವರನ್ನು ಪ್ಯಾರಿಸ್ ನಲ್ಲಿ ಬಂಧಿಸಿ 50 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಅಲ್ಲಿಂದ ಅವರನ್ನು ಮುಂಬಯಿಗೆ ಕರೆದುಕೊಂಡು ಬಂದು 1911ರ ಜುಲೈ 4ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಕಾಲಾಪಾನಿ ಎಂದು ಪ್ರಸಿದ್ಧವಾದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಲಾಯಿತು.

ಅಲ್ಲೂ ಅವರ ರಾಷ್ಟ್ರೀಯ ಸ್ವಾತಂತ್ರ್ಯದ ಉತ್ಸಾಹ ಮುಂದುವರೆಯಿತು. ಅವರು ತಮ್ಮ ಸಹ ಕೈದಿಗಳಿಗೆ ಓದಲು ಮತ್ತು ಬರೆಯಲು ಕಲಿಸಲು ಪ್ರಾರಂಭಿಸಿದರು. ಜೈಲಿನಲ್ಲಿ ಗ್ರಂಥಾಲಯವನ್ನು ಪ್ರಾರಂಭಿಸಲು ಸರ್ಕಾರದಿಂದ ಅನುಮತಿ ಪಡೆದರು.

ಜೈಲಿನಲ್ಲಿ ಇದ್ದು ಮಾಡಿದ ಕೆಲಸ ಅಮೋಘ

ಜೈಲಿನಲ್ಲಿದ್ದಾಗ ಅವರು ಹಿಂದುತ್ವ ಎಂಬ ಸೈದ್ಧಾಂತಿಕ ಕರಪತ್ರವನ್ನು ಬರೆದರು. ಈ ಕರಪತ್ರದಲ್ಲಿ ಅವರು ಹಿಂದೂವನ್ನು ‘ಭಾರತವರ್ಷ’ (ಭಾರತ) ದ ದೇಶಭಕ್ತ ಮತ್ತು ಹೆಮ್ಮೆಯ ನಿವಾಸಿ ಎಂದು ವಿವರಿಸಿದರು. ಇದು ಹಲವಾರು ಹಿಂದೂಗಳ ಮೇಲೆ ಪ್ರಭಾವ ಬೀರಿತ್ತು.

ಸ್ವಯಂ ಘೋಷಿತ ನಾಸ್ತಿಕರಾಗಿದ್ದ ಅವರು 1924ರ ಜನವರಿ 6ರಂದು ಜೈಲಿನಿಂದ ಬಿಡುಗಡೆಯಾದರು.
1937ರಲ್ಲಿ ವೀರ್ ಸಾವರ್ಕರ್ ಅವರು ‘ಹಿಂದೂ ಮಹಾಸಭಾ’ದ ಅಧ್ಯಕ್ಷರಾದರು. ಮತ್ತೊಂದೆಡೆ ಮತ್ತು ಅದೇ ಸಮಯದಲ್ಲಿ ಮುಹಮ್ಮದ್ ಅಲಿ ಜಿನ್ನಾ ಕಾಂಗ್ರೆಸ್ ಆಡಳಿತವನ್ನು ‘ಹಿಂದೂ ರಾಜ್’ ಎಂದು ಘೋಷಿಸಿದರು. ಇದು ಈಗಾಗಲೇ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಇನ್ನಷ್ಟು ಹದಗೆಡಿಸಿತು.

ಇದನ್ನೂ ಓದಿ: Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

ಸಾವರ್ಕರ್ ಕುರಿತ ಚಲನಚಿತ್ರ

ವೀರ್ ಸಾವರ್ಕರ್ ಅವರ ಕುರಿತು 1996ರಲ್ಲಿ ಪ್ರಿಯದರ್ಶನ್ ಅವರು ಮಲಯಾಳಂ ನಲ್ಲಿ ಕಾಲಾ ಪಾನಿ ಚಲನಚಿತ್ರವನ್ನು ನಿರ್ದೇಶಿಸಿದ್ದರು. ಇದರಲ್ಲಿ ಅನ್ನು ಕಪೂರ್ ಅವರು ವೀರ್ ಸಾವರ್ಕರ್ ಅವರ ಪಾತ್ರವನ್ನು ಮಾಡಿದ್ದರು. ವೀರ್ ಸಾವರ್ಕರ್ ಜೀವನ ಚರಿತ್ರೆಯನ್ನು ಸುಧೀರ್ ಫಡ್ಕೆ ಮತ್ತು ವೇದ್ ರಾಹಿ ಅವರು ರಚಿಸಿದ್ದು, ಈ ಚಿತ್ರದಲ್ಲಿ ಶೈಲೇಂದ್ರ ಗೌರ್ ವೀರ್ ಸಾವರ್ಕರ್ ಪಾತ್ರವನ್ನು ನಿರ್ವಹಿಸಿದ್ದಾರೆ.

ವೀರ್ ಸಾವರ್ಕರ್ ಬರೆದ ಪುಸ್ತಕಗಳು

1857ಚೆ ಸ್ವತಂತ್ರ್ಯ ಸಮರ್, ಹಿಂದೂಪಾದಪಾತ್ಶಾಹಿ, ಹಿಂದುತ್ವ, ಜಾತ್ಯೋಛೇದಕ್ ನಿಬಂಧ, ಮೊಪ್ಲ್ಯಾಂಚೆ ಬಂದಾ, ಮಾಝಿ ಜನ್ಮತೇಪ್, ಕಾಲೆ ಪಾನಿ, ಶತ್ರುಚ್ಯಾ ಶಿಬಿರಾತ್, ಲಂಡನ್ಚಿ ಬತಾಮಿಪತ್ರೆ, ಅಂದಮಾಂಚ್ಯಾ ಅಂಧೇರಿತುನ್, ವಿದ್ಯಾನ ನಿಷ್ಠ ನಿಬಂಧ, ಜೋಸೆಫ್ ಮಜ್ಜಿನಿ, ಹಿಂದೂರಾಷ್ಟ್ರ ದರ್ಶನ, ಹಿಂದುತ್ವಚೆ ಪಂಚಪ್ರಾಣ, ಕಮಲಾ, ಸಾವರ್ಕಾರಾಂಚ್ಯಾ ಕವಿತಾ, ಸನ್ಯಾಸ್ತಾ ಖಡ್ಗ್ ಇತ್ಯಾದಿ.

Exit mobile version