Site icon Vistara News

Road Accident | ಆಳದ ಕಂದಕಕ್ಕೆ ಬಿದ್ದ ವಾಹನ; 12 ಮಂದಿ ದುರ್ಮರಣ

Vehicle plunges into deep gorge 12 Murdered

ಚಮೋಲಿ: ಇಲ್ಲಿನ ಜೋಶಿಮಠ್​​ದಿಂದ ಕಿಮಾನಾ ಕಡೆಗೆ ಹೋಗುತ್ತಿದ್ದ ಟಾಟಾ ಸುಮೋ ವಾಹನವೊಂದು ಸುಮಾರು 600 ಮೀಟರ್​ ಆಳದ ಕಂದಕಕ್ಕೆ ಬಿದ್ದ ಪರಿಣಾಮ 12 ಮಂದಿ ಮೃತಪಟ್ಟಿದ್ದಾರೆ. ಈ ವಾಹನದಲ್ಲಿ ಇದ್ದವರೇ 12 ಮಂದಿಯಾಗಿದ್ದು, ಅವರ್ಯಾರೂ ಬದುಕಿಲ್ಲ ಎಂದು ವರದಿಯಾಗಿದೆ. ಸ್ಥಳಕ್ಕೆ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ತಂಡದ (ಎಸ್​ಡಿಆರ್​ಎಫ್​) ಸಿಬ್ಬಂದಿ ತೆರಳಿದ್ದು, ಅಲ್ಲಿ ಮೃತದೇಹಗಳನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.

ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಟಾಟಾ ಸುಮೊದಲ್ಲಿ ಅದರ ಸಾಮರ್ಥ್ಯಕ್ಕೂ ಮೀರಿ ಜನರು ತುಂಬಿದ್ದರು. ಕೆಲವರಂತೂ ವಾಹನದ ಮೇಲೆ ಕುಳಿತುಕೊಂಡಿದ್ದರು ಎಂದು ಹೇಳಲಾಗಿದೆ.
ಆಳವಾದ ಕಂದಕಕ್ಕೆ ಬಿದ್ದ ವಾಹನ ರಸ್ತೆ ಮೇಲೆ ನಿಂತು ನೋಡಿದರೆ ಕಾಣುತ್ತಿರಲಿಲ್ಲ. ಪೊಲೀಸ್​ ಮತ್ತು ಎಸ್​ಡಿಆರ್​ಎಫ್​ ಸಿಬ್ಬಂದಿ ಅಲ್ಲಿ ಆಳಕ್ಕೆ ಹೋಗಿಯೇ ವಾಹನವನ್ನು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ಕಂದಕಕ್ಕೆ ಬಿದ್ದು ಇಬ್ಬರು ಯುವಕರು ಸಾವು: ಮಳೆ ಹಾನಿ ಸರಿಪಡಿಸದ ಗದಗ ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಜನರ ಆಕ್ರೋಶ

Exit mobile version