ತಿರುವನಂತಪುರಂ: ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ (Bharat Jodo Yatra) ೧೧ನೇ ದಿನಕ್ಕೆ ಕಾಲಿಟ್ಟಿದೆ. ಕೇರಳದ ಹರಿಪಾದ್ನಲ್ಲಿ ಭಾನುವಾರ ಬೆಳಗ್ಗೆ ೬.೩೦ಕ್ಕೇ ರಾಹುಲ್ ಗಾಂಧಿ ನೂರಾರು ಜನರ ಜತೆ ಪಾದಯಾತ್ರೆ ಆರಂಭಿಸಿದರು. ಇದೇ ವೇಳೆ ಬಾಲಕಿಯೊಬ್ಬಳು ರಾಹುಲ್ ಜತೆ ಹೆಜ್ಜೆ ಹಾಕುತ್ತಿದ್ದಳು. ಆಗ ಅವಳ ಚಪ್ಪಲಿ ಬಿಚ್ಚಿದ್ದು, ಮತ್ತೆ ಹಾಕಿಕೊಳ್ಳಲು ರಾಹುಲ್ ಗಾಂಧಿ ನೆರವಾಗಿದ್ದಾರೆ. ಈ ವಿಡಿಯೊ ಈಗ ವೈರಲ್ (Viral Video) ಆಗಿದೆ.
ರಾಹುಲ್ ಗಾಂಧಿ ೧೩ ಕಿ.ಮೀ ಪಾದಯಾತ್ರೆ ನಡೆಸಿದರು. ಒಂದು ಗಂಟೆ ನಡೆದ ಬಳಿಕ ಬ್ರೇಕ್ ತೆಗೆದುಕೊಂಡು, ಚಹಾ ಕುಡಿದರು. ಇದೇ ವೇಳೆ ಕಾಂಗ್ರೆಸ್ ನಾಯಕರಾದ ರಮೇಶ್ ಚೆನ್ನಿತ್ತಲ, ಕೆ.ಮುರಳೀಧರನ್, ಕೆ.ಸಿ.ವೇಣುಗೋಪಾಲ್ ಸೇರಿ ಹಲವು ನಾಯಕರು ಕಾಂಗ್ರೆಸ್ ನಾಯಕನಿಗೆ ಸಾಥ್ ನೀಡಿದರು.
ಇದನ್ನೂ ಓದಿ | Bharat Jodo Yatra | ಭಾರತ್ ಜೋಡೊ ಯಾತ್ರೆ ಮಧ್ಯೆಯೇ ಸಿದ್ದು- ಡಿಕೆಶಿ ಸಂಘರ್ಷ ಉಲ್ಬಣ