Site icon Vistara News

Vikas Purohit | ಮೆಟಾ ಭಾರತದ ಜಾಗತಿಕ ಉದ್ಯಮ ಸಮೂಹಕ್ಕೆ ವಿಕಾಸ್‌ ಪುರೋಹಿತ್‌ ನಿರ್ದೇಶಕ

ವಾಷಿಂಗ್ಟನ್:‌ ಫೇಸ್‌ಬುಕ್‌ ಒಡೆತನವನ್ನು ಹೊಂದಿರುವ ಮೆಟಾ ಸಂಸ್ಥೆಯು ಭಾರತದಲ್ಲಿನ ಜಾಗತಿಕ ಉದ್ಯಮ ಸಮೂಹಕ್ಕೆ ವಿಕಾಸ್‌ ಪುರೋಹಿತ್‌ (Vikas Purohit) ಅವರನ್ನು ನಿರ್ದೇಶಕರನ್ನಾಗಿ ನೇಮಿಸಿದೆ. ದೇಶದ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು, ಜಾಹೀರಾತು ಸಂಸ್ಥೆಗಳೊಂದಿಗಿನ ಸಂಬಂಧವನ್ನು ಮುನ್ನಡೆಸುವ ಹಾಗೂ ಕಂಪನಿಗೆ ಆದಾಯ ಹೆಚ್ಚಿಸುವ ಜವಾಬ್ದಾರಿ ವಿಕಾಸ್‌ ಅವರದ್ದಾಗಿರಲಿದೆ.

ಇದನ್ನೂ ಓದಿ: Meta | ಮೆಟಾ ಇಂಡಿಯಾದ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್‌ ನೇಮಕ

ಮೆಟಾ ಭಾರತದ ಜಾಹೀರಾತು ಉದ್ಯಮ ವಿಭಾಗದ ಮುಖ್ಯಸ್ಥರಾಗಿರುವ ಅರುಣ್‌ ಶ್ರೀನಿವಾಸ್‌ ಅವರಿಗೆ ವಿಕಾಸ್‌ ಅವರು ವರದಿ ಮಾಡಿಕೊಳ್ಳಲಿದ್ದಾರೆ. ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ಅರುಣ್‌, “ದೇಶದಲ್ಲಿ ಮೆಟಾದ ವ್ಯವಹಾರಗಳನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ, ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುವುದಕ್ಕೆ ಹಾಗೆಯೇ ದೇಶದ ಡಿಜಿಟಲ್‌ ಜಾಹೀರಾತು ವ್ಯವಸ್ಥೆಯನ್ನು ಉತ್ತಮಗೊಳಿಸಲು ಕಾರ್ಯತಂತ್ರ ರೂಪಿಸಲು ವಿಕಾಸ್‌ ನಮ್ಮೊಂದಿಗಿರಲಿದ್ದಾರೆ. ಅವರು ನಮ್ಮ ತಂಡ ಸೇರಿರುವುದು ಸಂತೋಷ ತಂದಿದೆ” ಎಂದಿದ್ದಾರೆ.

ಭಾರತದಲ್ಲಿ ಮೆಟಾ ಸಂಸ್ಥೆಯು ಮುಂಚೂಣಿಯಲ್ಲಿರುವ ಹಲವಾರು ಬ್ರ್ಯಾಂಡ್‌ಗಳು ಹಾಗೂ ಏಜೆನ್ಸಿಗಳ ಜತೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಬೇಕು. ಅದರ ಜವಾಬ್ದಾರಿಯನ್ನು ವಿಕಾಸ್‌ ಹೊತ್ತುಕೊಳ್ಳಲಿದ್ದಾರೆ. ಹಾಗೆಯೇ ಡಿಜಿಟಲ್‌ ಉಪಕರಣಗಳನ್ನು ಬಳಸಿಕೊಂಡು ಜಾಹೀರಾತು ಹಾಗೂ ಇತರೆ ವಿಭಾಗಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಆದಾಯ ಹೆಚ್ಚಿಸುವತ್ತ ಗಮನ ನೀಡಲಿದ್ದಾರೆ ಎಂದು ಮೆಟಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Amazon Layoffs | ಟ್ವಿಟರ್‌, ಮೆಟಾ ಆಯ್ತು, ಈಗ ಅಮೆಜಾನ್ ಉದ್ಯೋಗಿಗಳಿಗೂ ಕುತ್ತು!

ವಿಕಾಸ್‌ ಪುರೋಹಿತ್‌ ಅವರು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌(ಐಐಎಂ)ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಆದಿತ್ಯ ಬಿರ್ಲಾ ಗ್ರೂಪ್‌, ರಿಲಯನ್ಸ್‌ ಬ್ರ್ಯಾಂಡ್ಸ್‌ ಲಿ., ಟಾಟಾ ಕ್ಲಿಕ್‌, ಅಮೇಜಾನ್‌ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಅವರಿಗಿದೆ. ಮೆಟಾದಲ್ಲಿ ನೇಮಕಾತಿಗೂ ಮೊದಲು ಟಾಟಾ ಕ್ಲಿಕ್‌ ಸಂಸ್ಥೆಗೆ ಸಿಒಒ ಆಗಿ ಸೇರಿಕೊಂಡಿದ್ದ ಅವರು ಸಿಇಒ(ಮುಖ್ಯ ಕಾಆರ್ಯನಿರ್ವಹಣಾ ಅಧಿಕಾರಿ) ಆಗಿ ಬಡ್ತಿ ಪಡೆದಿದ್ದರು.

Exit mobile version