ನವದೆಹಲಿ: ವಿಮಾನ ಹಾರಾಟ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ವಿಸ್ತಾರ ಏರ್‌ಲೈನ್ಸ್ ಸಂಸ್ಥೆಗೆ ಡಿಜಿಸಿಎ (ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ) 10 ಲಕ್ಷ ರೂಪಾಯಿ ದಂಡ ವಿಧಿಸಿದೆ. ವಿಸ್ತಾರ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದನ್ನು, ಇನ್ನೂ ಸರಿಯಾಗಿ ತರಬೇತಿ ಪಡೆಯದೆ ಇದ್ದ ಪೈಲಟ್ ಲ್ಯಾಂಡ್ ಮಾಡಿದ ಹಿನ್ನೆಲೆಯಲ್ಲಿ ಡಿಜಿಸಿಎ ದಂಡ ವಿಧಿಸಿದೆ. ಈ ಪೈಲಟ್ ವಿಮಾನದಲ್ಲಿ ಫಸ್ಟ್ ಆಫೀಸರ್ ಆಗಿದ್ದರು. ಅಂದರೆ ವಿಮಾನ ಲ್ಯಾಂಡ್ ಮಾಡುವ ಪ್ರಕ್ರಿಯೆಗಳು, ಸುರಕ್ಷತಾ ನಿಯಮಗಳ ಬಗ್ಗೆ ಕ್ಯಾಪ್ಟನ್ ಪೈಲಟ್‌ನಿಂದ ತರಬೇತಿ ಪಡೆಯುತ್ತಿರುವವರು. ಆದರೆ ಟ್ರೇನಿಂಗ್ ಇನ್ನೂ ಮುಗಿದಿರುವುದಿಲ್ಲ. ಹಾಗಿದ್ದಾಗ್ಯೂ ಮಧ್ಯಪ್ರದೇಶ ಇಂಧೋರ್ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ವಿಮಾನವನ್ನು ಲ್ಯಾಂಡ್ ಮಾಡಿದ್ದರು.
ಆದರೆ ಪೈಲಟ್ ಮಾಡಿದ್ದು ತಪ್ಪು. ಸಂಪೂರ್ಣ ತರಬೇತಿಗೂ ಮುನ್ನ ಹೀಗೆ ವಿಮಾನವನ್ನು ಲ್ಯಾಂಡ್ ಮಾಡುವುದು ಪ್ರಯಾಣಿಕರ ಜೀವವನ್ನು ಅಪಾಯದಲ್ಲಿಟ್ಟಂತೆ ಎಂದು ಹೇಳಿರುವ ಡಿಜಿಸಿಎ, ವಿಮಾನ ಯಾನ ಸಂಬಂಧಿತ ನಿಯಮಗಳ ಗಂಭೀರ ಉಲ್ಲಂಘನೆ. ಆದರೂ ಅರ್ಧಂಬರ್ಧ ತರಬೇತಿ ಪಡೆದ ಪೈಲಟ್‌ಗೆ ವಿಮಾನವನ್ನು ಲ್ಯಾಂಡ್ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ವಿಸ್ತಾರ ಏರ್‌ಲೈನ್ಸ್‌ಗೆ ದಂಡ ವಿಧಿಸುತ್ತಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:INS VIKRANT ಆಪರೇಷನ್‌ಗೆ ರೆಡಿ, 26 ಯುದ್ಧ ವಿಮಾನ ಖರೀದಿಗೆ ಮುಂದಾದ ಭಾರತ
ಫಸ್ಟ್ ಆಫೀಸರ್ ಆಗಿರುವವರು ಮೊದಲು ಏರ್‌ಕ್ರಾಫ್‌ನ್ನು ಸಿಮ್ಯುಲೇಟರ್‌ನಲ್ಲಿ ಲ್ಯಾಂಡ್ ಮಾಡಬೇಕು. ಸಿಮ್ಯುಲೇಟರ್ ಅಂದರೆ ತರಬೇತಿ ಉದ್ದೇಶಕ್ಕಾಗಿ ನಿರ್ಮಿಸಲಾದ ವ್ಯವಸ್ಥೆ. ಮೊದಲು ಇಲ್ಲಿ ವಿಮಾನ ಲ್ಯಾಂಡ್ ಮಾಡುವುದನ್ನು ಕಲಿತು, ಪರಿಣತಿ ಪಡೆದ ಮೇಲಷ್ಟೇ ಹೊರಗೆ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಮಾಡಬೇಕು. ಆದರೆ ಈ ಪೈಲಟ್ ಇನ್ನೂ ಸಿಮ್ಯುಲೇಟರ್‌ನಲ್ಲಿ ಲ್ಯಾಂಡ್ ಮಾಡುವುದನ್ನೇ ಸರಿಯಾಗಿ ಕಲಿತಿರಲಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಏಕಕಾಲಕ್ಕೆ 2 ವಿಮಾನಗಳ ಟೇಕಾಫ್, 100 ಅಡಿಯಲ್ಲಿ ತಪ್ಪಿದ್ದ ಅನಾಹುತ, ಸಿಬ್ಬಂದಿ ಸಸ್ಪೆಂಡ್