Site icon Vistara News

Excise Policy Case | ದೆಹಲಿ ಡಿಸಿಎಂ ಮನೀಷ್‌ ಅವರನ್ನು ʼಮನಿʼಷ್‌ ಎಂದು ಕರೆದು ಬಿಜೆಪಿ ಟಾಂಗ್‌!

Anurag Minister Digital Media

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನೂತನ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣದಲ್ಲಿ (Excise Policy Case) ಬಿಜೆಪಿ ಹಾಗೂ ಆಪ್‌ ಮಧ್ಯೆ ತೀವ್ರ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಮೋದಿ ಅವರಿಗೆ ತೀವ್ರ ಸ್ಪರ್ಧೆಯೊಡ್ಡುತ್ತಾರೆ ಎಂಬ ಭಯಕ್ಕೆ ಬಿಜೆಪಿಯು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಡಿಸಿಎಂ ಮನೀಷ್‌ ಸಿಸೋಡಿಯಾ ಟೀಕಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, “ಹಗರಣದಲ್ಲಿ ಸಿಸೋಡಿಯಾ ಮೊದಲ ಆರೋಪಿಯಾಗಿದ್ದರೆ, ಹಗರಣಕ್ಕೆ ಕೇಜ್ರಿವಾಲ್‌ ಅವರೇ ಕಿಂಗ್‌ಪಿನ್‌” ಎಂದು ಆರೋಪಿಸಿದೆ.

“ಸಿಬಿಐ ಅಧಿಕಾರಿಗಳ ವಿಚಾರಣೆ ಬಳಿಕ ಮನೀಷ್‌ ಸಿಸೋಡಿಯಾ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಇದ್ದ ಅವರ ಮುಖದ ಬಣ್ಣವೇ ಎಲ್ಲವನ್ನೂ ಹೇಳುತ್ತಿದೆ. ಸುದ್ದಿಗೋಷ್ಠಿಯಲ್ಲಿ ಒಂದೂ ಪ್ರಶ್ನೆಗೆ ಉತ್ತರಿಸದೆ ಹೋದ ಅವರು ಬಿಜೆಪಿ ವಿರುದ್ಧ ವೃಥಾ ಆರೋಪ ಮಾಡುತ್ತಿದ್ದಾರೆ” ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದರು. ಅಲ್ಲದೆ, ಮನೀಷ್‌ ಅವರನ್ನು “ಮನಿ”ಷ್‌ (Money Shh) ಎಂದು ಕರೆದರು.

“ಮನೀಷ್‌ ಅವರೇ, ಅಬಕಾರಿ ನೀತಿಯು ಸರಿಯಾಗಿದ್ದರೆ, ನೀವೇಕೆ ಅದನ್ನು ಹಿಂತೆಗೆದುಕೊಂಡಿರಿ? ಮದ್ಯ ಮಾರಾಟ ಮಾಡುವ ಉದ್ಯಮಿಗಳ ಮೇಲೆ ನಿಮಗೇಕೆ ಅಷ್ಟೊಂದು ಮೃದುಧೋರಣೆ? ಕೇಜ್ರಿವಾಲ್‌ ಅವರು ಈ ಕುರಿತು ೨೪ ಗಂಟೆಯಲ್ಲಿ ಜನರ ಮುಂದೆ ಬಂದು ಉತ್ತರಿಸಲಿ” ಎಂದು ಸವಾಲು ಹಾಕಿದರು.

Exit mobile version