ಜೈಪುರ್: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕ (ಎನ್ಐಸಿಯು) ಹೆಣ್ಣು ನವಜಾತ ಶಿಶುವೊಂದು (Newborn Dies) ವಾರ್ಮರ್ ಓವರ್‌ಹೀಟ್ ಆದ ಪರಿಣಾಮ ಮೃತಪಟ್ಟ ಘಟನೆ ನಡೆದಿದೆ. ಮಹಾತ್ಮ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಸೇರಿದ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದೆ. ವಾರ್ಮರ್ ಓವರ್ ಹೀಟ್ ಆದ ಪರಿಣಾಮ ಮತ್ತೊಂದು ಮಗು ಕೂಡ ಗಾಯಗೊಂಡಿದೆ.
ಈ ಘಟನೆ ನಡೆಯುತ್ತಿದ್ದಂತೆ ಆಸ್ಪತ್ರೆಯು ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ನರ್ಸ್‌ಗಳನ್ನು ಕೆಲಸದಿಂದ ತೆಗೆದು ಹಾಕಿದೆ. ಈ ಘಟನೆ ಸಂಭವಿಸಿದಾಗ ಈ ಇಬ್ಬರು ನರ್ಸ್‌ಗಳು ಎನ್ಐಸಿಯು ನೋಡಿಕೊಳ್ಳುತ್ತಿದ್ದರು. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು, ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮೃತಪಟ್ಟ ಹೆಣ್ಣು ಶಿಶು ಜನಿಸಿ 21 ದಿನಗಳಷ್ಟೇ ಆಗಿತ್ತು. ಕಡಿಮೆ ತೂಕವಿದ್ದ ಕಾರಣ ಮಗುವನ್ನು ಅಕ್ಟೋಬರ್ 5ರಂದು ಎನ್ಐಸಿಯುಗೆ ಅಡ್ಮಿಟ್ ಮಾಡಲಾಗಿತ್ತು. ಮಂಗಳವಾರ ರಾತ್ರಿ ಹೆಣ್ಣು ಶಿಶುವನ್ನು ವಾರ್ಮರ್‌ನಲ್ಲಿ ಇಡಲಾಗಿತ್ತು. ಬುಧವಾರ ಬೆಳಗಿನ ಹೊತ್ತಿಗೆ ಮಗು ಅಸು ನೀಗಿತ್ತು. ಇದರಿಂದ ರೊಚ್ಚಿಗೆದ್ದ ಶಿಶು ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ತೀವ್ರ ಗದ್ದಲ ಸೃಷ್ಟಿಸಿದರು.
ಇದನ್ನೂ ಓದಿ | Newborn baby | ಮೃತ ನವಜಾತ ಶಿಶುವಿನ ಜತೆ ಆಟವಾಡುತ್ತಿದ್ದ ಮಾನಸಿಕ ಅಸ್ವಸ್ಥೆ