ಹಿಂದಿಯ ಖ್ಯಾತ ಕಾಮಿಡಿ ಶೋ ‘ದಿ ಕಪಿಲ್ ಶರ್ಮಾ ಶೋ (The Kapil Sharma Show)’ದಲ್ಲಿ ಕಳೆದವಾರ ಭಾಗವಹಿಸಿದ್ದ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ (Sudha Murty) ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಿನಿಪ್ರಿಯರಾಗಿರುವ ಸುಧಾಮೂರ್ತಿ ತಮ್ಮ ನೆಚ್ಚಿನ ನಟ ಯಾರು ಎಂಬ ಬಗ್ಗೆಯೂ ತಿಳಿಸಿದ್ದಾರೆ. ‘ನಾನು ನನ್ನ ಯೌವನದ ಕಾಲದಲ್ಲಿ ನಟ ದಿಲೀಪ್ ಕುಮಾರ್ ಬಗ್ಗೆ, ಅವರ ನಟನೆ ಬಗ್ಗೆ ಸಿಕ್ಕಾಪಟೆ ಅಭಿಮಾನ ಇಟ್ಟುಕೊಂಡಿದ್ದು. ಅವರು ಎಂದಿಗೂ ನನ್ನ ನೆಚ್ಚಿನ ನಟ. ಅವರು ಸರ್ವಶ್ರೇಷ್ಠ ಎಂಬುದರಲ್ಲಿ ಎರಡು ಮಾತೇ ಇಲ್ಲ’ ಎಂದು ಸುಧಾಮೂರ್ತಿ ಹೇಳಿದರು. ಅಷ್ಟೇ ಅಲ್ಲ, ಈಗಿನ ನಟರಲ್ಲಿ ದಿಲೀಪ್ ಕುಮಾರ್ಗೆ ಹೊಂದಾಣಿಕೆಯಾಗಬಲ್ಲ ಏಕೈಕ ನಟ ಶಾರುಖ್ಖಾನ್. ತೆರೆಯಮೇಲೆ ಭಾವನೆಗಳನ್ನು ವ್ಯಕ್ತಪಡಿಸಿ, ನಟನೆ ಮಾಡುವಲ್ಲಿ ದಿಲೀಪ್ ಕುಮಾರ್ ಎತ್ತಿದ ಕೈ. ಈ ವಿಚಾರದಲ್ಲಿ ದಿಲೀಪ್ ಅವರ ನಟನೆಗೆ ಮ್ಯಾಚ್ ಮಾಡಲು ಈಗಿನ ಶಾರುಖ್ ಖಾನ್ ಬಳಿ ಮಾತ್ರ ಸಾಧ್ಯ’ ಎಂದು ಸುಧಾಮೂರ್ತಿ ತಿಳಿಸಿದ್ದಾರೆ.
ಹಾಗೇ, 2004ರಲ್ಲಿ ತಾವು ಶಾರುಖ್ ಅಭಿನಯದ ವೀರ್ ಝಾರಾ ಸಿನಿಮಾ ನೋಡಿದ್ದನ್ನು ನೆನಪಿಸಿಕೊಂಡ ಸುಧಾಮೂರ್ತಿ ‘ವೀರ್ ಝಾರಾ ಸಿನಿಮಾ ನೋಡಿದ ಬಳಿಕ ನಾನು ದಿಲೀಪ್ ಕುಮಾರ್ ಅವರನ್ನು ನೆನಪಿಸಿಕೊಂಡಿದ್ದೆ. ದಿಲೀಪ್ ಕುಮಾರ್ ವಯಸ್ಸಿನಲ್ಲಿ ಸಣ್ಣವರಾಗಿದ್ದರೆ, ಅವರೇ ಈ ಸಿನಿಮಾದಲ್ಲಿ ನಟಿಸಬಹುದಿತ್ತು. ಸಿನಿಮಾದಲ್ಲಿ ಶಾರುಖ್ ಖಾನ್ ಮಾಡಿರುವ ಪಾತ್ರವನ್ನು ದಿಲೀಪ್ ಕುಮಾರ್ ಮಾಡಬಹುದಿತ್ತು ಎಂದು ನನ್ನ ಮಗಳ ಬಳಿ ಹೇಳಿಕೊಂಡಿದ್ದೆ’ ಎಂದು ಹೇಳಿದರು. ಹಾಗೇ, ‘ದಿಲೀಪ್ ಕುಮಾರ್ಗೆ ಪರ್ಯಾಯ ಶಾರುಖ್ ಖಾನ್ ಮಾತ್ರ ಎನ್ನುವುದರಲ್ಲಿ ಅನುಮಾನವೇ ಇಲ್ಲ’ ಎಂದು ತಿಳಿಸಿದರು.
ಶಾರುಖ್ ಖಾನ್ಗೆ ವಿಶೇಷವಾದ ವರ್ಚಸ್ಸಿದೆ. ಇದೇ ಕಾರಣಕ್ಕೆ ಅವರು ಕಿಂಗ್ ಆಫ್ ಬಾಲಿವುಡ್ ಎಂಬ ಹೆಸರನ್ನು ಪಡೆದಿದ್ದಾರೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅನೇಕ ದಿಗ್ಗಜ ನಟರ ಪ್ರಭಾವ ಇರುವಾಗಲೇ ಶಾರುಖ್ ಖಾನ್ ಪ್ರಸಿದ್ಧಿ ಪಡೆದವರು. ಶಾರುಖ್ ಖಾನ್ ಅವರು ಬಾಲಿವುಡ್ನ ನಿಜವಾದ ಸ್ಟಾರ್ ಎಂದೇ ಅನೇಕರು ಭಾವಿಸುತ್ತಾರೆ ಎಂದು ಸುಧಾಮೂರ್ತಿ ಹೇಳಿದರು. ಈ ಮೂಲಕ ಅವರು ಶಾರುಖ್ ಖಾನ್ ಅವರ ಪ್ರತಿಭೆಯನ್ನು ಹೊಗಳಿದರು.
ಇದನ್ನೂ ಓದಿ: Narayana Murthy : ನಾಯಕರಿಗೆ ಸರಳ ಜೀವನ ಶೈಲಿ ಅಗತ್ಯ, ಕ್ಯಾಪಿಟಲಿಸಂ ಆಕರ್ಷಕವಾಗಬೇಕು: ನಾರಾಯಣ ಮೂರ್ತಿ
ಕಪಿಲ್ ಶರ್ಮಾ ಶೋನಲ್ಲಿ ಸುಧಾಮೂರ್ತಿ ಅವರ ಜತೆಗೆ ನಿರ್ಮಾಪಕಿ ಗುನೀತ್ ಮೊಂಗಾ ಹಾಗೂ ನಟಿ ರವೀನಾ ಟಂಡನ್ ಕೂಡ ಭಾಗವಹಿಸಿದ್ದರು. ಇದೇ ವೇಳೆ ಅವರು ತಾವು ನಾರಾಯಣ ಮೂರ್ತಿಯವರನ್ನು ಭೇಟಿಯಾಗಿದ್ದು ಹೇಗೆ ಎಂಬಿತ್ಯಾದಿ ವಿಷಯಗಳನ್ನೂ ಹೇಳಿದ್ದರು. “ಪ್ರಸನ್ನ ಅಂತ ನನ್ನ ಫ್ರೆಂಡ್ ಒಬ್ಬರು ಇದ್ದರು. ಅವರ ಸಹೋದ್ಯೋಗಿಯೇ ನಾರಾಯಣಮೂರ್ತಿ. ಅವರು ಪ್ರತಿದಿನ ಒಂದು ಪುಸ್ತಕ ತೆಗೆದುಕೊಳ್ಳುತ್ತಿದ್ದರು. ನಾರಾಯಣಮೂರ್ತಿ ಇಸ್ತಾಂಬುಲ್, ನಾರಾಯಣಮೂರ್ತಿ ಪೇಶಾವರ್ ಎಂಬುದಾಗಿ ಹೇಳುತ್ತಿದ್ದರು. ಆಗ, ನಾರಾಯಣಮೂರ್ತಿ ಅವರೇನಾದರೂ ಇಂಟರ್‌ನ್ಯಾಷನಲ್ ಬಸ್ ಕಂಡಕ್ಟರ್ ಇದ್ದಾರಾ ಎಂಬುದಾಗಿ ಭಾವಿಸಿದ್ದೆ ಎಂದು ಸುಧಾಮೂರ್ತಿ ತಿಳಿಸಿದ್ದಾರೆ.