ಅಯೋಧ್ಯೆ: ಸುಮಾರು 496 ವರ್ಷಗಳಿಂದ (Ram Mandir) ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ (Ram Mandir) ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಇದರೊಂದಿಗೆ ರಾಮಮಂದಿರ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿದೆ. ದೇಶಾದ್ಯಂತ ಸಂತಸದ ಅಲೆ ಎದ್ದಿದೆ.
ಜನವರಿ 22ರಂದು ರಾಮ್ ಲಲ್ಲಾನನ್ನು ಸ್ವಾಗತಿಸಲು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ದೀಪವನ್ನು ಬೆಳಗಿಸಬೇಕು ಮತ್ತು ಈ ದಿನವನ್ನು ತಮ್ಮ ಮನೆಯ ಸಂಭ್ರಮದಿಂದ ಆಚರಿಸಬೇಕು ಎಂದು ಪಿಎಂ ಮೋದಿ ಮನವಿ ಮಾಡಿದ್ದಾರೆ. ಶ್ರೀ ರಾಮ ಮಂದಿರದಲ್ಲಿ ರಾಮ್ ಲಲ್ಲಾನ ಪ್ರಾಣ ಪ್ರತಿಷ್ಠಾಪನೆ ವಿಶೇಷ ಮುಹೂರ್ತವನ್ನು ಹೊಂದಿದೆ. ಅಭಿಜಿತ್ ಮುಹೂರ್ತದಲ್ಲಿ ವಿಗ್ರಹ ಸ್ಥಾಪನೆಯಾಗಲಿದೆ. ಅಲ್ಲದೆ ಮೃಗಶಿರಾ ನಕ್ಷತ್ರ ಇರುತ್ತದೆ. ಮೃಗಶಿರಾ ನಕ್ಷತ್ರಕ್ಕೆ ಚಂದ್ರ ಅಧಿಪತಿ. ಇದು ದೇಶದಲ್ಲಿ ಶಾಂತಿ ಮತ್ತು ಸಾಮರಸ್ಯ ತರುವುದರ ಸೂಚಕ. ಭಗವಾನ್ ರಾಮನನ್ನು ರಾಮ ಚಂದ್ರ ಎಂದೂ ಕರೆಯಲಾಗುತ್ತದೆ ಎನ್ನುವುದು ಗಮನಾರ್ಹ.
ದೀಪ ಮತ್ತು ರಾಮನ ನಡುವೆ ನಂಟೇನು?
ಇದು 14 ವರ್ಷಗಳ ವನವಾಸದ ನಂತರ ರಾಮ ಅಯೋಧ್ಯೆ ರಾಜ್ಯಕ್ಕೆ ಮರಳುತ್ತಾನೆ. ಹಿಂದೂ ಮಹಾಕಾವ್ಯ ರಾಮಾಯಣದ ಪ್ರಕಾರ, ರಾಮ ತನ್ನ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಂದಿಗೆ ನವವಾಸಕ್ಕೆ ತೆರಳಿದ್ದ ವೇಳೆ ಹಲವಾರು ಕಷ್ಟಗಳನ್ನು ಎದುರಿಸಿದ್ದ. ಅದರಲ್ಲಿ ಸೀತೆಯನ್ನು ಅಪಹರಿಸಿದ್ದ ರಾಕ್ಷಸ ರಾಜ ರಾವಣನ ವಿರುದ್ಧದ ಯುದ್ಧ ಪ್ರಮುಖವಾದದ್ದು. ಅಜ್ಞಾನದ ಮೇಲೆ ಸುಜ್ಞಾನದ ವಿಜಯವನ್ನು ರಾಮನು ಅಯೋಧ್ಯೆಗೆ ಮರಳಿದ ನಂತರ ಸ್ಮರಿಸಲಾಗುತ್ತದೆ. ಅದಕ್ಕಾಗಿ ದೀಪಗಳನ್ನು ಉರಿಸಲಾಗುತ್ತದೆ. ರಾಮ ಅಯೋಧ್ಯೆಗೆ ಮರಳಿದಾಗ ಅಲ್ಲಿಯ ಜನರು ದೀಪಗಳನ್ನು ಬೆಳಗಿಸುವ ಮೂಲಕ ಸ್ವಾಗತಿಸಿದ್ದರು. ತಮ್ಮ ಮನೆಗಳನ್ನು ಅಲಂಕರಿಸಿದ್ದರು ಎಂದು ಪುರಾಣಗಳಲ್ಲಿ ಹೇಳಲಾಗಿದೆ.
हमारे प्रभु राम आ गए! 🚩🚩🚩🚩#RamMandirPranPrathistha @myogiadityanath #RamMandir #ayodhya #AyodhyaRamMandir #JaiShreeRam #NarendraModi pic.twitter.com/GtusuoZssL
— Rahul Singh Rajawat (@Rahulsi16973840) January 22, 2024
ಇದನ್ನೂ ಓದಿ : Ayodhya Ram Mandir: ರಾಮ ಮಂತ್ರ ಸಾಮೂಹಿಪಠನಕ್ಕೆ ಜೋಶ್- ಡೈಲಿಹಂಟ್ ಡಿಜಿಟಲ್ ರೂಮ್
ಜನವರಿ 22ರಂದು ಏಕೆ ದೀಪ ಬೆಳಗಿಸಬೇಕು?
ಜನವರಿ 22 ಭಾರತೀಯರ ಪಾಲಿಗೆ ಸಂತೋಷದ ದಿನ. ಹೀಗಾಗಿ ಎಲ್ಲರೂ ತಮ್ಮತಮ್ಮ ಮನೆಗಳಲ್ಲಿ ದೀಪವನ್ನು ಬೆಳಗಿಸುವ ಮೂಲಕ ಸಂಭ್ರಮಿಸಬೇಕು. ಏಕೆಂದರೆ ನಾವು 500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭಗವಾನ್ ರಾಮನನ್ನು ಮತ್ತೆ ಮನೆಗೆ ಸ್ವಾಗತಿಸುತ್ತಿರುವ ಕಾರಣ ದೀಪಗಳನ್ನು ಬೆಳಗಿಸಿ ಪುಣ್ಯ ಪಡೆಯಬೇಕು.
मेरे राम 🥺🙏🚩#RamMandirPranPrathistha pic.twitter.com/zMCQrCpUz5
— Voice (@VoiceOfTruth_11) January 22, 2024
जय जय श्री राम ❤️❤️ 🚩🙏#RamMandirPranPrathistha#राम_का_भव्य_धाम pic.twitter.com/HWbxunUNvR
— Neha Chowdhry🇮🇳 (CSK💛) (@NehaChowdhry27) January 22, 2024
ದೀಪಗಳನ್ನು ಬೆಳಗಿಸಲು ವಾಸ್ತು ಸಲಹೆಗಳು ಹೀಗಿವೆ…
ನೀವು ಭಗವಾನ್ ರಾಮನನ್ನು ಸ್ವಾಗತಿಸಲು ದೀಪ ಬೆಳಗಿಸುವಾಗ ನಿಮ್ಮ ಮನೆಗೆ ಸಮೃದ್ಧಿ, ನೆಮ್ಮದಿ ಮತ್ತು ಅದೃಷ್ಟವನ್ನು ತರಲು ವಾಸ್ತು ಪರಿಣತರು ನೀಡುವ ಸಲಹೆಗಳನ್ನು ಪಾಲಿಸುವುದು ಉತ್ತಮ.
- ಈ ದಿನ ಮಣ್ಣಿನ ದೀಪ ಅಥವಾ ಲೋಹದ ದೀಪವನ್ನು ಬೆಳಗಿಸುವುದು ಸೂಕ್ತ. ಬಳಸಿದ ದೀಪವಾಗಿದ್ದರೆ ಅದನ್ನು ಒಂದು ದಿನ ಮುಂಚಿತವಾಗಿ ನೀರಿನಿಂದ ತೊಳೆದು ಒಣಗಿಸುವುದು ಸೂಕ್ತ.
- ತುಪ್ಪ,, ಎಳ್ಳೆಣ್ಣೆ ಸೇರಿದಂತೆ ಯಾವುದು ಸಾಧ್ಯವೋ ಅದರಿಂದ ದೀಪ ಬೆಳಗಬಹುದು. ತುಪ್ಪದ ದೀಪಗಳನ್ನು ಹೆಚ್ಚು ಬೆಳಗಲು ಸಾಧ್ಯವಾಗದೇ ಹೋದರೂ ಕನಿಷ್ಠ ಪಕ್ಷ ಒಂದು ದೀಪವನ್ನಾದರೂ ಉರಿಸಿ.
- ನಿಮ್ಮ ದೀಪದ ಕೆಳಗೆ ಅಕ್ಕಿ / ಗೋಧಿಯನ್ನು ಇರಿಸಿ ಮತ್ತು ಅದರ ಮೇಲೆ ದೀಪದಲ್ಲಿ ಇರಿಸಿ
- ದೇವಾಲಯದಲ್ಲಿ 5 ದೀಪಗಳನ್ನು, ಮನೆಯ ಪ್ರತಿ ಪ್ರವೇಶದ್ವಾರದಲ್ಲಿ 2 ದೀಪವನ್ನು ಬೆಳಗಿಸಿ ಮತ್ತು ಮನೆಯಾದ್ಯಂತ ಸಾಧ್ಯವಾದಷ್ಟು ದೀಪವನ್ನು ಬೆಳಗಿಸಿ. ನೀವು ದೀಪ ಇಡುವ ಜಾಗದಲ್ಲಿ ರಂಗೋಲಿಯನ್ನು ಬಿಡಿಸಬಹುದು. ಮನೆಯ ಆಗ್ನೇಯ ಮೂಲೆಯಲ್ಲಿ ದೀಪವನ್ನು ಬೆಳಗಿಸಿ ಮತ್ತು ದಕ್ಷಿಣಕ್ಕೆ ಬತ್ತಿಯನ್ನು ಮುಖ ಮಾಡಿ ಮತ್ತು ನಿಮ್ಮ ಪೂರ್ವಜರ ಆಶೀರ್ವಾದವನ್ನು ಪಡೆಯಿರಿ.
- ಈಶಾನ್ಯ ಅಥವಾ ಪೂರ್ವಕ್ಕೆ ಕನಿಷ್ಠ 5 ದೀಪವನ್ನು ಇಟ್ಟು ಕುಟುಂಬಕ್ಕೆ ರಾಮ ಮತ್ತು ಸೀತಾ ಮಾತೆಯ ಆಶೀರ್ವಾದ ಸಿಗುವಂತೆ ಮಾಡಿ.
- ಮನೆಯ ದೇವರ ಕೋಣೆಯಲ್ಲಿ 5 ಬತ್ತಿಗಳಿಂದ ದೀಪವನ್ನು ಬೆಳಗಿಸಬಹುದು ಮತ್ತು ಅದರಲ್ಲಿ ಲವಂಗವನ್ನು ಇರಿಸಿ ಮತ್ತು ಆರೋಗ್ಯ ಮತ್ತು ಜೀವನದಲ್ಲಿ ಸಮೃದ್ಧಿಗಾಗಿ ಭಗವಾನ್ ರಾಮ ಮತ್ತು ಸೀತಾ ಮಾತೆಯ ಆಶೀರ್ವಾದವನ್ನು ಪಡೆಯಬಹುದು.
- ತಲಾ ಒಂದು ಬತ್ತಿ ಇರುವ 27 ಎಳ್ಳೆಣ್ಣೆ ದೀಪ ಬೆಳಗಿಸಬಹುದು ಮತ್ತು ಅದನ್ನು ಉತ್ತರಕ್ಕೆ ಮುಖ ಮಾಡಿ ಇಡಬಹುದು.