Site icon Vistara News

Rahul Gandhi | ರಾಹುಲ್ ಗಾಂಧಿಗೆ ಚಳಿಯಾಗಲ್ಲ ಏಕೆ? ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ

ಲಖನೌ: ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ ಆರಂಭವಾಗಿ 4 ತಿಂಗಳು ಸಂಪೂರ್ಣವಾಗುತ್ತಾ ಬಂತು. ಸೆ.7ರಿಂದಲೂ ಕಾಲ್ನಡಿಗೆಯಲ್ಲೇ ಇರುವ ಸಂಸದ ರಾಹುಲ್ ಗಾಂಧಿ (Rahul Gandhi) ಮಳೆ, ಗಾಳಿ, ಚಳಿ ಎನ್ನದೆಯೇ ನಡೆಯುತ್ತಲೇ ಇದ್ದಾರೆ. ಉತ್ತರ ಭಾರತದಲ್ಲಿ ಚಳಿ ಹೆಚ್ಚಿರುವ ಈ ಸಮಯದಲ್ಲಿ ಕೇವಲ ಟಿ ಶರ್ಟ್-ಪ್ಯಾಂಟ್ ಧರಿಸಿ ನಡೆಯುತ್ತಿರುವ ಅವರಿಗೆ ಚಳಿಯಾಗುವುದಿಲ್ಲವೇ ಎನ್ನುವುದು ಎಲ್ಲರ ಪ್ರಶ್ನೆ. ಇದೀಗ ಆ ಪ್ರಶ್ನೆಗೆ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: Siddheshwar Swamiji | ಸಿದ್ದೇಶ್ವರ ಶ್ರೀ ನಿಧನಕ್ಕೆ ರಾಹುಲ್‌ ಗಾಂಧಿ, ಸುರ್ಜೇವಾಲ ಸಂತಾ


ಭಾರತ್ ಜೋಡೋ ಯಾತ್ರೆಯು ಮಂಗಳವಾರ ಉತ್ತರ ಪ್ರದೇಶಕ್ಕೆ ಪ್ರವೇಶಿಸಿದೆ. ಈ ವೇಳೆ ಲೋನಿ ಗಡಿ ಭಾಗದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಿಯಾಂಕಾ, ರಾಹುಲ್‌ಗೆ ಚಳಿಯಾಗದಿರುವ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. “ರಾಹುಲ್ ಅವರಿಗೆ ಚಳಿ, ಮಳೆ ತಾಗುತ್ತಿಲ್ಲ. ಏಕೆಂದರೆ ಅವರು ಸತ್ಯದ ಶೀಲ್ಡ್ ಧರಿಸಿದ್ದಾರೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇದನ್ನೂ ಓದಿ: Rahul Gandhi | ಉಕ್ರೇನ್‌ ಪರಿಸ್ಥಿತಿಯೇ ಭಾರತಕ್ಕೂ ಬರುತ್ತಾ? ಆಘಾತಕಾರಿ ಹೇಳಿಕೆ ನೀಡಿದ ರಾಹುಲ್‌ ಗಾಂಧಿ


“ಅದಾನಿ ಮತ್ತು ಅಂಬಾನಿ ಎಲ್ಲರನ್ನೂ ಕೊಂಡುಕೊಂಡಿದ್ದಾರೆ. ಆದರೆ ನನ್ನ ಅಣ್ಣನನ್ನು ಕೊಳ್ಳುವುದಕ್ಕೆ ಸಾಧ್ಯವಿಲ್ಲ. ಏಕೆಂದರೆ ನನ್ನ ಅಣ್ಣ ಸತ್ಯಕ್ಕಾಗಿ ನಿಂತವನು. ಸರ್ಕಾರ ತನ್ನೆಲ್ಲ ಬಲವನ್ನು ಬಳಸಿಕೊಂಡು, ಕೋಟಿ ಕೋಟಿ ಹಣ ಸುರಿದು ರಾಹುಲ್ ಅವರ ಹೆಸರನ್ನು ಹಾಳು ಮಾಡುವುದಕ್ಕೆ ನೋಡಿತು. ಆದರೆ ನನ್ನಣ್ಣ ಒಬ್ಬ ಯೋಧನ ರೀತಿಯಲ್ಲಿ ನಿಂತು ಸತ್ಯದ ಹಾದಿಯಿಂದ ಕಿಂಚಿತ್ತೂ ಕದಲಲಿಲ್ಲ” ಎಂದಿದ್ದಾರೆ ಪ್ರಿಯಾಂಕಾ.
ಸೆಪ್ಟೆಂಬರ್ 7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯು ಈಗಾಗಲೇ 3,200 ಕಿ.ಮೀ. ನಡಿಗೆಯನ್ನು ಸಂಪೂರ್ಣಗೊಳಿಸಿದೆ. ಈ ಯಾತ್ರೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯಾಗಲಿದೆ.

Exit mobile version