Site icon Vistara News

Amrit Mahotsav | ಕೆಂಪು ಕೋಟೆ ಮೇಲೆ ಮೊದಲ ಬಾರಿ ಬುಲೆಟ್‌ಪ್ರೂಫ್‌ ಶೀಲ್ಡ್‌ನಲ್ಲಿ ಮೋದಿ ಭಾಷಣ?

Narendra Modi

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ (Amrit Mahotsav)ಆಚರಣೆಗೆ ದೆಹಲಿ ಸೇರಿ ದೇಶಾದ್ಯಂತ ಸಿದ್ಧತೆ ನಡೆದಿದೆ. ದೆಹಲಿಯಲ್ಲಿರುವ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭಾಷಣ ಮಾಡಲಿದ್ದು, ಈ ವೇಳೆ ಇದೇ ಮೊದಲ ಬಾರಿಗೆ ಬುಲೆಟ್‌ಪ್ರೂಫ್‌ ಗಾಜಿನಿಂದ ತಯಾರಿಸಿದ ಬಾಕ್ಸ್‌ನಲ್ಲಿ ನಿಂತು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ ಅವರು ೨೦೧೪ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕದಿಂದ ಹಿಡಿದು ಇದುವರೆಗೆ ಒಮ್ಮೆಯೂ ಬುಲೆಟ್‌ಪ್ರೂಫ್‌ ಶೀಲ್ಡ್‌ ಬಳಸಿರಲಿಲ್ಲ. ಆದರೆ, ಈ ಬಾರಿ ಭದ್ರತಾ ದೃಷ್ಟಿಯಿಂದಾಗಿ ಶೀಲ್ಡ್‌ನಲ್ಲಿ ನಿಂತು ಭಾಷಣ ಮಾಡಲಿದ್ದಾರೆ. ಈಗಾಗಲೇ ಕೆಂಪು ಕೋಟೆ ಮೇಲೆ ಬುಲೆಟ್‌ಪ್ರೂಫ್‌ ಗ್ಲಾಸ್‌ ಇರುವ ಬಾಕ್ಸ್‌ ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶೀಲ್ಡ್‌ ಏಕೆ ಬಳಕೆ?

ಇಂದಿರಾ ಗಾಂಧಿಯವರನ್ನು ಹತ್ಯೆಗೈದ ಬಳಿಕ ಅಂದರೆ, ೧೯೮೫ರಿಂದ ಕೆಂಪು ಕೋಟೆ ಮೇಲೆ ಬುಲೆಟ್‌ಪ್ರೂಫ್‌ ಶೀಲ್ಡ್‌ನಲ್ಲಿ ನಿಂತು ಭಾಷಣ ಮಾಡುವ ಸಂಪ್ರದಾಯ ಆರಂಭವಾಯಿತು. ರಾಜೀವ್‌ ಗಾಂಧಿ ಅವರು ಇದಕ್ಕೆ ಮೊದಲ ಬಾರಿಗೆ ನಾಂದಿ ಹಾಡಿದ್ದರು. ೧೯೮೫ರಿಂದ ೨೦೧೩ರವರೆಗಿನ ಎಲ್ಲ ಪ್ರಧಾನಿಗಳೂ ಬುಲೆಟ್‌ಪ್ರೂಫ್‌ ಶೀಲ್ಡ್‌ನಲ್ಲಿಯೇ ಭಾಷಣ ಮಾಡಿದ್ದರು. ಮೋದಿ ಅವರು ೨೦೧೪ರಲ್ಲಿ ಈ ಸಂಪ್ರದಾಯವನ್ನು ಮುರಿದಿದ್ದರು.

ಇದನ್ನೂ ಓದಿ | ಸ್ವಾತಂತ್ರ್ಯೋತ್ಸವ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಗುಂಪುಗೂಡುವಂತಿಲ್ಲ: ಕೇಂದ್ರ ಸರ್ಕಾರದ ಸೂಚನೆ

Exit mobile version