ನವದೆಹಲಿ: ಬಾಲಿವುಡ್‌ನ ದಂತಕತೆ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಅನುಮತಿ ಇಲ್ಲದೇ ಅವರ ಫೋಟೋ, ಹೆಸರು ಮತ್ತು ಧ್ವನಿಯನ್ನು ಯಾರೂ ಬಳಸಿಕೊಳ್ಳುವಂತಿಲ್ಲ. ಈ ಕುರಿತು ಬಚ್ಚನ್ ಅವರು ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು, ಈ ಆದೇಶವನ್ನು ಮಾಡಿದೆ.
ಒಬ್ಬ ಸೆಲೆಬ್ರಿಟಿಯಾಗಿರುವ ಅಮಿತಾಭ್ ಬಚ್ಚನ್ ಅವರ ಪಬ್ಲಿಸಿಟಿ ಹಕ್ಕುಗಳನ್ನು ದಿಲ್ಲಿ ಹೈಕೋರ್ಟ್ ಮಾನ್ಯ ಮಾಡಿದೆ. ಒಂದು ವೇಳೆ ಅವರಿಗೆ ರಕ್ಷಣೆ ಒದಗಿಸದಿದ್ದರೆ ದುರಸ್ತಿ ಮಾಡಲಾರದಷ್ಟು ನಷ್ಟ ಬಚ್ಚನ್ ಅವರಿಗೆ ಆಗಲಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ಹೈಕೋರ್ಟ್, ಟೆಲಿಕಾಂ ಸಚಿವಾಲಯ ಹಾಗೂ ಇತರ ಸಂಸ್ಥೆಗಳಿಗೆ ಬಚ್ಚನ್‌ಗೆ ಸಂಬಂಧಿಸಿದ ಕಂಟೆಂಟ್ ತೆಗೆದು ಹಾಕುವಂತೆ ಸೂಚಿಸಿದೆ.
ಖ್ಯಾತ ನ್ಯಾಯವಾದಿ ಹರೀಶ್ ಸಾಳ್ವೆ ಅವರು ಅಮಿತಾಭ್ ಬಚ್ಚನ್ ಅವರ ಪರವಾಗಿ ವಾದ ಮಂಡಿಸಿ, ಬಚ್ಚನ್ ಅವರ ಭಾವಚಿತ್ರಗಳು, ಧ್ವನಿ ಮತ್ತು ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಲವು ಉದಾಹರಣೆಗಳನ್ನು ನ್ಯಾಯಾಲಯದ ಮುಂದೆ ಸಾಕ್ಷಾಧಾರಗಳ ಸಮೇತ ಸಾದರಪಡಿಸಿದರು. ಹಲವರು ಲಾಟರಿ, ಬಟ್ಟೆಗಳು, ಪೋಸ್ಟರ್‌ಗಳು ಸೇರಿದಂತೆ ಅನೇಕ ರೀತಿಯಲ್ಲಿ ಬಚ್ಚನ್ ಹೆಸರು, ಫೋಟೋ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲವರು ಬಚ್ಚನ್ ಹೆಸರಿನಲ್ಲಿ ವೆಬ್‌ಸೈಟ್ ಕೂಡ ತೆರೆದಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಿಳಿಸಿದರು.
ಇದನ್ನೂ ಓದಿ | Amitabh Bachchan | ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ ಕಾಲಿಗೆ ಪೆಟ್ಟು: ತೀವ್ರ ರಕ್ತಸ್ರಾವ