Site icon Vistara News

ಪತಿಗೆ ಬರ್ತ್​ ಡೇ ವಿಶ್​ ಮಾಡಲು ಬಂದ ಪತ್ನಿಗೆ ಆಘಾತ; ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Train Track

ಮಕ್ಕಳೊಂದಿಗೆ ಹಳ್ಳಿಯಲ್ಲಿದ್ದ ಮಹಿಳೆ, ಪತಿಯ ಬರ್ತ್​ ಡೇ ದಿನ ಆತನಿಗೆ ವಿಶ್​​ ಮಾಡಲೆಂದು ಪಟ್ಟಣದ ಮನೆಗೆ ಬಂದು, ಕೆಲವೇ ಹೊತ್ತಲ್ಲಿ ಇಬ್ಬರೂ ಮಕ್ಕಳೊಂದಿಗೆ ಆತ್ಮಹತ್ಯೆ (Woman Suicide) ಮಾಡಿಕೊಂಡಿದ್ದಾರೆ. ರಾಜಸ್ಥಾನದ ಜೋಧ್​ಪುರದಲ್ಲಿ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಗೂಡ್ಸ್​ ರೈಲಿನ ಎದುರು ಹಾರಿ ಮೃತಪಟ್ಟಿದ್ದಾರೆ. ಪತಿ ಇನ್ನೊಬ್ಬಳು ಮಹಿಳೆಯ ಸಹವಾಸಕ್ಕೆ (Illicit relationship) ಬಿದ್ದಿದ್ದೇ ಪತ್ನಿಯ ದುಃಖ-ಹತಾಶೆ ಮತ್ತು ಸಾವಿಗೆ ಕಾರಣ.

ಇಲ್ಲಿ ಮಹಿಳೆಯ ಪತಿ ಕೆಲಸದ ಕಾರಣಕ್ಕೆ ಜೋಧ್​ಪುರದಲ್ಲಿ ಮನೆ ಮಾಡಿಕೊಂಡು ಇದ್ದ. ಪತ್ನಿ ಮಕ್ಕಳನ್ನು ಇಟ್ಟುಕೊಂಡು ಊರಲ್ಲೇ ಇದ್ದಳು. ಈಗೆರಡು ದಿನಗಳ ಹಿಂದೆ ಆತನ ಬರ್ತ್​ ಡೇ ಇತ್ತು. ಈಕೆ ತನ್ನ ಗಂಡನಿಗೆ ಹುಟ್ಟುಹಬ್ಬಕ್ಕೆ ವಿಶ್​ ಮಾಡಲೆಂದು ಫೋನ್ ಮಾಡಿದ್ದಾರೆ. ಆದರೆ ಎರಡು ಮೂರು ಬಾರಿ ಕರೆ ಮಾಡಿದರೂ ಅವನು ಸ್ವೀಕರಿಸಲಿಲ್ಲ. ಹೀಗಾಗಿ ಆಕೆ ಮಕ್ಕಳನ್ನು ಕರೆದುಕೊಂಡು ಸೀದಾ ತನ್ನ ಪತಿಯಿದ್ದಲ್ಲಿಗೇ ಬಂದಿದ್ದಾರೆ. ಹಾಗೆ ಬಂದಾಗ ಅಕ್ಷರಶಃ ಶಾಕ್ ಕಾದಿತ್ತು. ಪತಿಯಾದವನು ಪರಸ್ತ್ರೀ ಸಂಗದಲ್ಲಿ ಇದ್ದ. ಅವನ ಬರ್ತ್​ ಡೇ ಆಚರಣೆಗಾಗಿ ಮನೆಯೆಲ್ಲ ಸಿಂಗರಿಸಲ್ಪಟ್ಟಿತ್ತು.

ಇದನ್ನೂ ಓದಿ: Suicide Case: ಪತಿಯ ಅನೈತಿಕ ಸಂಬಂಧದಿಂದ ಮನನೊಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಪತ್ನಿ ಮೊಬೈಲ್ ಫೋನ್ ತೆಗೆದು ಇಬ್ಬರನ್ನೂ ವಿಡಿಯೊ ಮಾಡಿದ್ದಾಳೆ. ಬಾಯಿಗೆ ಬಂದಂತೆ ಬೈದಿದ್ದಾಳೆ. ತಕ್ಷಣವೇ ವಿಡಿಯೊವನ್ನು ಪತಿಯ ಕಡೆಯ ಎಲ್ಲ ಸಂಬಂಧಿಗಳಿಗೂ, ತನ್ನ ಮನೆಯವರಿಗೂ ಕಳಿಸಿದ್ದಾಳೆ. ಸಿಟ್ಟು-ಬೇಸರ-ನೋವಿನಿಂದ ಅಲ್ಲಿಂದ ಹೊರಟು, ಬಸ್​ ಹತ್ತಿದ್ದಾಳೆ. ಹೀಗೆ ಹೋದವಳು ಮಾರ್ಗ ಮಧ್ಯೆಯೇ ಒಂದು ಕಡೆ ಬಸ್​​ನಿಂದ ಇಳಿದು, ಸಮೀಪದಲ್ಲಿರುವ ರೈಲ್ವೆ ಹಳಿ ಬಳಿ ಹೋಗಿ, ಅಲ್ಲಿ ಬರುತ್ತಿದ್ದ ಗೂಡ್ಸ್ ರೈಲಿನ ಎದುರು, ಇಬ್ಬರು ಮಕ್ಕಳ ಕೈ ಹಿಡಿದುಕೊಂಡು ಜಂಪ್​ ಮಾಡಿದ್ದಾಳೆ. ಆ ಮೂವರ ಪ್ರಾಣವೂ ಹೋಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Exit mobile version